ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಪುತ್ತೂರು ವಲಯದ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಡಿ.20ರಂದು ಮುರ ಗೌಡ ಸಮುದಾಯ ಭವನದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಸಂಚಾಲಕ ಗೋಪಾಲ ಸುಳ್ಯ ಮಾತನಾಡಿ, ಯಾವುದೇ ಒಂದು ಸಂಘ ಸಂಸ್ಥೆ ಬೆಳೆಯಬೇಕಾದರೆ ಅಲ್ಲಿ ಸಂಘಟನೆ ಬಹುಮುಖ್ಯ. ಸಂಘಟನೆಯಿಂದಲೇ ನಮ್ಮ ಅಸೋಸಿಯೇಷನ್ ಬೆಳೆದಿದೆ. ನಮ್ಮಸಂಘಟನೆ ಇನ್ನಷ್ಣು ಬಲಿಷ್ಠವಾಗಬೇಕು. ಹೊಸ ಪದಾಧಿಕಾರಿಗಳಿಂದ ಉತ್ತಮ ಕೆಲಸಗಳು ನಡೆಯಬೇಕು. ಇದಕ್ಕೆ ವಲಯದ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಶಶಿಧರ ಕಿನ್ನಿಮಜಲು ಮಾತನಾಡಿ, ಪ್ರಸ್ತುತ ಸಮಾಜ ತಂತ್ರಜ್ಞಾನ ಯುಗದಲ್ಲಿ ಮುನ್ನಡೆಯುತ್ತಿದೆ. ಫೋಟೋಗ್ರಫೀ ಉದ್ಯಮವು ಅತೀ ವೇಗದಲ್ಲಿ ಬದಲಾಗುತ್ತಿರುವ ಕ್ಷೇತ್ರದಲ್ಲಿ ಒಂದಾಗಿದೆ. ತಂತ್ರಜ್ಞಾನಗಳ ಜೊತೆಗೆ ಅಪ್ ಡೇಟ್ ಆಗಬೇಕಾದ ಆವಶ್ಯಕತೆಯಿದೆ. ಇಲ್ಲದಿದ್ದರೆ ಉದ್ಯಮದಲ್ಲಿ ಬೆಳೆಯಲು ಅಸಾಧ್ಯ ಎಂದರು. ಫೋಟೋಗ್ರಾಫರ್ ಅಸೋಸಿಯೇಷನ್ ಮೂಲಕ ತನ್ನ ವೃತ್ತಿಯ ಜೊತೆಗೆ ಸಮಾಜದಲ್ಲಿ ಶೋಷಿತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಂಘಟನೆಯು ಇನ್ನಷ್ಟು ಬೆಳೆಯಲಿ ಎಂದರು.
ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಎಸ್‌ಕೆಪಿಎ ಸಹಕಾರ ಸಂಘವು ದಶಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಅಂಗವಾಗಿ ಬಿಸಿರೋಡ್ ಶಾಖೆ ಪ್ರಾರಂಭಿಸಲಾಗುವುದು. ಶಾಖೆ ಶುಭಾರಂಭದ ಅಂಗವಾಗಿ ಠೇವಣಿಗಳಿಗೆ ಶೇ.10.50 ಬಡ್ಡಿದರವನ್ನು ನೀಡಲಾಗುತ್ತಿದೆ. ಈ ಕೊಡುಗೆ ಫೆಬ್ರವರಿ ತನಕ ಅನ್ವಯವಾಗಲಿದ್ದು ಎಲ್ಲಾ ವಲಯಗಳ ಸದಸ್ಯರು ಸಂಘದಲ್ಲಿ ಠೇವಣಿಯಿಟ್ಟು ಸಹಕರಿಸುವ ಜೊತೆಗೆ ಕೊಡುಗೆ ಪ್ರಯೋಜನ ಪಡೆದುಕೊಳ್ಳಬಹದು ಎಂದ ಅವರು ಸಂಘಟನೆಯಲ್ಲಿ ಕಾಳೆಲೆಯುವವರು, ವಿರೋಧ ಮಾಡುವವರು ಇದ್ದಾಗ ನಮಗೆ ಛಲ ಬರುತ್ತದೆ. ದಿಟ್ಟ ನಿರ್ಧಾರದಿಂದ ಸಂಘಟನೆ ಮತ್ತಷ್ಟು ಬಲೀಷ್ಠವಾಗುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ ಮಾತನಾಡಿ, ಜಿಲ್ಲಾ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಾಲ್ಕು ವರ್ಷದ ಹಿಂದೆ ನಿವೇಶನ ಪಡೆದುಕೊಳ್ಳಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಪುತ್ತೂರು ವಲಯದಿಂದ ಪ್ರಥಮವಾಗಿ ರೂ.2ಲಕ್ಷ ದೇಣಿಗೆ ನೀಡಿದ್ದಾರೆ. ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾ ಕಟ್ಟಡ ಸಮಿತಿ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಿಲಾಗುವುದು ಎಂದರು.
