ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದು ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಅಧಿಕಾರ ಹಂಚಿಕೆಯ ಭಾಗವಾಗಿ ಡಿಕೆಶಿ ಬಣ ಫುಲ್ ಆಕ್ಟೀವ್ ಆಗಿದೆ. ರಾಜ್ಯ ರಾಜಕಾರಣದಲ್ಲಿ ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ.
ಇದರ ನಡುವೆ ವಿಪಕ್ಷ ಬಿಜೆಪಿಯಲ್ಲೂ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಬಿಜೆಪಿಯ ರೆಬಲ್ ನಾಯಕರು ಕುಮಾರ ಬಂಗಾರಪ್ಪ ಅವರ ನಿವಾಸದಲ್ಲಿ ಭೇಟಿಯಾಗದ್ದಾರೆ. ಇಂದಿನ ರೆಬೆಲ್ ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ, ಕುಮಾರ್ ಬಂಗಾರಪ್ಪ , ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಭಾಗಿಯಾಗಿದ್ದಾರೆ. ಗೈರಾಗಿರುವ ಪೈಕಿ ಪ್ರಮುಖರೆಂದರೆ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಯ ಹಿರಿಯ ನಾಯಕ ಅರವಿಂದ್ ಲಿಂಬಾವಳಿ.
ವಿಜಯೇಂದ್ರ ಆಕ್ಟಿವ್ ಆಗುತ್ತಿದಂತೆ ರೆಬಲ್ ಬಣ ಸಹ ಮತ್ತೆ ಆಕ್ಟೀವ್ ಆಗಿದೆ. ಹಿರಿಯ ನಾಯಕರ ಮನೆಗೆ ವಿಜಯೇಂದ್ರ ಭೇಟಿ ನೀಡುತ್ತಿದ್ದಂತೆ, ರೆಬೆಲ್ ಬಣ ಫುಲ್ ಆಕ್ಟಿವ್ ಆಗಿದೆ. ವಿಜಯೇಂದ್ರಗೆ ನಾವು ಸಹಕಾರ ನೀಡೊದಿಲ್ಲ ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.























