ಪುತ್ತೂರು: ಬಿಜೆಪಿ ಕಚೇರಿಯಲ್ಲಿ ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಮಂಡಲಗಳ ಕಾನೂನು ಪ್ರಕೋಷ್ಠದ ಆಯ್ಕೆಯಾದ ನೂತನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮ ನ. 11 ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಶ್ರೀಧರ ಶೆಟ್ಟಿ ಪುಳಿಂಚ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ಅವಧಿಯಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಠವು ನಡೆಸಿದ ವಿವಿಧ ಕಾರ್ಯಚಟುವಟಿಕೆಗಳನ್ನು ಸವಿಸ್ತಾರವಾಗಿ ಸಭೆಗೆ ವಿವರಿಸಿದರು. ಅಲ್ಲದೆ, ಮಂಡಲಗಳ ಕಾನೂನು ಪ್ರಕೋಷ್ಠಗಳು ಕೇವಲ ನಾಮಕಾವಸ್ಥೆಗೆ ಸೀಮಿತವಾಗದೆ, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರೊಂದಿಗೆ ಕಾನೂನಿಗೆ ಸಂಬಂಧಿಸಿದ ಪಕ್ಷದ ಹಾಗೂ ಕಾರ್ಯಕರ್ತರಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನೂ ಮಾಡಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಎರಡೂ ಮಂಡಲಗಳ ನೂತನ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದರು.
ಜಿಲ್ಲಾ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ಪ್ರಮೋದ್ ಕುಮಾರ್ ಕೇರ್ವಾಸೆ ಅವರು ಮಾತನಾಡಿ, ಪಕ್ಷದ ಸಂಘಟನೆಯಲ್ಲಿ ಕಾನೂನು ಪ್ರಕೋಷ್ಠದ ಅವಶ್ಯಕತೆ ಮತ್ತು ಮಹತ್ವವನ್ನು ವಿವರಿಸಿದರು. ಪುತ್ತೂರು ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಿಬೆಳೆಸುವಲ್ಲಿ ಕಾನೂನು ಪ್ರಕೋಷ್ಠದ ಸಂಪೂರ್ಣ ಸಹಕಾರವನ್ನು ಕೋರಿದರು.
ಬಿಜೆಪಿ ನಾಯಕ ಗೋಪಾಲಕೃಷ್ಣ ಹೇರಳೆಯವರು ಸಾಂದರ್ಭಿಕವಾಗಿ ಮಾತನಾಡಿ, ಹಿಂದಿನ ಅವಧಿಗಳಲ್ಲಿ ಕಾನೂನು ಪ್ರಕೋಷ್ಠವು ಸಲ್ಲಿಸಿದ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸಿ ಪ್ರಸ್ತುತ ಕಾನೂನು ಪ್ರಕೋಷ್ಠಕ್ಕೆ ಶುಭ ಹಾರೈಸಿದರು.
ಪುತ್ತೂರು ನಗರ ಮಂಡಲ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ನಾಗರಾಜ್ ಯು.ಎನ್, ಸಹ ಸಂಚಾಲಕರಾಗಿ ರವೀಂದ್ರ ರೈ, ಸದಸ್ಯರಾಗಿ ಕೃಷ್ಣಪ್ಪ ಗೌಡ ಕಕ್ವೆ , ವಿವೇಕಾನಂದ ಕೆ.ಎಸ್., ಸಂಧ್ಯಾಲಕ್ಷ್ಮಿ, ಅರ್ಚನಾ ಬಿ.ಕೆ., ತೇಜಸ್ ಕೊಂಬೆಟ್ಟು, ಪುತ್ತೂರು ಗ್ರಾಮಾಂತರ ಮಂಡಲ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಡಿ. ಶಂಭು ಭಟ್, ಸಹ ಸಂಚಾಲಕರಾಗಿ ಗೋವಿಂದರಾಜ್ ಕುಂಡಡ್ಕ, ಸದಸ್ಯರಾಗಿ ಮಂಜುನಾಥ್ ಎನ್.ಎಸ್., ಮಹಾಬಲ ಶೆಟ್ಟಿ ಕೆ., ಪ್ರದೀಪ್ ಸೂರ್ಯ ಇಡ್ಕಿದು, ಶ್ರೀಕಾಂತ್ ಈಶ್ವರಮಂಗಲ, ಪ್ರದೀಪ್ ಅಳಿಕೆ ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಶ್ರೀ ಶಿವ ಕುಮಾರ್, ಜಿಲ್ಲಾ ಲೀಗಲ್ ಸೆಲ್ ಸದಸ್ಯ ಸಂದೀಪ್ ವಳಲಂಬೆ, ಓಬಿಸಿ ಮೋರ್ಚಾದ ನಿರಂಜನ್ ಮಾನ್ಯ, ನಾಯಕರಾದ ನಾಗೇಂದ್ರ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ಗ್ರಾಮಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ದಡ್ಡು ಕಾರ್ಯಕ್ರಮ ನಿರ್ವಹಿಸಿದರು. ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಶಿಧರ ನಾಯಕ್ ವಂದಿಸಿದರು.
























