ವಿಟ್ಲ : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು, ವಿಟ್ಲ ಘಟಕ ಇದರ ವತಿಯಿಂದ ಪುತ್ತಿಲ ಪರಿವಾರ ದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಇವರ ಜನ್ಮದಿನದ ಅಂಗವಾಗಿ ವಿಟ್ಲದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಜಯರಾಮ ಬಲ್ಲಾಳ, ಶ್ರೀಕಂಠ ವರ್ಮ, ಪುತ್ತಿಲ ಪರಿವಾರದ ಶ್ರೀಕೃಷ್ಣ ವಕೀಲರು, ರವಿಶಂಕರ್, ರಘುರಾಮ ಶೆಟ್ಟಿ, ವಿನೋದ್, ಅನಂತ ಪ್ರಸಾದ್, ಶರತ್ ಎನ್ ಎಸ್. ಕುಶಾಲಪ್ಪ, ಗಿರಿಯಪ್ಪ. ಗೌಡ ಬಸವನಗುಡಿ ಮತ್ತಿತರರು ಉಪಸ್ಥಿತರಿದ್ದರು.





















