ಕಲಬುರಗಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬರಗಾಲ ಗ್ಯಾರಂಟಿ, ಅಲ್ಲಲ್ಲಿ ಬಾಂಬ್ ಸ್ಫೋಟ ಗ್ಯಾರಂಟಿ, ಜಾತಿ ಜಾತಿ ಜಗಳ ಗ್ಯಾರಂಟಿ, ಹಿಂದೂಗಳ ಹತ್ಯೆ ಗ್ಯಾರಂಟಿ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ರೂಪದಲ್ಲಿ ನಮ್ಮ ಹಣ ನಮಗೆ ನೀಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಭ್ರಷ್ಟಾಚಾರ ಇಲ್ಲದೆ ಮೋದಿ ಗ್ಯಾರಂಟಿಯನ್ನು ಜನರ ಮನೆ ಬಾಗಿಲಿಗೆ ಯಾವುದೇ ದಲ್ಲಾಳಿಗಳ ನೆರವಿಲ್ಲದೆ ಮುಟ್ಟಿಸುತ್ತಿದ್ದಾರೆ. ಉಜ್ವಲ ಯೋಜನೆ ಅಡಿ 10 ಕೋಟಿ ಜನರಿಗೆ ನೆರವು ದೊರೆತಿದೆ. ಮೋದಿ ಅವರ ಗ್ಯಾರಂಟಿ ಸಣ್ಣ ಸಣ್ಣ ಊರುಗಳಿಗೂ ಮುಟ್ಟಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ನ ಜನವಿರೋಧಿ ಕ್ರಮಗಳನ್ನು ಬಿಜೆಪಿಯ ಕಾರ್ಯಕರ್ತರು ಮನೆ ಮನೆಗೂ ಮುಟ್ಟಿಸುವ ದೊಡ್ಡ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.
ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾದವ್ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.