ಲಂಡನ್ (ಬ್ರಿಟನ್): ಪ್ರತಿಷ್ಟಿತ ಔಷಧ ತಯಾರಿಕಾ ಕಂಪನಿ ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ತಾನು ಅಭಿವೃದ್ಧಿಪಡಿಸಿದ ಕೋವಿಡ್ – 19 ಲಸಿಕೆಯಿಂದ ಅಪರೂಪದ ಅಡ್ಡ ಪರಿಣಾಮ ಆಗುತ್ತದೆ ಎಂದು ತಪ್ಪೊಪ್ಪಿಕೊಂಡಿದೆ. ಇದನ್ನ ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್ (ಟಿಎಸ್ಎಸ್) ಎಂದು ಕರೆಯಲಾಗುತ್ತದೆ. ಕೋವಿಡ್ ಲಸಿಕೆಯಿಂದ ಆದ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವು ಪ್ರಕರಣಗಳ ಕುರಿತ ವಿಚಾರಣೆ ನಡೆಸುತ್ತಿರುವ ಬ್ರಿಟನ್ ನ್ಯಾಯಾಲಯದ ಎದುರು ಆಸ್ಟ್ರಾಜೆನಿಕಾ ಸಂಸ್ಥೆ ತಪ್ಪೊಪ್ಪಿಕೊಂಡಿರೋದು ಭಾರತದ ಪಾಲಿಗೆ ನಿಜಕ್ಕೂ ಶಾಕಿಂಗ್ ಸಂಗತಿಯಾಗಿದೆ