ಕುಕ್ಕೆಯ ಸುಬ್ರಹ್ಮಣ್ಯ ಪೂಜೆಯ ವರ ಪ್ರಸಾದ ಸ್ಟಾರ್ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪೋಷಕರಾಗಿದ್ದಾರೆ. ಕತ್ರಿನಾ ಕೈಫ್ ನವೆಂಬರ್ 07ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಇವರಿಗೆ ಮೊದಲ ಮಗು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು 2021 ರಲ್ಲಿ ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಕತ್ರಿನಾ ಕೈಫ್, ತಾವು ಗರ್ಭಿಣಿ ಆಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಜೋಡಿಗೆ ಮುದ್ದಾದ ಗಂಡು ಮಗು ಜನಿಸಿದೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಿಗೆ ಮದುವೆಯಾದ ಕೆಲ ವರ್ಷ ಮಕ್ಕಳಾಗಿರಲಿಲ್ಲ. ಹೀಗಾಗಿ ಕತ್ರಿನಾ ಕೈಫ್ ತಿಂಗಳುಗಳ ಹಿಂದೆ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಸಂತಾನ ಪ್ರಾಪ್ತಿಗಾಗಿ ಬೇಡಿಕೊಂಡಿದ್ದರು. ಅದಾದ ಕೆಲವೇ ತಿಂಗಳಲ್ಲಿ ಕತ್ರಿನಾ ಕೈಫ್ ಅವರು ತಾವು ಗರ್ಭಿಣಿ ಆಗಿರುವ ಸಂಗತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇದೀಗ ಈ ದಂಪತಿಗೆ ಗಂಡು ಮಗು ಜನಿಸಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರುಗಳು ಕೆಲ ಸಮಯ ಪ್ರೀತಿಸಿ 2021 ರಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಕತ್ರಿನಾ ಕೈಫ್, ವಯಸ್ಸಿನಲ್ಲಿ ಕತ್ರಿನಾಗಿಂತಲೂ ಹೆಚ್ಚಿದ್ದರೂ ಸಹ ಪರಸ್ಪರ ಪ್ರೀತಿಸಿ, ಕುಟುಂಬದವರ ಸಮ್ಮತಿ, ಆಶೀರ್ವಾದದೊಂದಿಗೆ ಈ ಜೋಡಿ ವಿವಾಹವಾದರು.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಲವು ಐತಿಹ್ಯಗಳನ್ನು ಹೊಂದಿರುವ ದೇವಾಲಯ. ಇಲ್ಲಿ ಈಶ್ವರನ ಪುತ್ರ ಷಣ್ಮುಖನನ್ನು ನಾಗಸ್ವರೂಪದಲ್ಲಿ ಸುಬ್ರಹ್ಮಣ್ಯ ಹೆಸರಿನಿಂದ ಆರಾಧಿಸಲಾಗುತ್ತದೆ. ಐದು ಸಾವಿರ ವರ್ಷಗಳ ಐತಿಹ್ಯ ಈ ದೇವಾಲಯಕ್ಕೆ ಇದೆ ಎನ್ನಲಾಗುತ್ತದೆ. ಇಲ್ಲಿ ಸರ್ಪ ಸಂಸ್ಕಾರ, ದೋಷ ಪರಿಹಾರಗಳಿಗಾಗಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.






















