ಬಂದಾರು : ಜ 25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಮೈರೋಳ್ತಡ್ಕ ಒಕ್ಕೂಟ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೈರೋಳ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ. 25 ಆದಿತ್ಯವಾರ ದಂದು ಮೈರೋಳ್ತಡ್ಕದಲ್ಲಿ 36 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪೂಜಾ ಸಮಿತಿಯ ಅಧ್ಯಕ್ಷರಾದ ಚಂದಪ್ಪ ಗೌಡ ನಡುಮಜಲು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಡಂತ್ಯಾರು ವಲಯದ ಮೇಲ್ವಿಚಾರಕರಾದ ಕೇಶವ ರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಲೋಕಕಲ್ಯಾಣಾರ್ಥವಾಗಿ ಪ್ರಾರಂಭಿಸಲಾದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಮ್ಮ ಹಿಂದೂ ಧರ್ಮದ ಸಂಪ್ರದಾಯವನ್ನು ಬೆಳೆಸುವ ಹಾಗೂ ಜನರ ಸಂಘಟನೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪೂಜ್ಯರು ಈ ಕಾರ್ಯಕ್ರಮ ರೂಪಿಸಿದರು
. ನಾವೆಲ್ಲರೂ ನಮ್ಮ ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸೋಣ ಸತ್ಯನಾರಾಯಣ ಪೂಜೆಯoತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಂಪತಿ ಸಮೇತರಾಗಿ ಪಾಲ್ಗೊಳ್ಳೋಣ ಎಂದು ತಿಳಿಸಿದರು. ಧಾರ್ಮಿಕ ಶ್ರದ್ದಾ ಕೇಂದ್ರ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಶ್ರಮದಾನದಲ್ಲಿ ನಾವೆಲ್ಲರೂ ತುಂಬು ಮನಸ್ಸಿನಿಂದ ಪಾಲ್ಗೊಂಡಾಗ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಹಿಂದೂ ಧರ್ಮದ ಸಂಸ್ಕೃತಿಯನ್ನು ತಿಳಿಸೋಣ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಪ್ರಪುಲ್ಲಚಂದ್ರ ಅಡ್ಯoತಾಯ ರವರು ಮಾತನಾಡಿ ನಮ್ಮ ಗ್ರಾಮಭಿವೃದ್ಧಿ ಯೋಜನೆಯ ಹಿಂದಿನ ವೈಭವವನ್ನು ಉಳಿಸಿ ಬೆಳೆಸೋಣ, ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲರೂ ಮನಪೂರ್ವಕವಾಗಿ ತೊಡಗಿಸಿಕೊಳ್ಳೋಣ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಣಿಯೂರು ವಲಯಧ್ಯಕ್ಷರಾದ ರಮಾನಂದ ಪೂಜಾರಿ, ಒಕ್ಕೂಟದ ಅಧ್ಯಕ್ಷರಾದ ಸುಂದರ ಪೂಜಾರಿ, ಕಣಿಯೂರು ವಲಯ ಮೇಲ್ವಿಚಾರಕರಾದ ಕು. ಶಿಲ್ಪಾ, ಮೈರೋಳ್ತಡ್ಕ ಒಕ್ಕೂಟ ನಿಕಟ ಪೂರ್ವ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ಉಪಸ್ಥಿತರಿದ್ದರು. ಮೈರೋಳ್ತಾಡ್ಕ ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ನೆಕ್ಕರಾಜೆ ಕಾರ್ಯಕ್ರಮ ನಿರೂಪಿಸಿ, ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಶ್ರೀಮತಿ ಚಂದ್ರಕಲಾ ಕೊಡಿನೆಕ್ಕಿಲು ಧನ್ಯವಾದವಿತ್ತರು.
























