ಪುತ್ತೂರು : ಕರ್ನಾಟಕ ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ (ರಿ) ಹಾಗೂ ಕೋಲಾರ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್( ರಿ) ಇದರ ಸಹಭಾಗಿತ್ವದಲ್ಲಿ ದಿನಾಂಕ ಡಿಸೆಂಬರ್ 20.21, 2025 ರಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ “44ನೇ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್2025 ” ಇದರಲ್ಲಿ ಕಡಬ ತಾಲ್ಲೂಕು ಕುಂತೂರು ಗ್ರಾಮದ ಕೋಡ್ಲ ನಿವಾಸಿ ರವಿ ಪೂಜಾರಿ ಎ ಇವರು 200 ಮೀಟರ್ ಓಟ ಪ್ರಥಮ ಮತ್ತು 400 ಮೀಟರ್ ಓಟದಲ್ಲಿ
ಸ್ಥಾನ ಪಡೆದು ಕೇರಳದ ತ್ರಿವಂಡ್ರಮ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಸ್ತುತ ವೃತ್ತಿಯಲ್ಲಿ ಇವರು ಉಪ್ಪಿನಂಗಡಿಯಲ್ಲಿ ವಿಡಿಯೋ ಗ್ರಾಫರ್ ಮತ್ತು ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯದ ಸಕ್ರಿಯ ಸದಸ್ಯರಾಗಿದ್ದು, 2025-2027ನೇ ಸಾಲಿನ ಪುತ್ತೂರು ವಲಯದ ಕ್ರೀಡಾ ಕಾರ್ಯದರ್ಶಿಯಾಗಿದ್ದಾರೆ. ಇವರು ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಪ್ಪಾಡಿ, ಸರಕಾರಿ ಪ್ರೌಢಶಾಲೆ ಶಾಂತಿನಗರ, ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಇಲ್ಲಿನ ಹಲೇ ವಿದ್ಯಾರ್ಥಿಯಾಗಿದ್ದಾರೆ.






















