ಪುತ್ತೂರು: ಭಾರತದ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮಶತಾಬ್ದಿಯ ಅಂಗವಾಗಿ ನ.19ರಂದು ಪುತ್ತೂರಿನ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ಅಳವಡಿಸಿದ ಬೃಹತ್ ಪೆಂಡಾಲ್‌ನಲ್ಲಿ ಅಟಲ್ ವಿರಾಸತ್ ಕಾರ್ಯಕ್ರಮ ಸಮಿತಿ ಸಂಚಾಲಕ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ವಾಜಪೇಯಿ ಜನ್ಮಶತಾಬ್ದಿ ಸಹಸ್ರಸಹಸ್ರ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು, ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಬೆಳಿಗ್ಗೆ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ರವರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ಅಳವಡಿಸಿದ ಬೃಹತ್ ಪೆಂಡಾಲ್‌ನಲ್ಲಿ ಸಮಾವೇಶಗೊಂಡಿತು. ವೇದಿಕೆಯಲ್ಲಿ ಉದ್ಘಾಟನೆಯ ಬಳಿಕ ಉದ್ಘಾಟನೆಯ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಬಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿಯ ಅಟಲ್ ವಿರಾಸತ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ ದೇಶದ ಮಾಜಿ ಪ್ರಧಾನಿ ಅಟಲ್ ಜಿ. ಅವರು ಒಂದು ಪ್ರೇರಣೆ, ಕವಿಹೃದಯ, ಬರಹಗಾರ, ಅಜಾತಶತ್ರು, ಅಪ್ಪಟ ದೇಶಭಕ್ತ ಎಂಬುದು ನಮಗೆ ನೆನಪಾಗುತ್ತದೆ. ಅವರು ಕಟ್ಟಿರುವ ಬಿಜೆಪಿ ಪಕ್ಷದಲ್ಲಿ ನಾವೆಲ್ಲ ಕಾರ್ಯಕರ್ತರಾಗಿ ಕುಳಿತ್ತಿದ್ದೇವೆ ಎಂದರೆ ನಮಗೆಲ್ಲ ಹೆಮ್ಮೆಯ ವಿಚಾರ. ಅಟಲ್ ಜಿ ಅವರು ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡಿದ್ದಾರೆ? ಕಾರ್ಯಕರ್ತರಿಗೆ ಹೇಗೆ ಪ್ರೇರಣೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಪಕ್ಷದ ಕಾರ್ಯಕರ್ತನಿಗೆ ಯಾವ ರೀತಿ ಗೌರವ ಕೊಡಬೇಕೆಂಬುದನ್ನು ಅಟಲ್ ಜಿ ಅವರಿಂದ ಕಲಿಯಬೇಕು ಎಂದರು. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ತನ್ನ ಸ್ವಂತ ಶಕ್ತಿಯಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಕಾರ್ಯಕರ್ತರು ಕನಸು ಕಾಣುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಎಲ್ಲಾ ನಾಯಕರು ಒಟ್ಟಾಗಿ, ಒಂದಾಗಿ ಪಕ್ಷವನ್ನು ಸಂಘಟನೆ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ. ಹಾಗಾಗಿ ಪುತ್ತೂರಿನಲ್ಲಿ ಯಾವ ರೀತಿಯಲ್ಲಿ ಅಟಲ್ ಜಿ ಅವರ ಜನ್ಮಶತಾಬ್ಬಿಯನ್ನು ಆಚರಣೆ ಮಾಡುತ್ತಿದ್ದೇವೆಯೋ ಅದೇ ರೀತಿ ಮುಂದೆ ಬರುವ ಯಾವುದೇ ಚುನಾವಣೆ ಇರಲಿ ರಾಜ್ಯದಲ್ಲಿ ಬಿಜೆಪಿ ತನ್ನ ಸ್ವಂತ ಶಕ್ತಿಯ ಮೇಲೆ ಅಽಕಾರಕ್ಕೆ ಬರಬೇಕಾದರೆ ಪುತ್ತೂರಿನಲ್ಲಿ ಮತ್ತೊಮ್ಮೆ ಬಿಜೆಪಿಯ ಕಮಲವನ್ನು ಅರಳಿಸುವ ಕೆಲಸ ನಾವು ನೀವು ಸೇರಿ ಮಾಡಬೇಕಾಗಿದೆ. ನಾವೆಲ್ಲ ಕಾರ್ಯಕರ್ತರು ನಮ್ಮ ವ್ಯತ್ಯಾಸಗಳನ್ನು ಮರೆತು ಪಕ್ಷದ ಮುಖಂಡರು ತಮ್ಮ ಎಲ್ಲಾ ವೈಮನಸ್ಸನ್ನು ಬದಿಗಿಟ್ಟು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಗೆಲುವು ಕಂಡಿದ್ದೇ ಆದರೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದ ಅವರು ರಾಜ್ಯಕ್ಕೆ ಸಂಘಟನೆಯ ಶಕ್ತಿ ಕೊಟ್ಟದ್ದು ಕರಾವಳಿ. ರಾಜ್ಯದಲ್ಲಿ ಕಾರ್ಯಕರ್ತನಿಗೆ ಪ್ರೇರಣೆ ಸಿಗಬೇಕಾದರೆ ಅದು ಕರಾವಳಿ ಭಾಗದ ಕಾರ್ಯಕರ್ತರಿಂದ ಸಿಗುತ್ತದೆ. ಇದನ್ನು ಉತ್ಪ್ರೇಕ್ಷೆಯಾಗಿ ಮಾತನಾಡುವುದಲ್ಲ. ನನ್ನ ತಂದೆಯಯವರಾದ ಬಿ.ಎಸ್ ಯಡಿಯೂರಪ್ಪರವರಿಗೆ ಅವರ ರಾಜಕೀಯ ಜೀವನದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆತ್ಮೀಯ ಸಂಬಂಧವಿತ್ತು. ಇವತ್ತು ರಾಜ್ಯದ ಕಾರ್ಯಕರ್ತರು ಹೆಮ್ಮೆಯಿಂದ ತಲೆ ಎತ್ತಿ ಓಡಾಡಬೇಕೆಂಬ ನಿಟ್ಟಿನಲಿ ಪ್ರತಿe ಮಾಡಿ ರಾಜ್ಯಾದ್ಯಂತ ಪಕ್ಷ ಸಂಘಟನೆಯ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ವಿರುದ್ಧ ಅಪಪ್ರಚಾರ ಮಾಡಿ ರಾಜ್ಯದ ಜನತೆಗೆ ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಬಡವರಿಗೆ ನೆಮ್ಮದಿಯಿಲ್ಲ. ಕಬ್ಬು ಬೆಳೆಗಾರರು, ಮೆಕ್ಕೆ ಜೋಳ ಬೆಳೆಗಾರರು ಸಂಕಷ್ಟದಲ್ಲಿದ್ಧಾರೆ. ಆದರೆ ರಾಜ್ಯ ಸರಕಾರ ರೈತರನ್ನು ಮರೆತಿದೆ. ಹಿಂದು ಕಾರ್ಯಕರ್ತರ ಮೇಲೆ ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಅವರ ಅಟ್ಟಹಾಸವನ್ನು ಮೆಟ್ಟಿನಿಲ್ಲುವ ಕೆಲಸವನ್ನು ನಾವು ನೀವು ಸೇರಿ ಮಾಡಬೇಕಾಗಿದೆ. ಹಿಂದು ವಿರೋಽ ಕಾಂಗ್ರೆಸ್ ಪಕ್ಷವನ್ನು ಬುಡಸಮೇತ ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಟಲ್ ಜಿ ಅವರ ಜನ್ಮಶತಾಬ್ದಿಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಂಕಲ್ಪ ಮಾಡಬೇಕಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ ರಾಜಕಾರಣದಲ್ಲಿ ಸಂಬಂಧ, ಪ್ರೀತಿ ವಿಶ್ವಾಸ ಬೇಕೆಂದು ಹೇಳಿದವರು ಅಟಲ್ ಬಿಹಾರಿ ವಾಜಪೇಯಿ ಅವರು. ಬಂಗ್ಲಾದೇಶದ ಯುದ್ಧದಲ್ಲಿ ಇಂದಿರಾಗಾಂಽಯವರ ಪ್ರಬಲ ತೀರ್ಮಾನಕ್ಕೆ ಅವರನ್ನು ಹೊಗಳಿದರು. ಅದೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಹಿತಾಶಕ್ತಿಗೆ ಯಾರೆ ಕೆಲಸ ಮಾಡಲಿ ನಾನು ನಿಮ್ಮೊಂದಿಗೆ ಇದ್ದೇನೆ. ಆದರೆ ದೇಶದ ಮೇಲೆ ಸ್ವಾರ್ಥ ಸಾಧನೆಯ ರಾಜನೀತಿ ಮಾಡಿದಾಗ ನಾನು ನಿಮ್ಮ ಪರವಾಗಿ ಇಲ್ಲ ಎಂದು ತೋರಿಸಿಕೊಟ್ಟರು. ಅವರು ಮಾಡಿದ ಎಲ್ಲಾ ಕೆಲಸಗಳು ಒಂದು ರೀತಿಯಲ್ಲಿ ನಮಗೆ ಪ್ರಾಯೋಗಿಕವಾಗಿದೆ. ಡೋಂಗಿ ರಾಜಕಾರಣಕ್ಕೆ ಅಸ್ಪದ ಕೊಡದಿರುವುದನ್ನು ನಾವು ಕಂಡಿದ್ದೇವೆ. ಅಟಲ್ ಬಿಹಾರಿ ವಾಜಪೇಯಿ ಆಗಲು ಯಾರಿಗೂ ಸಾಧ್ಯವಿಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿ ಏನೆಲ್ಲ ಮಾಡಿದ್ದಾರೋ ಅದರ ಒಂದು ಅಂಶ ನಮಗೂ ಮಾಡಲು ಸಾಧ್ಯ. ನಾವು ಅದನ್ನು ಮಾಡಿದರೆ ನಮ್ಮ ಪಕ್ಷ ಶಕ್ತಿ ಶಾಲಿಯಾಗುತ್ತದೆ ಎಂದು ಅವರು ಅಟಲ್ ಜಿ ಅವರ ನೂರನೇ ವರ್ಷದ ವರ್ಷಾಚರಣೆಯ ಉತ್ಸಾಹದಲ್ಲಿ ಕಾರ್ಯರ್ಕರು ಕಳೆದು ಹೋದ ಪುತ್ತೂರನ್ನು ಕರೆ ತರಲು ಇದು ವೇದಿಕೆಯಾಗಲಿ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕಾರಣ ಹೇಗಿತ್ತು ಎಂದರೆ ಕಾಂಗ್ರೆಸ್ ನಾಯಕರ ಮನೆಯಲ್ಲೂ ವಾಜಪೇಯಿ ಭಾವಚಿತ್ರ ಇತ್ತು. ಹಾಗಾಗಿ ಅವರು ಅಜಾತ ಶತ್ರು ಆಗಿದ್ದರು. ದೇಶದ ಪರಿವರ್ತನೆ, ನಾಯಕತ್ವದಲ್ಲಿ ಪರಿವರ್ತನೆ ಅಟಲ್ ಜಿ ಪಾತ್ರ ಮಹತ್ವದ್ದು, ಈ ದೇಶ ಭ್ರಷ್ಟಾಚಾರ, ಸಾಲಗಾರ ರಾಷ್ಟ್ರ ಆಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ದೇಶವನ್ನು ಸಾಲ ಮುಕ್ತ ಮಾಡಿದರು. ಕಾರ್ಗಿಲ್ ವಿಜಯೋತ್ಸವ, ಗ್ರಾಮ ಸಡಕ್, ಹಳ್ಳಿಗಳಲ್ಲಿ ಸರ್ವಶಿಕ್ಷಣ ಅಭಿಯಾನ ಮಾಡುವ ಜೊತೆಗೆ ಪಕ್ಷದ ವಿಚಾರ ಬಂದಾಗ ಶಿಸ್ತು ಕಾಪಾಡಿದರು. ರಾಜಕಾರಣದಲ್ಲಿ ಪಕ್ಷ ಬೇಧ ಮಾಡದ ಅವರು ಸರ್ವಧರ್ಮ ಪಾಲನೆ ಮಾಡಿದ್ದಾರೆ. ಇವತ್ತು ಪುತ್ತೂರಿನ ಕಾರ್ಯಕರ್ತ ಯಾವತ್ತೂ ಪಲಾಯನ ಮಾಡುವುದಿಲ್ಲ. ಇದೇ ಸ್ಥಳದಿಂದ ಹೋರಾಟ ಮಾಡುತ್ತಾನೆ. ಅಟಲ್ ಬಿಹಾರಿ ವಾಜಪೇಯಿ ಅವರ ಪ್ರೇರಣೆಯಿಂದ ಈ ಕ್ಷೇತ್ರವನ್ನು ಗೆಲ್ಲಿಸುತ್ತಾನೆ. ಆ ಶಪಥ ಇಲ್ಲಿಂದ ಆಗುತ್ತದೆ ಎಂಬ ವಿಶ್ವಾಸ ಇದೆ. ಇಲ್ಲಿಂದಲೇ ಅಣುಸಂದಾನ ಆಗಲಿ ಎಂದರು.

ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅವರು ’ಹಾರ್ ನಹಿ ಮಾನುಂಗ ಮೇ’ ಎಂದು ಹೇಳಿದಂತೆ ಹೊಸ ಭಾಷ್ಯವನ್ನು ಪುತ್ತೂರಿನಲ್ಲಿ ಬರೆಯುವ ಅವಕಾಶವಿದೆ. ಎಲ್ಲ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ. ಪುತ್ತೂರಿನ ಮೂಲಕ ರಾಜ್ಯದ ಕಾರ್ಯಕರ್ತರಿಗೆ ಪ್ರೇರಣೆ ಕೊಡುವ ಕೆಲಸ ಆಗಬೇಕಾಗಿದೆ. ರಾಜ್ಯದ ಅಧ್ಯಕ್ಷರ ಜೊತೆ ನಾವೆಲ್ಲ ಒಂದಾಗಿ ಒಟ್ಟಾಗಿ ನಿಂತು ರಾಜ್ಯದಲ್ಲಿರುವ ಹಿಂದು ವಿರೋಧಿ, ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ. ಅಟಲ್ ಜಿ ಅವರಿಗೆ ನಿಜವಾದ ಶ್ರದ್ಧಾಂಜಲಿ ಯಾವಾಗ ಸಲ್ಲಿಸಬಹುದೆಂದರೆ ರಾಜ್ಯದಲ್ಲಿ ಯಾವಾಗಬೇಕಾದರೂ ಚುನಾವಣೆ ಬಂದರೂ ಪುತ್ತೂರು ಸಹಿತ ರಾಜ್ಯದಲ್ಲಿರುವ 150 ಕ್ಷೇತ್ರಗಳನ್ನು ಗೆದ್ದು ರಾಜ್ಯದಲ್ಲಿ ಮತ್ತೊಮ್ಮೆ ಅಟಲ್ ಜಿ ಅವರ ಪ್ರೇರಣೆಯಂತೆ, ಮಾರ್ಗದರ್ಶನದಂತೆ ಸರಕಾರ ರಚಿಸುವ ತನಕ ನಾವೆಲ್ಲ ವಿರಮಿಸಬಾರದು ಎಂದ ಅವರು ರಾಜ್ಯದಲ್ಲಿ ಹಿಂದುತ್ವದ ಆಧಾರದ ನರೇಂದ್ರ ಮೋದಿಯವರ ನಾಯಕತ್ವದ ಅಟಲ್ ಜಿ ಕನಸಿನಂತೆ ಸರಕಾರ ನಿರ್ಮಾಣದ ಸಂಕಲ್ಪವನ್ನು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮಾಡೋಣ ಎಂದರು.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಬಿಜೆಪಿಯ ಸೈದ್ಧಾಂತಿಕವನ್ನು ಕಟ್ಟಿ ಬೆಳೆಸಿದ ಊರು ಪುತ್ತೂರು ಎಂದು ಹಿಂದೆ ಚಿದಂಬರ್ ಅವರು ಲೋಕಸಭೆಯಲ್ಲಿ ಉಲ್ಲೇಖ ಮಾಡಿದ್ದರು. ಇಡಿ ಭಾರತಕ್ಕೆ ನಿರ್ಣಯ ಕೊಟ್ಟಿರುವ ಪುತ್ತೂರು ಕಳೆದ ಚುನಾವಣೆಯಲ್ಲಿ ಸೋತಾಗ ಸಂಕಟ ಆಗುವುದು ಸಹಜ. ಪುತ್ತೂರಿನಂತಹ ಗಂಡು ಮೆಟ್ಟಿದ ನೆಲದಲ್ಲಿ ಬಿಜೆಪಿ ಸೋತು ಹೋಯಿತ್ತಲ್ಲ ಎಂಬ ಸಂಕಟ ಪುತ್ತೂರಿಗೆ ಮಾತ್ರವಲ್ಲ ಎಲ್ಲರಿಗೂ ಇತ್ತು. ಆದರೆ ಇವತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸುತ್ತಿರುವಾಗ ಮಹಾಲಿಂಗೇಶ್ವರನ ಆಶೀರ್ವಾದದಿಂದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇನ್ನೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಅರ್ಚಕರು ಹೇಳಿರುವುದು ಸಂತೋಷ ಆಗಿದೆ. ಇದು ಮುಂದೆ ಸತ್ಯವಾಗಲಿದೆ ಎಂದ ಅವರು ಬರುವ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ರೀತಿಯಲ್ಲಿ ಗೆಲುವು ತರಬೇಕು ಎಂದರು.
ಅಟಲ್ ವಿರಾಸತ್ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾಗಿರುವ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಿಂದ ಕೊಟ್ಟ ಕಾರ್ಯಕ್ರಮ ಯಾವ ರೀತಿ ಮಾಡಬೇಕೆಂದು ಎನಿಸಿದ್ದಾರೋ ಅದಕ್ಕಿಂತ ನೂರು ಪಟ್ಟು ಜಾಸ್ತಿ ಆಗಲು ದೇವದುರ್ಲಭ ಕಾರ್ಯಕರ್ತರೇ ಕಾರಣ ಎಂದು ಅಭಿನಂದನೆ ಸಲ್ಲಿಸಿದರು. ಬೂತ್ ಬೂತ್‌ನಿಂದ ಹೆಚ್ಚಿನ ಸಂಖ್ಯೆಯಿಂದ ಬಂದಿರುವುದನ್ನು ಗಮನಿಸಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರು ಕವಿ, ಲೇಖಕ, ಬರಹಗಾರ ಜೊತೆಗೆ ಅಜಾತ ಶತ್ರು ಆಗಿದ್ದರು. ರಾಷ್ಟ್ರ ಭಕ್ತಿಯೆಂದರೆ ಅದು ವಾಜಪೇಯಿ. ಬದುಕಿದರೂ ಸತ್ತರು ಭಾರತಕ್ಕಾಗಿ ಎಂದು ವಾಜಪೇಯಿ ಹೇಳಿದ ಮಾತು ನಮಗೆಲ್ಲ ಪ್ರೇರಣೆ ಎಂದರು. ಅಟಲ್ ವಿರಾಸತ್‌ಗೆ ರಾಜ್ಯಾಧ್ಯಕ್ಷರು ನನನ್ನು ಸಂಚಾಲಕರನ್ನಾಗಿ ಮಾಡಿದರೂ ಕೂಡಾ ಎಲ್ಲಾ ಕಾರ್ಯಕರ್ತರು ಸಂಚಾಲಕರ ಮಾದರಿಯಲ್ಲೇ ಕೆಲಸ ಮಾಡಿದ್ದಾರೆ. ಅವರಿಗೆ ನಾನು ವಂದನೆ ಮಾಡುತ್ತೇನೆ ಎಂದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಸರಕಾರ ಬರಬೇಕು. ಭ್ರಷ್ಟ ಸರಕಾರ ಹೋಗಬೇಕು. ಬಿಜೆಪಿ ಸರಕಾರದ ಮೂಲಕ ಹಿಂದುತ್ವದ ಸರಕಾರ ಬರಬೇಕು. ನಾವು ನೀವು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಕೂಡಾ ಪುತ್ತೂರಿನಲ್ಲಿ ನಾವೆಲ್ಲ ಸೇರಿ ಬಿಜೆಪಿ ಪಕ್ಷ ಎಂಬ ನಿಟ್ಟಿನಲ್ಲಿ ಗೆಲ್ಲಸಬೇಕು ಎಂಬ ಭರವಸೆ ನೀಡಬೇಕಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿ, ಮಾತನಾಡಿ ದೇಶದ ಸ್ವಾತಂತ್ರ್ಯದ ಕಿಚ್ಚಿನ ವಂದೇಮಾತರಂಗೆ 150 ವರ್ಷ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ 150 ವರ್ಷ, ಅಟಲ್ ವಾಜಪೇಯಿ ಅವರ 100ನೇ ವರ್ಷದ ಸಂದರ್ಭದಲ್ಲಿ ನಾವೆಲ್ಲ ಸೇರಿದ್ದೇವೆ. ಪುತ್ತೂರು ಜಿಲ್ಲೆಗೆ ನ್ಯಾಯಕತ್ವ ಕೊಡುವ ಕ್ಷೇತ್ರ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಇರಬಹುದು. ಅವರೆಲ್ಲ ಪುತ್ತೂರಿನಿಂದಲೇ ರಾಜ್ಯ, ರಾಷ್ಟ್ರಕ್ಕೆ ನಾಯಕತ್ವ ಕೊಟ್ಟಿದ್ದಾರೆ. ರಾಜ್ಯದಿಂದ ಕೊಟ್ಟ ಕಾರ್ಯಕ್ರಮ ಎಲ್ಲವನ್ನೂ ನಾವು ಮಾಡಿದ್ದೇವೆ. ಜಿಲ್ಲೆಯಲ್ಲಿ ನೂರಾರು ಕಾರ್ಯಕರ್ತರನ್ನು ಅಭಿನಂದನೆ ಮಾಡಿದ್ದೇವೆ. ಇವತ್ತು ನಿಜವಾಗಿ ಪ್ರೇರಣೆ ಕೊಡುವ ಕಾರ್ಯಕ್ರಮವಾಗಿ ಅಟಲ್ ಜಿ ಅವರ ಜನ್ಮಶತಾಬ್ದಿಯನ್ನು ಹಮ್ಮಿಕೊಂಡಿದ್ದೇವೆ. ಪುತ್ತೂರಿನಲ್ಲಿ ಕಳೆದ ಬಾರಿ ಮತಗಳ ಸಂಖ್ಯೆ ಕಡಿಮೆ ಆಗಿರಬಹುದು. ಆದರೆ ಕಾರ್ಯಕರ್ತರು ಎದೆಗುಂದಿಲ್ಲ. ಗಲ್ಲಿ ಗಲ್ಲಿಯಲ್ಕಿ ಜನರು ಉತ್ಸಾಹದಲ್ಲಿದ್ದಾರೆ ಎಂದು ಹೇಳಿದ ಅವರು ಈ ಹಿಂದೆ 1991ರ ಎಪ್ರಿಲ್ 14ಕ್ಕೆ ಅಟಲ್ ಜಿ ಅವರು ಬಂದ ಸ್ಥಳದಲ್ಲೇ ಇವತ್ತು ಅವರ ಜನ್ಮಶತಾಬ್ದಿ ಮಾಡುತ್ತಿರುವುದು ನಮಗೆ ಹೆಮ್ಮೆಯಿದೆ ಎಂದರು. ಇವತ್ತು ಬಿಜೆಪಿ ಮತ್ತೆ ಶಕ್ತಿಯುತವಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಪುತ್ತೂರು ಮಂಡಲ ಮತ್ತು ಅಟಲ್ ವಿರಾಸತ್ ಪರವಾಗಿ ಸನ್ಮಾನಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆ ನೀಡಿ ಗೌರವಿಸಲಾಯಿತು. ಪುತ್ತೂರಿನ ಹಿರಿಯ ಕಾರ್ಯಕರ್ತರಾದ ಮೊಗೇರೋಡಿ ಬಾಲಕೃಷ್ಣ ರೈ, ಎಸ್.ಅಪ್ಪಯ್ಯ ಮಣಿಯಾಣಿ, ವಿಶ್ವಹಿಂದು ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಆರ್.ಸಿ.ನಾರಾಯಣ, ನನ್ಯ ಅಚ್ಚುತ ಮೂಡೆತ್ತಾಯ ಸಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿಜಯೇಂದ್ರ ಅವರನ್ನು ಸನ್ಮಾನಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದನಾಥ್ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಎಸ್. ಅಂಗಾರ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕರಾದ ಮಲ್ಲಿಕಾಪ್ರಸಾದ್, ಸಂಜೀವ ಮಠಂದೂರು, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಜಿಲ್ಲಾ ಪ್ರಭಾರಿ ಭಾರತಿ, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರುವಾರ, ಜಿಲ್ಲಾ ಮಾಜಿ ಅದ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ, ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ, ಮಂಗಳೂರು ದಕ್ಷಿಣ ಮಂಡಲದ ರಮೆಶ್, ಮಂಗಳೂರು ನಗರ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಬೆಳ್ತಂಗಡಿ ಮಂಡಲದ ಅದ್ಯಕ್ಷ ಶ್ರೀನಿವಾಸ್, ಮೂಡಬಿದ್ರೆ ಮಂಡಲದ ಅಧ್ಯಕ್ಷ ದಿನೇಶ್, ಪುತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಗೌರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರನ್ನು ಗೌರವಿಸಿದರು. ಬಿಜೆಪಿ ಪದಾಧಿಕಾರಿಗಳಾದ ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್, ಸಂತೋಷ್, ಪುರುಷೋತ್ತಮ ಮುಂಗ್ಲಿಮನೆ, ವಸಂತ ಲಕ್ಷ್ಮೀ, ಸತೀಶ್ ನಾಯ್ಕ್, ನೌಹುಶಾ ಪಿ ವಿ, ವಿರೂಪಕ್ಷಾ ಭಟ್, ಸುಂದರ ಪೂಜಾರಿ ಬಡಾವು, ಮುರಳಿಕೃಷ್ಣ ಹಸಂತಡ್ಕ, ಕಿರಣ್ ರೈ ಬಲ್ನಾಡು, ಶಶಿಧರ್ ನಾಯಕ್, ನಾಗೆಂದ್ರ ಬಾಳಿಗ, ಕೃಷ್ಣ ವಿಟ್ಲ, ಪುನಿತ್ ಮಾಡತ್ತಾರು, ಶಿಶಿರ್ ಪೆರ‍್ವೋಡಿ, ನಿತೇಶ್ ಕಲ್ಲೇಗ, ಯಶೋಧ ಕೆ. ಗೌಡ, ನಿರಂಜನ್, ಸುನಿಲ್, ಅನೀಶ್, ಉದಯಕುಮಾರ್, ವಿಜಯ ಬಿ.ಎಸ್, ನಾಗೇಶ್ ಟಿ.ಎಸ್, ಗೋವರ್ಧನ್ ಕುಮೆರಡ್ಕ, ಜಯಾನಂದ, ಕಿರಣ್ ಶಂಕರ್ ಮಲ್ಯ, ಗೌರಿ ಬನ್ನೂರು, ದೀಕ್ಷಾ ಪೈ, ಜಯಲಕ್ಷ್ಮೀ ಶಗ್ರಿತ್ತಾಯ, ಇಂದ್ರಪ್ರಸಾದ್, ಸೌಮ್ಯ, ನಾಗವೇಣಿ, ವಿಮಲ, ಆಶಾ ಭಗವಾನ್, ವಿದ್ಯಾಧರ್ ಜೈನ್ ಅತಿಥಿಗಳನ್ನು ಗೌರವಿಸಿದರು. ಕಿಶೋರ್ ಪೆರ್ಲ ವಂದೇ ಮಾತರಂ ಹಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಂದಿಸಿದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ಜಿಲ್ಲಾ ಮಂಡಲದ ಉಪಾಧ್ಯಕ್ಷ, ಪುತ್ತೂರು ಪ್ರಭಾರಿ ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಅಟಲ್ ವಿರಾಸತ್ ಕಾರ್ಯಕ್ರಮದ ಆರಂಭದಲ್ಲಿ ಬೆಳಗ್ಗೆ ವೇದಿಕೆಯಲ್ಲಿ ರವೀಂದ್ರ ಪ್ರಭು ಮತ್ತು ಬಳಗದವರಿಂದ ವಿಶೇಷ ದೇಶಭಕ್ತಿ ಗೀತೆಯ ಗಾಯನ ಕಾರ್ಯಕ್ರಮ ನಡೆಯಿತು. ಮೋನಪ್ಪ ಭಂಡಾರಿ ಸಂಗೀತ ಕಲಾವಿದರನ್ನು ಗೌರವಿಸಿದರು.
