• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ವಿಟ್ಲ : “ಮಾನವೀಯತೆ” ಎಂಬ ಬೊಗಳೆ..! ಎಲ್ಲಿದೆ ಮಾನವೀಯತೆ…?  ಬರಹ: ರಾಧಾಕೃಷ್ಣ ಎರುಂಬು

July 6, 2024
ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ  ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

October 15, 2025
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆ

ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್!  ಕಾಮುಕರು ಲಾಕ್

ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

October 14, 2025
ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ  ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

ಅಶೋಕ‌ ಜನಮನ‌2025 ಯಶಸ್ವಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಶ್ರೀ‌ಮಹಾಲಿಂಗೇಶ್ಚರ ದೇವಸ್ಥಾನದಲ್ಲಿ ವಿಶೇಷ ಪೂಜೆ

October 13, 2025
ಪದ್ಮುಂಜದಲ್ಲಿ ನೂತನವಾಗಿ ಶುಭಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, October 15, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ  ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

    ಪಡ್ನೂರು ಹೆಜ್ಜೇನು ದಾಳಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪ್ರಥ್ಯಶ್ ಗೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ಹೃದಯ ತುಂಬಿದ ನಮನಗಳು : ಹಣ ಪಾವತಿ ನಿಲ್ಲಿಸಲು ಮನವಿ

    ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್!  ಕಾಮುಕರು ಲಾಕ್

    ಪೊಲೀಸ್ ರ ಸಮಯ ಪ್ರಜ್ಞೆಯಿಂದ ಹದಿಹರೆಯದ ಬಾಲಕಿ ಓಬ್ಬಳು ಕಾಮುಕರಿಂದ ಗ್ರೇಟ್ ಎಸ್ಕೇಪ್! ಕಾಮುಕರು ಲಾಕ್

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ – ಶಶಿರಾಜ್ ಶೆಟ್ಟಿ

    ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

    ಫೇಸ್ ಬುಕ್ ನಲ್ಲಿ ಶಾಸಕ ಅಶೋಕ್ ರೈ, ