ಹಲವು ಬಾರಿ ಸ್ಥಳಿಯ ಹಾಗೂ ತಾಲೂಕಿನ ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸೋತು ಹೋಗಿದ್ದ ಕಲ್ಲೇರಿ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದ ಮತ್ತು ಅಭಿವೃದ್ದಿ ಸಮಿತಿ ಕೊನೆಗೆ ಕಳೆದ ವರ್ಷ ಶಾಲಾ ವಾರ್ಷಿಕೋತ್ಸವದ ದಿನದಂದು ಮಾನ್ಯ ರಕ್ಷಿತ್ ಶಿವರಾಂ ರವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಸಮಿತಿ ಹಾಗೂ ಊರವರು ಸೇರಿಕೊಂಡು ತಮ್ಮ ಶಾಲಾ ಮಕ್ಕಳಿಗೆ ಶೌಚಾಲಯ ಇಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಮನವಿ ನೀಡಲಾಯಿತು.
ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ರಕ್ಷಿತಗ ಆ ಕೂಡಲೇ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ BK ಹರಿಪ್ರಸಾದ್ ಅವರ ಗಮನಕ್ಕೆ ತಂದು ಸುಮಾರು 2 ಲಕ್ಷ ಅನುದಾನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಮಸ್ಯೆಯೊಂದು ಪರಿಹಾರವಾಗಿದೆ. ಈಗಾಗಲೇ ಕಟ್ಟಡ ಸಂಪೂರ್ಣಗೊಂಡು ಬಹುವರ್ಷದ ಕನಸು ನನಸಾಗಿದೆ. ಅದಲ್ಲದೇ ಇನ್ನೊಂದಷ್ಟು ಶೌಚಾಲಯದ ಅಥವಾ ಬೇರೆ ಯಾವುದಾದರೂ ಅಭಿವೃದ್ಧಿ ಅಗತ್ಯ ಇದ್ದಲ್ಲಿ ಸರಕಾರದಿಂದ ಅನುದಾನ ತಂದು ಕೊಡುತ್ತೇನೆಂದು ಮತ್ತೊಮ್ಮೆ ನಮಗೆ ಭರವಸೆಯ ನೀಡಿದ್ದಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಮೂಲಕ ಸೌಕರ್ಯಗಳನ್ನು ಸರಿಯಾಗಿ ವ್ಯವಸ್ಥೆ ಮಾಡುವಲ್ಲಿ ಸರಕಾರ ಯಶಸ್ವಿಯಾಗಿದೆ ಅಲ್ಲದೇ ಇದೇ ಮಕ್ಕಳು ಭವ್ಯ ಭಾರತದ ಪ್ರಜೆಗಳು ಎಂಬುದಾಗಿ ತಿಳಸಿದ ರಕ್ಷಿತ್ ಅವರ ಮಾದರಿ ಕೆಲಸದ ಬಗ್ಗೆ ಶಾಲಾ ಬೋಧಕರು ಮತ್ತು ಮಕ್ಕಳ ಹಾಗೂ ಊರವರ ಪರವಾಗಿ ಧನ್ಯವಾದ ತಿಳಿಸಿದ್ದಲ್ಲದೇ ಅಧಿಕಾರ ಇಲ್ಲದಿದ್ದರು ಅಭಿವೃದ್ಧಿ ಪರ ಕೆಲಸ ನಡೆಸುತ್ತಿದ್ದರೆ ಎಂದು ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.