ಕಡಬ: ಬಿಳಿನೆಲೆ ಐತ್ತೂರು ವಲಯದ ಒಕ್ಕೂಟದ ಅಧ್ಶಕ್ಷರುಗಳಿಗೆ 2026ನೇ ಹೊಸ ವರ್ಷದ ಡೈರಿ ವಿತರಣೆ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ಐತ್ತೂರು ವಲಯದ ವಲಯ ಕಛೇರಿ ಯಲ್ಲಿ 2026ನೇ ಹೊಸವರ್ಷದ ಡೈರಿ ವಿತರಣೆ ಕಾರ್ಯಕ್ರಮ ನಡೆಯಿತು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿ ಮಾತನಾಡಿ ವಲಯದಲ್ಲಿ ಆರ್ಥಿಕ ವರ್ಷದಲ್ಲಿ ಇದುವರೆಗೆ ಆಗಿರುವ ಸಾಧನೆಗಳು ಹಾಗೂ ಮುಂದಿನ ಮೂರು ತಿಂಗಳಿನಲ್ಲಿ ಮಾಡಬೇಕಾದ ಅತೀ ತುರ್ತು ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ವಲಯದಲ್ಲಿ ಜನವರಿ ತಿಂಗಳಿನಲ್ಲಿ ನಡೆಸಲಿರುವ ದಾರ್ಮಿಕ ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ಚರ್ಚಿಸಿದರು.
ವಲಯದ ಅಧ್ಶಕ್ಷರುಗಳಾದ ಡೀಕಯ್ಶ ಗೌಡ ಕೋಣಾಜೆˌ ಧರ್ಮಪಾಲಗೌಡ ಕೈಕಂಭˌಸತೀಶ್ಚಂದ್ರ ರೈ ಬಂಟ್ರˌಧರ್ಮಪಾಲ ಗೌಡ ಕೊಂಬಾರುˌ ವಿನಯಕುಮಾರ್ 102ನೇ ನೆಕ್ಕಿಲಾಡಿ ಉಪಸ್ಥಿತರಿದ್ದು ವಲಯಒಕ್ಕೂಟದ ಅಧ್ಶಕ್ಷರಾದ ಸಂತೋಷ್ ಕೇನ್ಶ ರವರಿಂದ ನೂತನ ವರ್ಷದ ಡೈರಿಯನ್ನು ಪಡೆದುಕೊಂಡರು.
ತಾಲೂಕು ವಿಚಕ್ಷಣಾಧಿಕಾರಿ ಶೀಲಾವತಿ ಹಾಗೂ ತಾಲೂಕು ಕೃಷಿ ಮೇಲ್ವೀಚಾರಕ ಸೋಮೇಶ್ ˌಬಿಳಿನೆಲೆ ಐತ್ತೂರು ವಲಯದ ಸೇವಾಪ್ರತಿನಿಧಿಗಳಾದ ದಿನೇಶ್ ˌವಿನೋದ್ ಕೆ ಸಿ ˌಸತೀಶ್ ಎ ˌ ರೇಖಾˌ ಭವ್ಶಶ್ರೀ ಮತ್ತು ನೇತ್ರ ವಲಯದ ಸಿ ಯ ಸ್ಸಿ ಸೇವಾದಾರರಾದ ರಕ್ಷಿತಾ ಮತ್ತು ರಶ್ಮೀಕಾ ಉಪಸ್ಥಿತರಿದ್ದು ನೂತನ ವರ್ಷ 2026ರ ಡೈರಿಯನ್ನು ಪಡೆದುಕೊಂಡರು.






