ಈ ಭಾಗದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಹಾಗೂ ಎನ್.ಎಸ್.ಕಿಲ್ಲೆ ಮತ್ತು ಬಿಜೆಪಿಗೆ ಭದ್ರ ಬುನಾದಿ ಹಾಕಿದ ಉರಿಮಜಲು ರಾಮ ಭಟ್ ಅವರನ್ನು ಸ್ಮರಣೆ ಮಾಡಿ ಇದೊಂದು ಭಾವನಾತ್ಮಕ ಕಾರ್ಯಕ್ರಮ ಎಂದು ಮಾತು ಆರಂಭಿಸಿದ ಅವರು ಕಾರ್ಯಕ್ರಮದ ಅರಂಭದಲ್ಲಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಕಾರ್ಯಕ್ರಮದಲ್ಲಿ ಹಿರಿಯರಾದ ಡಾ.ಪ್ರಸಾದ್ ಭಂಡಾರಿ ಮತ್ತು ಡಾ. ಗೌರಿ ಪೈ ಅವರನ್ನು ಸನ್ಮಾನಿಸಿರುವುದು ವಿಶೇಷವಾಗಿದೆ. ಅದರಲ್ಲೂ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಂತಹ ಸಂದರ್ಭದಲ್ಲಿ 103 ವರ್ಷದ ವೃದ್ಧೆ ತಾಯಿ ಜನಸಂದಣಿಯ ನಡುವೆ ಬಂದು ಯಾರು ವಿಜಯೇಂದ್ರ ಎಂದು ನೋಡಿ ಆಶೀರ್ವಾದಿಸಿ ದೇಶ ಕಟ್ಟುವ ಕೆಲಸ ಮಾಡಬೇಕೆಂದು, ಬಿಜೆಪಿಯನ್ನು ಅಽಕಾರಕ್ಕೆ ತರಲು ನಿನ್ನಿಂದ ಸಾಧ್ಯ ಎಂದು ಹೇಳಿ ಅಶೀರ್ವಾದ ನೀಡಿರುವುದು ನನಗೆ ರೋಮಾಂಚನವಾಗಿದೆ. ಪುತ್ತೂರಿನ ಕಣಕಣದಲ್ಲೂ ದೇಶದ ಬಗ್ಗೆ ಭಕ್ತಿ, ಸಂಘಟನೆಯ ಬಗ್ಗೆ ಶ್ರದ್ಧೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಿರುವುದು ವೃದ್ಧೆ ತಾಯಿ ಹೇಳಿದ ಮಾತು ಸತ್ಯ. ಇಂತಹ ಪುಣ್ಯ ಭೂಮಿಯಲ್ಲಿ ಅಟಲ್ ಜಿಯವರ ಜನ್ಮಶತಾಬ್ದಿಯನ್ನು ಆಚರಿಸುವಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ವಿಜಯೇಂದ್ರ

ಜನಸಂಘದ ಕಾಲದಿಂದಲೂ ಬಿಜೆಪಿಗೆ ಶಕ್ತಿ ತುಂಬಿದ ವಾಜಪೇಯಿ ಅವರು ಪುತ್ತೂರಿಗೆ ಬಂದಾಗ ಪಕ್ಷಕ್ಕೆ ನಿಧಿ ಸಂಗ್ರಹಿಸಿ ನೀಡಿದ ಡಾ.ಎಂ.ಕೆ. ಪ್ರಸಾದ್ ಮತ್ತು ವಾಜಪೇಯಿ ಪುತ್ತೂರಿಗೆ ಬಂದಾಗ ತಮ್ಮ ಮನೆಯಲ್ಲಿ ಉಟೋಪಚಾರ ನೀಡಿದ ಡಾ. ಗೌರಿ ಪೈ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರಿಗೆ 2974 ರಲ್ಲಿ ಬೆಂಗಳೂರಿನಲ್ಲಿ ವಾಹನ ಚಾಲಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಚಾಲಕರಾಗಿ ಬಳಿಕ ದೆಹಲಿಯಲ್ಲಿ 2 ವರ್ಷಗಳ ಕಾಲ ವಾಹನ ಚಾಲಕರಾಗಿದ್ದ ಡಿ.ಸಿ ಕುಶಾಲಪ್ಪ ಗೌಡರವರನ್ನು ಸನ್ಮಾನಿಸಲಾಯಿತು.























