ಬಂದಾರು : ಡಿ. 14 ಶಿವಫ್ರೆಂಡ್ಸ್ ಕುರಾಯ -ಖಂಡಿಗ ಮೈರೋಳ್ತಡ್ಕ -ಬಂದಾರು ಗ್ರಾಮ, ಇದರ ಆಶ್ರಯದಲ್ಲಿ ತಾಲೂಕು ವಾಲಿಬಾಲ್ ಅಸೋಶಿಯೇಷನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 10ನೇ ವರ್ಷದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ,ಪುರುಷರ ಹಾಗೂ ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಹಾಗೂ ಮಹಿಳೆಯ ಮುಕ್ತ ತ್ರೋಬಾಲ್ ಪಂದ್ಯಾಟದಲ್ಲಿ ವಿಜೇತರಿಗೆ ಡಿ.14 ರಂದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಮಹಿಳೆಯರ ತ್ರೋಬಾಲ್ ಪಂದ್ಯಾಟ ಬಹುಮಾನ ವಿಜೇತರು ವಿಮಲ ಬಳಗ ಪ್ರಥಮ, ರಕ್ಷಿತಾ ಬಳಗ ದ್ವಿತೀಯ ಸ್ಥಾನ, ಮಹಿಳೆಯರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಬಹುಮಾನ ವಿಜೇತರು ಪರಶುರಾಮ ಫ್ರೆಂಡ್ಸ್ ಉದನೆ ಪ್ರಥಮ ಸ್ಥಾನ, ಶಿವಫ್ರೆಂಡ್ಸ್ ದ್ವಿತೀಯ ಸ್ಥಾನ, ಸತ್ಯದೇವತೆ ಪಾರೆಂಕಿ ತೃತೀಯ ಸ್ಥಾನ, ಶ್ರೀ ಸಾಯಿ ಬಂದಾರು ಚತುರ್ಥ ಸ್ಥಾನ.
ಪುರುಷರ ಮುಕ್ತ ಸಿಂಗಲ್ ಗ್ರಿಪ್ ಮಾದರಿಯ ಹಗ್ಗಜಗ್ಗಾಟ ಬಹುಮಾನ ವಿಜೇತರು ಶ್ರೀ ದುರ್ಗಾ ಕೊರಗಟ್ಟೆ ಪ್ರಥಮ ಸ್ಥಾನ, ಶ್ರೀ ಸಾಯಿ ಮೊಗ್ರು -ಬಂದಾರು ದ್ವಿತೀಯ ಸ್ಥಾನ, ಫ್ರೆಂಡ್ಸ್ ಪಣೋಲಿಬೈಲು ತೃತೀಯ ಸ್ಥಾನ, ಪರಶುರಾಮ ಉದನೆ ಚತುರ್ಥ ಸ್ಥಾನ.
ತಾಲೂಕು ಮಟ್ಟದ ವಾಲಿಬಾಲ್ ಬಹುಮಾನ ವಿಜೇತರು ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ ಪ್ರಥಮ ಸ್ಥಾನ, ಶಿವಫ್ರೆಂಡ್ಸ್ ಕುರಾಯ ಖಂಡಿಗ ಬಂದಾರು ದ್ವಿತೀಯ ಸ್ಥಾನ, ಕಣಿಯೂರು ಫ್ರೆಂಡ್ಸ್ ತೃತೀಯ ಸ್ಥಾನ , ಯಜಮಾನ ಫ್ರೆಂಡ್ಸ್ ಚತುರ್ಥ ಸ್ಥಾನ ಹಾಗೂ ಬೆಸ್ಟ್ ಪಾಸಾರ್ ಚರಣ್ ಸಂತೃಪ್ತಿ ಫ್ರೆಂಡ್ಸ್ ಗುರುವಾಯನಕೆರೆ, ಬೆಸ್ಟ್ ಅಟ್ಯಾಕರ್ ಅಖಿಲೇಶ್ ಸಂತೃಪ್ತಿ ಗುರುವಾಯನಕೆರೆ, ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿ ತನ್ನದಾಗಿಸಿಕೊಂಡರು.























