ಪುತ್ತೂರು : ಈಶಾ ಫೌಂಡೇಶನ್ ನ ವತಿಯಿಂದ ಆರಂಭವಾದ ಈ ಯಾತ್ರೆಯ ಉಡುಪಿಯಿಂದ ಹೊರಟು ಮಂಗಳೂರು ಮಾರ್ಗವಾಗಿ ಇದೀಗ ಪುತ್ತೂರಿಗೆ ತಲುಪಿದೆ.. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಿನ್ನೆ ರಾತ್ರಿ ತಲುಪಿದ್ದು, ರಾತ್ರಿ ವೇಳೆ ರಥವನ್ನು ಪುತ್ತೂರು ಒಡೆಯನಿಗೆ ಪ್ರದಕ್ಷಿಣೆ ತಂದು, ಆ ಬಳಿಕ ಭಜನೆ ಸಂಕೀರ್ತನೆಗಳನ್ನು ಹಾಡಿ, ಇಂದು ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡವರೆಲ್ಲ ಈ ದೇವರ ಪ್ರಸಾದವನ್ನು ಸ್ವೀಕರಿಸಿ, ರಥಯಾತ್ರೆ ಮುಂದಕ್ಕೆ ಹೊರಟಿದೆ. ಯಾತ್ರೆಯು ಮುಂದಕ್ಕೆ ಮಡಿಕೇರಿ ಮೈಸೂರು ಮಾರ್ಗದ ಮೂಲಕ ಕೊಯಂಬತ್ತೂರಿನ ವೆಲ್ಲಿಯಂಗಿರಿ ಪರ್ವತಗಳವರೆಗೆ ನಡೆದು ಈಶ ಯೋಗ ಕೇಂದ್ರವನ್ನು ತಲುಪಲಿದೆ. ಈ ಯಾತ್ರೆಯು ಡಿಸೆಂಬರ್ 7 ರಿಂದ ಆರಂಭಗೊಂಡು 13ನೇ ಫೆಬ್ರವರಿ 2026 ರವರೆಗೆ ನಡೆಯಲಿದೆ. ರಥಯಾತ್ರೆಯು ಸರಿಸುಮಾರು 170 ದಿನಗಳಲ್ಲಿ ಒಂದು ಸಾವಿರ ಕಿ. ಮೀ ಕ್ರಮಿಸಿ, ನೂರು ಹಳ್ಳಿಗಳು ಮತ್ತು ಪಟ್ಟಣಗಳನ್ನು ಹಾದು ಹೋಗಲಿದೆ. ಇದೊಂದು ಶಿವನ ಭಕ್ತಿ, ಶಕ್ತಿ, ಆಧ್ಯಾತ್ಮಿಕತೆಯನ್ನು ಸಾರುವ ಯಾತ್ರೆಯಾಗಿದ್ದು, ” ಆದಿಯೋಗಿ ರಥ” ಅಥವಾ “ಶಿವ ಯಾತ್ರೆ” ಎಂದು ಕರೆಯುತ್ತಾರೆ
ಈ ಯಾತ್ರೆಯು ಶ್ರೀ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ.ಯಾತ್ರೆಯಲ್ಲಿ ಈಶ ಫೌಂಡೇಶನ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
























