ಮಂಗಳೂರು: ಸರಕಾರಿ ಜಾಗದಲ್ಲಿ,ಜನವಸತಿ ಪ್ರದೇಶದಲ್ಲಿರುವ ಅಕೇಶಿಯಾ ಮರಗಳನ್ನು ತೆರವು ಮಾಡಬೇಕು ,ಈ ಮರಗಳಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತಿದೆ ಈ ಕಾರಣಕ್ಕೆ ಮರಗಳ ತೆರವಿಗೆ ಅರಣ್ಯ ಇಲಾಖೆಗೆ ಆದೇಶ ನೀಡಬೇಕು ಎಂದುಶಾಸಕ ಅಶೋಕ್ ರೈ ಅವರು ಜಿಪಂ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಆಗ್ರಹಿಸಿದರು.
ಆರ್ಯಾಪು ಗ್ರಾಮದಲ್ಲಿ ಸುಮಾರು 15 ಎಕ್ರೆ ಜಾಗ ಸರಕಾರಿ ಭೂಮಿಯಲ್ಲಿ ಅಕೇಶಿಯಾ ಗಿಡಗಳಿವೆ. ಈ ವ್ಯಾಪ್ತಿಯ ಸುತ್ತಲೂ ಮನೆಗಳಿವೆ ,ಅಕೇಶಿಯಾ ಮರ ಹೂ ಬಿಡುವ ಸಮಯದಲ್ಲಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದು ಅಧ್ಯಕ್ಷರ ಗಮನ ಸೆಳೆದರು.
ಅಕೇಶಿಯಾ ಮರಗಳನ್ನು ತೆರವುಮಾಡುವ ವಿಚಾರದಲ್ಲಿ ಸುಪ್ರಿಂ ಆದೇಶವೂ ಇದ್ದು ಅದರ ಪ್ರಕಾರ ಮರಗಳನ್ನು ತೆರವು ಮಾಡಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಗೆ ತಿಳಿಸಿದರು.
ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ಸರಕಾರದಿಂದ 9 ಕೋಟಿ ಅನುದಾನ ಮಂಜೂರಾಗಿದೆ. ಮುಂಡೂರಿನಲ್ಲಿ ನಿಗಧಿ ಮಾಡಿದ ಜಾಗ ಡೀಮ್ಡ್ ಫಾರೆಸ್ಡ್ ಎಂದು ಸಾಮಾಜಿಕ ಅರಣ್ಯ ಇಲಾಖೆ ವರದಿ ಕಳಿಸಿದೆ. ಇಲಾಖೆಯಿಂದ ಎನ್ ಒ ಸಿ ಸಿಕ್ಕಿಲ್ಲ ಯಾಕೆ ಹೀಗೆ ಮಾಡ್ತಾರೆ? ಪುತ್ತೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ನಾನು,ನೀವು ಎಷ್ಟು ಪ್ರಯತ್ನಪಟ್ಟಿದ್ದೀವಿ. ಸಾಮಾಜಿಕ ಅರಣ್ಯ ಇಲಾಖೆಯ ವರು ಆ ಜಾಗದಲ್ಲಿ ನಾಲ್ಕುಮರ ಇದೆ ಎಂದು ದೊಡ್ಡ ಯೋಜನೆಯನ್ನು ಬಿಟ್ಟುಬಿಡಬೇಕಾ ಎಂದು ಶಾಸಕರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರಾದ ಸಚಿವ ದಿನೇಶ್ ಗುಂಡೂರಾವ್ ರವರು ಮುಂಡೂರಿನಲ್ಲಿ ನಿಗಧಿತ ಜಾಗದಲ್ಲಿ ಆರ್ ಟಿ ಒ ಟ್ರ್ಯಾಕ್ ನಿರ್ಮಾಣಕ್ಕೆ ಎನ್ ಒ ಸಿ ನೀಡಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.





















