ಪುತ್ತೂರು : ನಗರದ ಹಲವು ಕಡೆ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ಇಳಿದಿದ್ದು, ವಾಹನಗಳ ದಾಖಲೆಯನ್ನು ಪರಿಶೀಲಿಸಿ, ಕಾನೂನು ಉಲ್ಲಂಘನೆ ಮಾಡಿ ಚಲಾಯಿಸುತ್ತಿದ್ದ ಹಲವು ವಾಹನಗಳಿಗೆ ದಂಡವನ್ನು ವಿಧಿಸಿದ್ದಾರೆ. ಪೊಲೀಸ್ ಇಲಾಖೆ ಅತಿವೇಗ ತಡೆಗಟ್ಟಲು ನಿಯಮಿತ ತಪಾಸಣೆ, ಸ್ಪೀಡ್ ಗನ್ ಬಳಕೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳ ಅತಿವೇಗ ದಿನೇದಿನೇ ಹೆಚ್ಚುತ್ತಿದ್ದು, ಇದರಿಂದ ಸಾರ್ವಜನಿಕರ ಜೀವಭದ್ರತೆಗೆ ಗಂಭೀರ ಅಪಾಯ ಉಂಟಾಗಿದೆ. ವಿಶೇಷವಾಗಿ ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ನಿಗದಿತ ವೇಗ ಮಿತಿಯನ್ನು ಮೀರಿ ವಾಹನಗಳು ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರು ಹೇಳುವಂತೆ, ನಗರದ ಪ್ರಮುಖ ರಸ್ತೆಗಳಲ್ಲಿಯೂ ಸ್ಪೀಡ್ ಲಿಮಿಟ್ ಬೋರ್ಡ್‌ಗಳು ಇದ್ದರೂ ಅವನ್ನು ನಿರ್ಲಕ್ಷ್ಯ ಮಾಡುವ ಚಾಲಕರು ಹೆಚ್ಚಾಗಿದ್ದಾರೆ. ಬೈಕ್ ಹಾಗೂ ಕಾರುಗಳ ಅತಿವೇಗದಿಂದ ಪಾದಚಾರಿಗಳು, ವೃದ್ಧರು ಮತ್ತು ಮಕ್ಕಳು ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇ ರೀತಿ ಬೈಪಾಸ್ ರಸ್ತೆಯಲ್ಲಿ ವಾಹನಗಳ ಸ್ಪೀಡ್ ಲಿಮಿಟ್ ಅನ್ನು ಪರಿಶೀಲಿಸಿ, ಅತಿ ವೇಗದಿಂದ ಚಲಾಯಿಸಿದ ವಾಹನಗಳ ಮೇಲೆ ದಂಡವನ್ನು ಹಾಕಿ ಬಿಟ್ಟಿದ್ದಾರೆ. ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ, ಸ್ಕೂಲ್, ಆಸ್ಪತ್ರೆ, ಜನಸಂದಣಿ ಪ್ರದೇಶ: 20–30 ಕಿಮೀ/ ನಗರಸಭಾ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಮಿತಿ 30ರಷ್ಟು ಇದ್ದು, ಇದನ್ನು ವಾಹನ ಚಾಲಕರು ಪಾಲಿಸದೆ ರಸ್ತೆಯಲ್ಲಿ ಅತಿ ವೇಗ ಹಾಗೂ ಅಡ್ಡಾದಿಡ್ಡಿ ಚಲಾಯಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ, ಇತ್ತೀಚೆಗೆ ಬೈಪಾಸ್ ರಸ್ತೆಯಲ್ಲಿ ಹಲವು ಅಪಘಾತಗಳು ಆಗಿದ್ದು, ಸಾರ್ವಜನಿಕರು ಇಂತಹ ವಾಹನ ಚಾಲಕರಿಗೆ ಹಿಡಿ ಶಾಪ ಹಾಕುತ್ತಿದ್ದು, ಇದೀಗ ಟ್ರಾಫಿಕ್ ಪೊಲೀಸ್ ಕಾರ್ಯಾಚರಣೆಯಿಂದ ನಿಟ್ಟುಸಿರು ಬಿಡುವಂತಾಗಿದೆ, ಅದರಂತೆ ಎಲ್ಲಾ ವಾಹನ ಚಾಲಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಟ್ರಾಫಿಕ್ ಪೊಲೀಸರು ವಾಹನ ಚಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.























