ಆರ್ಲಪದವು: ರಾತ್ರಿ ಹೊತ್ತು ಕಂಡವರ ಮನೆ ಕಿಂಡಿಯಲ್ಲಿ ಇಣುಕುವ ವಿಕೃತ ಕಾಮಿ ಬಾವಿಗೆ ಬಿದ್ದ ಘಟನೆ ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ನಡೆದಿದೆ.
ಪಾಣಾಜೆ ಗ್ರಾಮದ ಮೂಸೆ ಎಂಬವನ ಪುತ್ರ ವಿವಾಹಿತ ನಾದ ಹಾರೀಸ್ ಎಂಬವನಿಗೆ ರಾತ್ರಿ ಹೊತ್ತು ಮದ್ಯಸೇವಿಸಿ ಸಿಕ್ಕವರ ಮನೆಯ ಕಿಂಡಿಯಲ್ಲಿ ಇಣುಕುವ ಚಾಳಿ ಇದ್ದು ಈ ಮೊದಲು ಹಲವು ಮನೆಯಲ್ಲಿ ಇದೇ ಚಾಳಿಯನ್ನು ಮಾಡಿ ಗೂಸ ತಿಂದು ಪೋಲಿಸರ ಅಥಿತಿ ಯಾಗಿದ್ದನು.
ಪಾಣಾಜೆ ಗ್ರಾಮದ ಮೂಸೆ ಎಂಬವನ ಪುತ್ರ ವಿವಾಹಿತ ನಾದ ಹಾರೀಸ್ ಎಂಬವನಿಗೆ ರಾತ್ರಿ ಹೊತ್ತು ಮದ್ಯಸೇವಿಸಿ ಸಿಕ್ಕವರ ಮನೆಯ ಕಿಂಡಿಯಲ್ಲಿ ಇಣುಕುವ ಚಾಳಿ ಇದ್ದು ಈ ಮೊದಲು ಹಲವು ಮನೆಯಲ್ಲಿ ಇದೇ ಚಾಳಿಯನ್ನು ಮಾಡಿ ಗೂಸ ತಿಂದು ಪೋಲಿಸರ ಅಥಿತಿ ಯಾಗಿದ್ದನು.ಈತ(22/11/2022) ರಂದು ಮದ್ಯ ರಾತ್ರಿ ಎಂದಿನಂತೆ ಆರ್ಲಪದವುವಿನ ಒಂದು ಮನೆಗೆ ಹೋಗೆ ಕಿಂಡಿ ಇಣುಕುವಾಗ ಮನೆಯವರಿಗೆ ಸಂಶಯ ಬಂದು ಲೈಟ್ ಆನ್ ಮಾಡಿದಾಗ ಈತ ಓಡಲು ಪ್ರಯತ್ನಿಸಿದ ಸಂಧರ್ಭದಲ್ಲಿ ಮನೆಯ ಅಂಗಳದ ಬದಿಯಲ್ಲಿದ್ದ ಬಾವಿಗೆ ಬಿದ್ದು ಚಡಪಡಿಸಿದನ್ನು ಗಮನಿಸಿದ ಮನೆಯವರು ಸಮೀಪದ ಮನೆಯವರ ಸಹಾಯದಿಂದ ಮೆಲೆತ್ತಿ ಪೋಲಿಸರಿಗೆ ಒಪ್ಪಿಸಿದರು.
ಈಗ ಕೆಲವು ರಾಜಕೀಯವಾಗಿ ಹಾಗೂ ಈತನ ಸಮೂದಾಯದವರು ಸೇರಿಕೊಂಡು ಈ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಒತ್ತಾಯ ಮಾಡುತ್ತಿದ್ದು ಇದಕ್ಕೆ ಒಪ್ಪದ ಎದುರು ಪಾರ್ಟಿಯವರು ಪೋಲಿಸ್ ಸ್ಟೇಷನ್ ನಲ್ಲಿ ಕಂಪ್ಲೇಟ್ ಮಾಡಿರುತ್ತಾರೆ. ಈತನ ಇಂತಹಾ ಕೃತ್ಯವನ್ನು ಸಹಿಸಲಾಗದ ಊರವರು ಈತನ ಉಪಟಲದಿಂದ ರಕ್ಷಿಸಿ ಕೊಳ್ಳಲು ಊರವರ ಕಡೆಯಿಂದ ಇನ್ನೊಂದು ಕೇಸು ದಾಖಲಿಸುವ ಸಾಧ್ಯತೆ.























