ತಪಸ್ಯ ಬೀಚ್ ಫೆಸ್ಟಿವಲ್ ನಲ್ಲಿ ನಡೆದ ಕರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳು, ಭಾರತೀಯ ಬೀಚ್ ರೆಸ್ಲಿಂಗ್ ಚೇರ್ ಮೆನ್ ಮತ್ತು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಯವರು ನಿತ್ಯಾನಂದ ಶೆಟ್ಟಿಯವರನ್ನು ಆಯ್ಕೆ ಮಾಡಿದರು.
ನಿತ್ಯಾನಂದ ಶೆಟ್ಟಿಯವರು ಲಯನ್ಸ್ ಕ್ಲಬ್ ನ ಕಾವೂರು ಇದರ ಮಾಜಿ ಅಧ್ಯಕ್ಷರಾಗಿ, ಪಶ್ಚಿಮ ಆಫ್ರಿಕಾದ ಸೀರಾಲಿಯೋನ್ ವಿಶೇಷ ನ್ಯಾಯಾಲಯದಲ್ಲಿ (5 ವರ್ಷಗಳ ಕಾಲ) ಅಂತರರಾಷ್ಟ್ರೀಯ ನಾಗರಿಕ ಸೇವಕರಾಗಿ ಮತ್ತು ಲೆಬನಾನ್‌ನ ವಿಶೇಷ ನ್ಯಾಯಾಲಯದಲ್ಲಿ ಅಂತರರಾಷ್ಟ್ರೀಯ ನಾಗರಿಕ ಸೇವಕರಾಗಿ 9 ವರ್ಷಗಳ ಕಾಲ ಅದೇ ಹುದ್ದೆಯನ್ನು ಹೊಂದಿದ್ದರು.
ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ್, ವಿ ಪಿ ಸಿಂಗ್, ಎಚ್ ಡಿ ದೇವೇಗೌಡ, ಐ ಕೆ ಗುಜರಾಲ್ ಮತ್ತು ಇನ್ನೂ ಅನೇಕ ಪ್ರಧಾನ ಮಂತ್ರಿಗಳ ನಿಕಟ ರಕ್ಷಣಾ ತಂಡದಲ್ಲಿ ಎಸ್‌ಪಿಜಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಮಂಗಳೂರಿನಲ್ಲಿ ಸತತ 3 ವರ್ಷಗಳಿಂದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ ಬೀಚ್ ರೆಸ್ಲಿಂಗ್ ಯಶಸ್ವೀಯಾಗಿ ನಿಭಾಯಿಸಿದ ನಿತ್ಯಾನಂದ ಶೆಟ್ಟಿ ರವರು ಕರ್ನಾಟಕ ಬೀಚ್ ರೆಸ್ಲಿಂಗ್ ನ ಚೇರ್ ಮೆನ್ ಆಗಿ ಆಯ್ಕೆಯಾಗಿದ್ದಾರೆ.


























