ಹಗಲು ವೇಳೆ ವಾಹನಗಳ ಓಡಾಟದ ಮಧ್ಯೆಯೇ ಯುವಕರು ನಡುರಸ್ತೆಗೆ ಕುಳಿತು ನಮಾಜ್ ಮಾಡಿದ ಘಟನೆ ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಡೆದಿದೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಮುಸ್ಲಿಮರು ನಡುರಸ್ತೆಯಲ್ಲಿ ಕೂತು ನಮಾಜ್ ಮಾಡುತ್ತಿದ್ದ ಭಾವಚಿತ್ರ ಎಲ್ಲಡೆ ಹರದಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದರ ಬೆನ್ನಲ್ಲೇ ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ನಮಾಜ್ ಮಾಡಿದ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.
ಯುವಕರು ನಡುರಸ್ತೆಯಲ್ಲೇ ನಮಾಜ್‌ಗೆ ಕುಳಿತಿರುವುದರಿಂದ ವಾಹನ ಸವಾರರು ಮುಂದೆ ಚಲಿಸಲು ತೊಂದರೆಯಾಗಿದೆ.
ಯೂಟರ್ನ್ ತೆಗೆದುಕೊಳ್ಳುವ ದೃಶ್ಯವೂ ಸ್ಪಷ್ಟವಾಗಿ ಸೆರೆಯಾಗಿದೆ. ಈ ಘಟನೆ ವಿಡಿಯೋ ಶೇರ್ ಮಾಡಿಕೊಂಡು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಾಜ್ ಮಾಡಲೆಂದೇ ಮಸೀದಿ ಇರುವುದು ಆದರೆ ಮಸೀದಿ ಬಿಟ್ಟು ನಡುರಸ್ತೆಗೆ ಕುಳಿತು ನಮಾಜ್ ಮಾಡಿದರೆ ವಾಹನಗಳು ಸಂಚರಿಸುವುದು ಹೇಗೆಂದು ಪ್ರಶ್ನಿಸಿದ್ದಾರೆ.
ರಸ್ತೆ ಮಧ್ಯೆ ನಮಾಜ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.