ಅಸೋಸಿಯೇಷನ್‌ನ ಜಿಲ್ಲಾ ಕಾರ್ಯದರ್ಶಿ ಅಜೇಯ್ ಮಂಗಳೂರು ಮಾತನಾಡಿ, ಪುತ್ತೂರು ವಲಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಕೆಲದ ಅಗಿದೆ. ಈ ಭಾರಿ ವಲಯದ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಒಂದೇ ವಲಯದವರಾಗಿದ್ದು ಪುತ್ತೂರು ವಲಯದ ಅಭಿವೃದ್ಧಿ ಸಹಕಾರಿಯಾಗಲಿದೆ. ನೂತನ ಸಮಿತಿಯ ಮೂಲಕ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಮೂಡಿಬರಲಿ ಎಂದರು.
ಪುತ್ತೂರು ವಲಯದ ನೂತನ ಅಧ್ಯಕ್ಷ ಜಯಂತ ಗೌಡ ಕರ್ಕುಂಜ ಮಾತನಾಡಿ, ಪುತ್ತೂರು ವಲಯದಲ್ಲಿ ಉತ್ತಮ ತಂಡವಿದೆ. ನಾವು ಸಮಯಕ್ಕೆ ಆದ್ಯತೆ ನೀಡಬೇಕು. ಸದಸ್ಯತ್ವ ನವೀಕರಣ ಮಾಡಲು ಬಾಕಿ ಇರುವ ಸದಸ್ಯರು ನವೀಕರಿಸಿ ಸಹಕರಿಸಬೇಕು. ವಲಯದ ಎಲ್ಲಾ ಸಭೆಗಳನ್ನು ಸದಸ್ಯರು ಭಾಗವಹಿಸಬೇಕು. ಸಮಯಕ್ಕೆ ಸರಿಯಾಗಿ ಸಭೆಗಳಲ್ಲಿ ಭಾಗವಹಿಸಿ ವಲಯದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಮಾತನಾಡಿ, ಇತರ ವೃತ್ತಿ ಬಾಂಧವರಿಗೆ ದೊರೆಯುವಂತ ಸರಕಾರದ ಸವಲತ್ತುಗಳನ್ನು ನಮಗೆ ದೊರೆಯುತ್ತಿಲ್ಲ. ಎಲ್ಲಾ ಸರಕಾರ ಬಂದಾಗಲೂ ಅಸೋಸಿಯೇಷನ್ ಮೂಲಕ ಮನವಿ ಮಾಡಿದರೂ ನಮಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆದೇ ಇದ್ದು ಇದರ ದೊಡ್ಡ ನೋವಿದೆ ಎಂದರು. ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿದ್ದು ಅದರ ಜೊತೆಯಲ್ಲಿ ಛಾಯಾವೃತ್ತಿ ಬಾಂಧವರು ಬೆಳೆಯುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳನ್ನು ಅಸೋಸಿಯೇಷನ್ ಮೂಲಕ ಆಯೋಜಿಸಲಾಗುವುದು. ಈ ಕಾರ್ಯಾಗಾರಗಳಲ್ಲಿ ಸದಸ್ಯರು ಭಾಗವಹಿಸಿ ಛಾಯಾ ವೃತ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಸದಸ್ಯರು ಸಂಘಟನಾತ್ಮಕವಾಗಿ ಕೆಲಸ ಮಾಡುವ ಮೂಲಕ ವಲಯ ಹಾಗೂ ಜಿಲ್ಲಾ ಸಂಘಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಕ್ಯಾಮರಾ ಸೆಂಟರ್‌ನ ಮ್ಹಾಲಕ ಭರತ್ ಕುಮಾರ್, ಈಶ್ವರಮಂಗಲ ಎಲ್‌ಎನ್‌ಟಿ ಲ್ಯಾಡರ‍್ಸ್‌ನ ಮ್ಹಾಲಕ ತಿಲಕ್ ಗೌಡ, ನೂತನ ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ, ನಿಕಟಪೂರ್ವ ಗೌರವಾಧ್ಯಕ್ಷ ಹರೀಶ್ ಎಲಿಯ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರಮೋದ್ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಪೆರ್ಲಂಪಾಡಿ ಹರ್ಷಿತಾ ಸ್ಟುಡಿಯೋದ ಜಯಂತ ಗೌಡ ಕರ್ಕುಂಜ, ಪ್ರಧಾನ ಕಾರ್ಯದರ್ಶಿಯಗಿ ರಾಮಕುಂಜದ ಡಿ ಡಿಜಿಟಲ್ ಗಣೇಶ್ ಕಟ್ಟಪುಣಿ, ಕೋಶಾಧಿಕಾರಿಯಾಗಿ ಉಪ್ಪಿನಂಗಡಿ ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷರಾಗಿ ಫೋಟೋಶಾಫ್‌ನ ರಘು ಶೆಟ್ಟಿ, ಸಮಿತಿಯ ಉಪಾಧ್ಯಕ್ಷರಾಗಿ ವಿನಯ ರೈ, ಪ್ರಮೋದ್ ಸಾಲ್ಯಾನ್, ಜೊತೆ ಕಾರ್ಯದರ್ಶಿಯಾಗಿ ಶುಶ್ರುತ್, ಸಂತೋಷ್ ಬನ್ನೂರು, ಸಂಘಟನಾ ಕಾರ್ಯದರ್ಶಿಯಾಗಿ ಗುಣಕರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ವಿಟ್ಲ, ಕ್ರೀಡಾ ಕಾರ್ಯದರ್ಶಿಯಾಗಿ ಸುಪ್ರೀತ್, ರವಿ ಉಪ್ಪಿನಂಗಡಿ, ಛಾಯಾ ಕಾರ್ಯದರ್ಶಿಯಾಗಿ ಸುಭಾಷ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿಧಿ ನೆಕ್ಕರೆಕಾಡು, ಪ್ರಶಾಂತ್, ಹರೀಶ್ ಪುಣಚ, ವಸಂತ ಕಾಣಿಯೂರು, ವಸಂತ ರೋಲ್‌ಮಾರ್ಕ್, ಪ್ರಕಾಶ್ ನೆಲ್ಯಾಡಿ, ಚೇತನ್ ಕುಮಾರ್, ಜಿಲ್ಲಾ ನಿರ್ದೇಶಕರಾಗಿ ಸುದರ್ಶನ ರಾವ್, ನವೀನ್ ರೈ ಪಂಜಳ, ಜಯಂತ್ ಗೌಡ, ರಘು ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಹರೀಶ್ ಎಲಿಯ, ಗಣೇಶ್ ಕಟ್ಟಪುಣಿ, ಗಿರೀಶ್ ಕಲ್ಲೇರಿ, ಸಂತೋಷ್ ಬನ್ನೂರು, ವಲಯ ನಿರ್ದೇಶಕರಾಗಿ ರೋಹಿತ್ ಪುರುಷರಕಟ್ಟೆ, ಕುಶಲ ಗೌಡ ಬನ್ನೂರು, ರಾಜೇಶ್ ರಾಮಕುಂಜ, ಶಿವಕುಮಾರ್ ಅನಂತಾಡಿ, ವೈ.ಪ್ರಕಾಶ್, ರೋಹಿತ್, ವೇಣುಗೋಪಾಲ್, ಕಿಶೋರ್ ರೈ, ಪುನೀತ್ ಕಡಬ, ಚಿದಾನಂದ ಬರೆಪ್ಪಾಡಿ, ಭವಿತ್ ಪದ ಸ್ವೀಕರಿಸಿದರು.

