“ಸ್ವಲ್ಪ ಈ ಕಡೆ ನೋಡಿ…. ಸ್ಮೈಲ್ ಪ್ಲೀಸ್…” ಎಂಬ ಮಾತು ಕೇಳಿ , ಮುಖದಲ್ಲಿ ಮಂದಹಾಸ ಬೀರುತ್ತಾ ಸ್ಟೈಲ್ ಆಗಿ ಫೋಸ್ ಕೊಡುತ್ತಾ ನಿಲ್ಲುವುದೇ ನಾವು ಫೋಟೋ ಗೆ.
ಹೌದು! ಈ ಫೋಟೋಗ್ರಾಫಿ ಮತ್ತು ಫೋಟೋಗ್ರಾಫರ್ ಮಾನವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.
ಹಿಂದಿನ ಕಾಲದಲ್ಲಿ ಫೋಟೋಗ್ರಾಫರ್ ಬಂದನೆಂದರೆ ಮನೆ ಮಂದಿಗೆಲ್ಲ ಬಹಳ ಸಡಗರ , ಮನೆಯವರೆಲ್ಲ ಹೊಸ ಬಟ್ಟೆ ಧರಿಸಿ ಒಟ್ಟು ಸೇರಿ ಫ್ಯಾಮಿಲಿ ಫೋಟೋ ತೆಗೆಸಿಕೊಳ್ಳುವುದೆಂದರೆ ಎಲ್ಲಿಲ್ಲದ ಸಂಭ್ರಮ ಮತ್ತೆ ಆ ಫೋಟೋವನ್ನು ಫ್ರೇಮ್ ಮಾಡಿ ಮನೆಯ ಗೋಡೆಯಲ್ಲಿ ನೇತಾಡಿಸಿ ತಮ್ಮ ಮೊಮ್ಮಕ್ಕಳು ಮರಿಮಕ್ಕಳಿಗೆ ತೋರಿಸಿ ಖುಷಿಪಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಫೋಟೋಗ್ರಫಿ ಎನ್ನುವುದು ತನ್ನಲೇ ಅನೇಕ ಹೊಸತನವನ್ನು ಕಂಡುಕೊಂಡಿದೆ.
ಫೋಟೋಗ್ರಾಫಿ ಅನ್ನುವುದು ಕೇವಲ ಒಂದು ವೃತ್ತಿಯಾಗದೆ ಮಾನವನ ಭಾವನಾತ್ಮಕ ಕಲೆಯಾಗಿದೆ. ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇದ್ದು ಅದರಲ್ಲಿ ಸೆಲ್ಫಿ ತೆಗೆದ ಮಾತ್ರಕ್ಕೆ ಅವರೆಲ್ಲ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ. ಅತ್ಯುತ್ತಮ ಫೋಟೊ ಸೆರೆಹಿಡಿಯುವುದು ಒಂದು ಕಲೆ, ಕೌಶಲ್ಯ.
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುವ ಮಾತಿದೆ. ಮಾತಿನಿಂದ ಹೇಳಲಾಗದ್ದನ್ನು ಫೋಟೊ ವಿಷಯವನ್ನು ವ್ಯಕ್ತಪಡಿಸುತ್ತದೆ. ಫೋಟೊಗಳು ಫೋಟೊಗ್ರಫರ್‌ನ ಸೂಕ್ಷ್ಮತೆ ಸೂಚಿಸುತ್ತದೆ. ಫೋಟೊಗಳು ಅತ್ಯುತ್ತಮವಾಗಿ ಮೂಡಿಬರಲು ಲೆನ್ಸ್‌ಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ದೂರದ ವಸ್ತು, ಹತ್ತಿರದ ವಸ್ತು, ಸೂಕ್ಷ್ಮ ವಸ್ತು, ಹೀಗೆ ಭಿನ್ನ ಸನ್ನಿವೇಶಗಳಲ್ಲಿ ಭಿನ್ನ ಲೆನ್ಸ್‌ಗಳ ಮೂಲಕ ಕ್ಲಿಕ್ಕಿಸಲುನೆರವಾಗಲಿವೆ.
