ಬೆಂಗಳೂರು: ಜೂನ್ 4 ಮಧ್ಯಾಹ್ನದವರೆಗೂ ಕಾಂಗ್ರೆಸ್‌ನವರು ಖುಷಿಯಾಗಿರಲಿ. ಆ ಬಳಿಕ ಎನ್‌ಡಿಎ ಗೆಲ್ಲುತ್ತೆ, ಎಲ್ಲವೂ ತಿಳಿಯುತ್ತೆ ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್‌ಡಿಕೆ, ಇದು ಮೋದಿ ಎಕ್ಸಿಟ್ ಪೋಲ್, ಮಿಡಿಯಾ ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ನಾಳೆ ಮಧ್ಯಾಹ್ನದವರೆಗೆ ಅವರು ಸಂತೋಷವಾಗಿರಲಿ. ಅವರ ಸಂತೋಷಕ್ಕೆ ನಾನು ಯಾಕೆ ಅಡ್ಡಿಪಡಿಸಲಿ, ಅವರು ಸಂತೋಷವಾಗಿರಲಿ ಬಿಡಿ ಎಂದರು.ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೆಪಕ್ಷ 25 ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆ ಇದನ್ನೇ ಹೇಳುತ್ತಿದೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದರು.
ದೇಶದಲ್ಲಿ ಎನ್ ಡಿಎ ಪರವಾದ ಅಲೆ ಇದೆ. ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಉತ್ತಮ ಫಲಿತಾಂಶ ನೀಡಲಿದೆ. ಅದನ್ನೇ ಮತಗಟ್ಟೆ ಸಮೀಕ್ಷೆ ಹೇಳಿದೆ. ವಿಧಾನಸಭೆ ಚುನಾವಣೆ ನಂತರ ಕೇಂದ್ರದ ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮೈತ್ರಿಗೆ ಒಪ್ಪಿದರು. ಎರಡೂ ಪಕ್ಷಗಳ ಮೈತ್ರಿಯಲ್ಲಿ ಒಟ್ಟಾಗಿ ಹೋಗಬೇಕೆಂದು ಸಲಹೆ ನೀಡಿದರು. ಮೈತ್ರಿಯಾಗಿ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದೆವೆ ಎಂದರು ಮಾಜಿ ಮುಖ್ಯಮಂತ್ರಿಗಳು.