ಬೆಂಗಳೂರು:ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಗಳಲ್ಲಿ FASTag ಟೆಕ್ನಿಕಲ್ ಸಮಸ್ಯೆಯಿಂದ ಕ್ಯೂ ನಿಲ್ಲುವುದು ತಪ್ಪಿಲ್ಲ.
ಫಾಸ್ಟ್ ಟ್ಯಾಗ್ ರೀಜಾರ್ಜ್ ಮಾಡಿಸಿದ್ದರೂ, ಟೋಲ್ ಗಳಲ್ಲಿನ ಟೆಕ್ನಿಕಲ್ ಸಮಸ್ಯೆ, ಟ್ಯಾಗ್ ಗಳನ್ನು ರೀಡ್ ಮಾಡುವ ತಂತ್ರಾಂಶಗಳ ಸಮಸ್ಯೆಯಿಂದ ಸವಾರರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಆದ್ರೆ ವಾಹನ ಸವಾರರ ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕೊಡಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಪ್ರಯಾಣಿಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಐಟಿ ಸಿಸ್ಟಂ ಹಾಗೂ ಫಾಸ್ಟ್ ಟ್ಯಾಗ್ ಡಿವೈಸ್ ಗಳ ವಹಿವಾಟುಗಳಿಗೆ ಕೆಲ ನಿಯಮಗಳನ್ನು ತರಲು ಪ್ರಾಧಿಕಾರ ಸೂಚಿಸಿದೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇನ್ಮುಂದೆ ಟೋಲ್ ಸಂಗ್ರಹಕ್ಕೆ ಅನುಭವಿ ಸಂಸ್ಥೆಗಳನ್ನು ಮಾತ್ರ ನೇಮಿಸಲಿದೆ, ಜೊತೆಗೆ ಈ ಸಂಸ್ಥೆಗಳ ಫಾಸ್ಟ್ ಟ್ಯಾಗ್ ಉಪಕರಣಗಳು ಕೇಂದ್ರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಸ್ಟಾಂಡರ್ಡ್ ಟೆಸ್ಟಿಂಗ್ ಹಾಗೂ ಕ್ವಾಲಿಟಿಯ ಪ್ರಮಾಣ ಪತ್ರವನ್ನು ಪಡೆದಿರಬೇಕಾಗುತ್ತದೆ
ನಂಬರ್ ಪ್ಲೇಟ್ ಸ್ಲ್ಯಾನ್ ಮಾಡುವ ಯಂತ್ರ, ಟೋಲ್ ಲೇನ್ ಕಂಟ್ರೋಲರ್, ಟೋಲ್ ಪ್ಲಾಜಾ ಸರ್ವರ್, RFID ರೀಡ್ ಮಾಡುವ ಯಂತ್ರ ಹಾಗೂ ಇದರ ಆಂಟೆನಾ ಎಲ್ಲವೂ STQC ಸರ್ಟಿಫಿಕೇಟನ್ನು ಹೊಂದಿರುವುದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಡ್ಡಾಯ ಮಾಡಿದೆ
ಒಂದು ವೇಳೆ ಟೋಲ್ ಸಂಗ್ರಹದ ಸಂಸ್ಥೆ ಈ ಹೊಸ ನಿಯಮಗಳನ್ನು ಅಳವಡಿಸದೆ ಹೋದಲ್ಲಿ ಸಂಸ್ಥೆಯ ಲೈಸೆನ್ಸ್ ತಕ್ಷಣ ರದ್ದಾಗಲಿದೆಫಾಸ್ಟ್ ಟ್ಯಾಗ್ ತಂದರೂ ವಾಹನ ಸವಾರರು ಟೆಕ್ನಿಕಲ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರವು ಅನುಭವಿ ವ್ಯಕ್ತಿಗಳನ್ನಷ್ಟೇ ನೇಮಿಸಲು ಕ್ರಮ ಕೈಗೊಳ್ಳಲಿದೆ. ಜೊತೆಗೆ ಫಾಸ್ಟ್ ಟ್ಯಾಗ್ ಸಾಧನಗಳು ಸರ್ಕಾರದ ಸಂಸ್ಥೆಯಿಂದ ಪ್ರಮಾಣಿಕೃತವಾಗಿರುವುದು ಕಡ್ಡಾಯ ಹಾಗೂ ಪ್ರತೀ ಪ್ರಾದೇಶಿಕ ಕಚೇರಿಗಳಲ್ಲೂ ತಕ್ಷಣ ಫಾಸ್ಟ್ ಟ್ಯಾಗ್ ಟೆಕ್ನಿಕಲ್ ಸಮಸ್ಯೆಗಳನ್ನು ಸರಿಪಡಿಸುವ ಇಂಜಿನಿಯರ್ ಗಳ ನೇಮಕಕ್ಕೆ ಮುಂದಾಗಿದೆ. ಬ್ಯಾಂಕ್ ಗ್ಯಾರಂಟಿಯೂ ತಕ್ಷಣ ಅಮಾನತು ಗೊಳ್ಳಲಿದೆ ಎಂದು ಮೊದಲೇ ಎಚ್ಚರಿಕೆ ನೀಡಲಾಗಿದೆ.
ಫಾಸ್ಟ್ ಟ್ಯಾಗ್ ತಂದರೂ ವಾಹನ ಸವಾರರು ಟೆಕ್ನಿಕಲ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರವು ಅನುಭವಿ ವ್ಯಕ್ತಿಗಳನ್ನಷ್ಟೇ ನೇಮಿಸಲು ಕ್ರಮ ಕೈಗೊಳ್ಳಲಿದೆ. ಜೊತೆಗೆ ಫಾಸ್ಟ್ ಟ್ಯಾಗ್ ಸಾಧನಗಳು ಸರ್ಕಾರದ ಸಂಸ್ಥೆಯಿಂದ ಪ್ರಮಾಣಿಕೃತವಾಗಿರುವುದು ಕಡ್ಡಾಯ ಹಾಗೂ ಪ್ರತೀ ಪ್ರಾದೇಶಿಕ ಕಚೇರಿಗಳಲ್ಲೂ ತಕ್ಷಣ ಫಾಸ್ಟ್ ಟ್ಯಾಗ್ ಟೆಕ್ನಿಕಲ್ ಸಮಸ್ಯೆಗಳನ್ನು ಸರಿಪಡಿಸುವ ಇಂಜಿನಿಯರ್ ಗಳ ನೇಮಕಕ್ಕೆ ಮುಂದಾಗಿದೆ.