ನಿವೃತ್ತ ಯೋಧ ಪುರಂದರ ನಾಯ್ಕ ಎಂ ಮಲ್ಲಿಪ್ಪಾಡಿ, ವಾಯುಸೇನೆಗೆ ಆಯ್ಕೆಗೊಂಡಿರುವ ಹಿರೇಬಂಡಾಡಿಯ ಕಂದಲಾಜೆ ಕೀರ್ತನ್ ಗೌಡ, ಯುವ ಉದ್ಯಮಿ ಈಶ್ವರಮಂಗಲದ ಎಲ್ ಎನ್ಟಿ ಲ್ಯಾಡರ್ಸ್ ನ ತಿಲಕ್ ಗೌಡ ಭಕ್ತಕೋಡಿ, ರಾಷ್ಟ್ರ ಮಟ್ಟದ ಹೈ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಕೀರ್ತಿ ಗೌಡ, ಕಡಬ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾಗಿ ಅಯ್ಕೆಯಾದ ಮಾಜಿ ಜಿಲ್ಲಾಧ್ಯಕ್ಷ ದಿ.ಶಿವರಾಮ್ ಕಡಬ ಅವರ ಪತ್ನಿ ನೀಲಾವತಿ ಶಿವರಾಮ್ ಕಡಬ, ಬಿಎಎಂಎಸ್ ಪರೀಕ್ಷೆಯ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಕೀರ್ತಿ ಮುಂಗ್ಲಿಮನೆ ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ವಿಠಲ ಚೌಟ ಮಂಗಳೂರು, ನಿಕಟಪೂರ್ವ ಅಧ್ಯಕ್ಷ ಪದ್ಮ ಪ್ರಸಾದ್ ಜೈನ್ ಕಾರ್ಕಳ, ಮಾಜಿ ಕಾರ್ಯದರ್ಶಿ ಹರೀಶ್ ಅಡ್ಯಾರ್, ಕನ್ಯಾನ ಸೇವಾ ಆಶ್ರಮದ ಈಶ್ವರ ಭಟ್, ಅಸೋಸಿಯೇಷನ್ ನ ಜಿಲ್ಲಾ ಪದಾಧಿಕಾರಿಗಳು, ವಲಯ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.

ಅಸೋಸಿಯೇಷನ್‌ನಿಂದ ನಡೆಸಲಾದ ಮುದ್ದಕಂದ ಫೋಟೋ ಸ್ಪರ್ದೆ 2025-26ರಲ್ಲಿ ಮೆಚ್ಚುಗೆ ಪಡೆದ ಪುಟಾಣಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಸದಸ್ಯರಾಗಿದ್ದು ಹೊಸ ಮನೆ ನಿರ್ಮಿಸಿದ ಮಂಜಪ್ಪ ಗೌಡ, ಹೊಸ ಸ್ಟುಡಿಯೋ ಪ್ರವೀಣ್ ವಿಟ್ಲ, ನವ ವಿವಾಹಿತ ಗುಣಕರ ದಿವ್ಯಾ ದಂಪತಿ, ಅತೀ ಹೆಚ್ಚ ರಕ್ತದಾನ ಮಾಡಿದ ಜಯಂತ ಗೌಡ ಕರ್ಕುಂಜ ಇವರುಗಳನ್ನು ಗೌರವಿಸಲಾಯಿತು.
ಹಿತಾ, ಮಾನ್ವಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ರಘು ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕಟ್ಟಡ ಸಮಿತಿಯ ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮರಾಜ್ ಚಾರ್ವಾಕ, ರವಿಚಂದ್ರ ರೈ ಮುಂಡೂರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಗಣೇಶ್ ಕಟ್ಟಪುಣಿ ವಂದಿಸಿದರು.






















