ಪುತ್ತೂರು: ಬಿಸಿಯೂಟದೊಂದಿಗೆ ಒಂದರಿಂದ ಹತ್ತನೇ ತರಗತಿವರೆಗೆ ಬೇಯಿಸಿದ ಮೊಟ್ಟೆ ವಿತರಿಸುವಂತೆ ಆದೇಶ
2024-25 ನೇ ಸಾಲಿನ ಶಾಲಾ ಮಕ್ಕಳಲ್ಲಿರುವ ಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಬೇಯಿಸಿದ ಮೊಟ್ಟೆ (ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ) ಜೂನ್ 2024 ರಿಂದ ಮಾರ್ಚ್ 2025 ರ ವರೆಗೆ ವಿತರಿಸುವಂತೆ ಆದೇಶ ನೀಡಲಾಗಿದೆ.
ಮಾಹಿತಿಗಳನ್ನು ಈಗಾಗಲೇ ತಾಲೂಕಿನ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮುಖ್ಯಸ್ಥರುಗಳಿಗೆ ನೀಡಲಾಗಿದೆ.