ಹಿಂದಿನ ಇತಿಹಾಸಕೆ ಸಾಕ್ಷಿ ಫೋಟೋ. ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಸಾಧ್ಯತೆ ಒಂದು ಪೋಟೋವಿನಲ್ಲಿದೆ. ಅದೆಷ್ಟೋ ವಿಷಯಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹಳೆಯದನ್ನು ಪ್ರಸ್ತುತದಲ್ಲಿ ನೆನಪಿಸಿಕೊಳ್ಳಲು ಒಂದು ಆಧಾರವೇ ಫೋಟೊ.
ಕಲೆ, ಇತಿಹಾಸ ಮತ್ತು ವಿಜ್ಞಾನವನ್ನು ತಿಳಿಸಲು ವಿಶ್ವದಾದ್ಯಂತ ವಿಶ್ಯ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ. ಇಂದು ಅಭಿವೃದ್ಧಿ ಮತ್ತು ಹೊಸ ಹೊಸ ಅಳವಡಿಕೆಯ ಮೂಲಕ ಫೋಟೋಗ್ರಫಿ ತಂತ್ರಜ್ಞಾದಲ್ಲಿ ಮುನ್ನುಗ್ಗುತ್ತಿದೆ ಫೋಟೋಗ್ರಾಫರ್ ಇಲ್ಲದ ಕಾರ್ಯ?
ಫೋಟೋಗ್ರಾಫರ್ ಇಲ್ಲದ ಕಾರ್ಯಕ್ರಮ ಬೋರ್ ಎನಿಸಿ ಬಿಡುತ್ತದೆ. ಇಂದು ಎಲ್ಲಾ ಸಮಾರಂಭಗಳಲ್ಲಿ ಫೋಟೋ ಅತೀ ಮುಖ್ಯವಾಗಿದೆ. ಮಾನವನ ಜೀವನದಲ್ಲಿ ನಡೆದ ಅತೀ ಸಂತೋಷದ ಕ್ಷಣವನ್ನು ಮತ್ತೆ ನಾವು ನೋಡುವುದು ಫೋಟೋದಲ್ಲಿ ಮಾತ್ರ. ನಾವು ತೆಗೆಸಿಕೊಂಡ ಫೋಟೊ ಹೇಗೆ ಬಂದಿದೆ ಎಂಬ ಕುತೂಹಲದಿಂದ ಫೋಟೋಗ್ರಾಫರ್ ಬಳಿ ಫೋಟೊ ಕೇಳಿ ಪಡೆದು ನೋಡುವ ತನಕ ಸಮಾಧಾನವೇ ಇರುವುದಿಲ್ಲ.
ಹೀಗೆ ನಮ್ಮನ್ನು ತಮ್ಮ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದು ನಮ್ಮನ್ನು ಖುಷಿ ಪಡಿಸುವ ಫೋಟೋಗ್ರಾಫರ್, ತನ್ನ ಮನದಲ್ಲಿ ಅದೆಷ್ಟೇ ನೋವಿದ್ದರೂ ಇನ್ನೊಂದು ಜೀವದ ಮುಖದಲ್ಲಿ ನಗು ತರಿಸುವವ. ಯಾವುದೇ ಕಾರ್ಯಕ್ರಮದಲ್ಲಿ ಕೊನೆ ತನಕ ಇದ್ದು ಆ ಕಾರ್ಯಕ್ರಮವನ್ನು ಪ್ರಚಾರಗೊಳಿಸುವವನು ಫೋಟೋಗ್ರಾಫರ್.. ಕೆಲವರಿಗೆ ಫೋಟೋಗ್ರಾಫಿ ಹವ್ಯಾಸವಾದರೆ ಇನ್ನೂ ಅನೇಕರ ಪಾಲಿಗೆ ಉದ್ಯೋಗ ಕ್ಷೇತ್ರವಾಗಿದೆ….
ವೈಶಾಲಿ ಭಂಡಾರಿ ಕೈಪ