ಪುತ್ತೂರು: ಇತಿಹಾಸ ಪ್ರಸಿದ್ದವೂ,ಕಾರಣಿಕ ಕಗಷೇತ್ರವೆಂದೇ ಪ್ರಸಿದ್ದಿಪಡೆದ ಆರ್ಲಪದವು ಕಿನ್ನಿಮಾಣಿ,ಪೂಮಾಣಿ ಪಿಲಿಭೂತ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಶಾಸಕ ಅಶೋಕ್ ರೈ ಅನ್ನದಾನ ವ್ಯವಸ್ಥೆಯಲ್ಲಿ ಕಲ್ಪಿಸಿದ್ದಾರೆ, ಕ್ಷೇತ್ರದ ಆಡಳಿತ ಮೊಕ್ತೇಸರರ ಸಲಹೆಯಂತೆ, ಸಾರ್ವಜನಿಕಭಕ್ತಾದಿಗಳ ಸಹಕಾರದಿಂದ ಜಾತ್ರೋತ್ಸವದ ಕೊನೇಯ ದಿನವಾದ ಜ.28 ಕ್ಕೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೀತ್ಸವ ಜ.26 ರಿಂದ 28 ರ ತನಕ ನಡೆಯಲಿದೆ. ಜ.28 ರಂದು ಪಿಲಿಭೂತ ನೇಮೋತ್ಸವ ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸುತ್ತಾರೆ.
ದೈವಸ್ಥಾನದಲ್ಲಿ ದೈವಿಕ ಕಾರ್ಯ ಆರಂಭವಾಗಿ ನೂರಾರು ವರ್ಷಗಳೇ ಕಳೆದಿದೆ. ಅಂದಿನಿಂದ ಇಂದಿನ ತನಕ ದೈವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ನೇಮೋತ್ಸವದಂದು ಅನ್ನದಾನ ವ್ಯವಸ್ಥೆ ಇರಲಿಲ್ಲ. ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸುವ ಈ ನೇಮೋತ್ಸವಕ್ಕೆ ಬರುವ ಭಕ್ತಾದಿಗಳು ಊಟಕ್ಕೆ ಮನೆಗೆ ತೆರಳುತ್ತಿದ್ಧರು. ಇದನ್ನು ಗಮನಿಸಿದ ಶಾಸಕ ಅಶೋಕ್ ರೈ ಅವರು ಆಡಳಿತ ಮೊಕ್ತೇಸರ ಶ್ರೀ ಕೃಷ್ಣ ಬೊಳಿಲ್ಲಾಯ ಅವರ ಮನವೊಲಿಸಿ ಅವರ ಸಹಕಾರದಿಂದ ಅನ್ನದಾನ ವ್ಯವಸ್ಥೆಯನ್ನು ಆರಂಭಿಸಿದ್ದಾರೆ. ಈ ಅನ್ನದಾನ ಕಾರ್ಯಕ್ರಮಕ್ಕೆ ಶಾಸಕರ ಜೊತೆ ಸ್ಥಳಿಯ ಪ್ರಮುಖರು ಕೈ ಜೋಡಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ನಾಳೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಈ ಸೇವೆಯಲ್ಲಿ ಶಾಸಕರ ಜೊತೆ ಸದಾಶಿವ ರೈ ಸೂರಂಬೈಲು, ಜಗನ್ಮೋಹನ್ ರೈ, ವಿಶ್ವನಾಥ ರೈ ಕಡಮಾಜೆ, ಬಾಬು ರೈ ಕೋಟೆ, ಶ್ರೀಪ್ರಸಾದ್ ಪಾಣಾಜೆ, ಶ್ರೀಹರಿ ಪಾಣಾಜೆ, ಚಂದ್ರ ಎ ಬಿ, ಪುಷ್ಪರಾಜ್ ರೈ ಕೋಟೆ, ಪುಷ್ಪರಾಜ್ ರೈ ಕೋಟೆ, ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ರಾಮನಾಯ್ಕ್ ಕೋಟೆ, ಸದಾನಂದ ನಾಯ್ಕ ಭರಣ್ಯ, ಇವರೆಲ್ಲರ ಸಹಕಾರದಿಂದ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.
ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೋತ್ಸವದಂದು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಅವರಿಗೆ ಅನ್ನದಾನದ ವ್ಯವಸ್ಥೆ ಇರಲಿಲ್ಲ. ಈ ಬಾರಿ ಕ್ಷೇತ್ರದ ಇತಿಹಾಸದಲ್ಲೇ ಪ್ರಥಮ ಎಂಬಂತೆ ವಾರ್ಷಿಕ ಜಾತ್ರೆ ಹಾಗೂ ನೇಮೋತ್ಸವದಂದು ಸುಮಾರು 15 ಸಾವಿರ ಮಂದಿಗೆ ಅನ್ನದಾನ ನಡೆಯಲಿದೆ. ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯರು ಹಾಗೂ ಪಾಣಾಜೆಯ ಪ್ರಮುಖರ ಮತ್ತು ಭಕ್ತಾದಿಗಳ ಸಹಕಾರದಿಂದ ಅನ್ನದಾನ ಸೇವೆ ನೆರವೇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನದಾನ ಪ್ರಸಾದ ಸ್ವೀಕರಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ.
ಅಶೋಕ್ ರೈ ಶಾಸಕರು,ಪುತ್ತೂರು


























