ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ದಿನಾಂಕ 7-9-2026ರಂದು ಸುಭದ್ರ ಸಭಾಂಗಣದಲ್ಲಿ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಟ್ರಸ್ಟಿನ ಅಧ್ಯಕ್ಷರಾಗಿ ಶ್ರೀರಾಮ್ ಭಟ್ ಪಾತಾಳ ಇವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವಲ್ ಘಾಟೆ ಮತ್ತು ಹರೀಶ್ ಮರುವಾಳ ಹಾಗೂ ಕೋಶಾಧಿಕಾರಿಯಾಗಿ ಸುಜಿತ್ ಕಜೆ ಯವರನ್ನ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಗೌಡ ಕೋಡಿಬೈಲು ಮತ್ತು ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಕೆ. ಅನಿಲ್ ತೆಂಕಿಲ ಮತ್ತು ಮನೀಶ್ ಕುಲಾಲ್, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನುಜಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ನವೀನ್ ರೈ. ಎಸ್, ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಹರೀಶ್ ಭಟ್ ಪುಣಚ, ಜಯರಾಮ್ ಪೂಜಾರಿ ಒತ್ತೆ ಮುಂಡೂರು, ಕಾರ್ಯದರ್ಶಿಯಾಗಿ ಪ್ರಕಾಶ್ ಕೆಮ್ಮಾಯಿ, ಪದ್ಮನಾಭ ಗೌಡ, ಮಹಾಬಲ ಕೆಮ್ಮಾಯಿ, ಚಂದ್ರಶೇಖರ ಜಿಡೆಕಲ್ಲು, ಅನಂತ ಪ್ರಸಾದ್ ವಿಟ್ಲ , ಶೇಖರ್ ರಾಗಿದಕುಮೇರ್, ನಿರ್ದೇಶಕರಾಗಿ ಪ್ರೇಮ್ ರಾಜ್ ಆರ್ಲಪದವು, ರೂಪೇಶ್ ನಾಯ್ಕ್, ಮಹೇಂದ್ರ ವರ್ಮ, ಗಣೇಶ್ಚಂದ್ರ ಭಟ್ ಮಕರಂದ, ರವಿಕುಮಾರ್ ರೈ ಕೆದಂಬಾಡಿ ಮಠ, ರಾಜು ಶೆಟ್ಟಿ ಕೆಮ್ಮಾಯಿ ಮತ್ತು ಇದರೊಂದಿಗೆ 65ಕ್ಕೂ ಹೆಚ್ಚು ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

























