ಬೆಳ್ತಂಗಡಿ: ಮಹಿಳಾ ಗ್ರಾಮ ಸಭೆಯನ್ನು ಬೆಳಾಲು ಗ್ರಾಮ ಪಂಚಾಯಿತಿನಲ್ಲಿ ಇಂದು ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ ಕೆ ಉದ್ಘಾಟಿಸಿ ಮಹಿಳಾ ಸಬಲೀಕರಣ ಮಹಿಳೆಯರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮಹಿಳೆ ಆತ್ಮವಿಶ್ವಾಸದಿಂದಿರಲು ದೌರ್ಜನ್ಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಬೇಕು ಸಮಾಜದಲ್ಲಿ ಮಹಿಳೆಯರಿಗೆ ಆಗುವ ದೌರ್ಜನ್ಯವನ್ನು ಪರಿಹರಿಸಲು ಬೇಕಾದ ಕಾನೂನು ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಾಲು ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಇವರು ವಹಿಸಿಕೊಂಡು ಮಹಿಳಾ ಗ್ರಾಮ ಸಭೆಯ ಮಹತ್ವ ತಿಳಿಸಿದರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಶ್ರೀಮತಿ ಶಕುಂತಲಾ ಶೆಣೈ ಮಹಿಳೆಯರ ಸ್ಥಾನಮಾನ ಹಾಗೂ ಪಂಚಾಯತಿನ ಸೌಲಭ್ಯಗಳ ಬಳಕೆಯ ಬಗ್ಗೆ ತಿಳಿಸಿದರು .
ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರಾದ ಶ್ರೀಮತಿ ಸುಭಾಷಿಣಿ ಮಹಿಳೆಯರಿಗೆ ಇರುವಂತ ಕಾನೂನು ಸಲಹೆಯನ್ನು, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು ಮತ್ತು ಅದಕ್ಕೆ ಕಾನೂನಾತ್ಮಕ ಪರಿಹಾರಗಳ ತಿಳಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಸಮರ್ಥ್ ಇವರು ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ನೈಜ ರೀತಿಯಲ್ಲಿ ವಿವರಿಸಿ ಕಾನೂನನ್ನು ದುರ್ಬಳಕೆ ಮಾಡಬಾರದು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗಲು ಸಾಧ್ಯ ಎಂದು ತಿಳಿಸಿದರು.
ಗ್ರಾಮ ಸಭೆಯಲ್ಲಿ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಸದಸ್ಯರಾದ ಸತೀಶ್ ಎಳ್ಳುಗದ್ದೆ ,ಪ್ರೇಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯದ ಜಗದೀಶ್, ಬೆಳ್ತಂಗಡಿ ತಾಲೂಕು ಬಿ ಆರ್ ಪಿ ಪಿ ಆರ್ ಐ ಶ್ರೀಕಲಾ ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಕೋಶಾಧಿಕಾರಿ ಶ್ರೀಮತಿ ಮುಮ್ತಾಜ್ ಬೇಗಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶಾರದಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಂಜೀವಿನಿ ಹಾಗೂ ಶ್ರೀ ಶಕ್ತಿ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಈ ಸಭೆಯಲ್ಲಿ ಬೆಳಾಲು ಗ್ರಾಮದ ಮಹಿಳೆಯರು ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಪಂಚಾಯತ್ ಸಿಬ್ಬಂದಿ ವರ್ಗ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



























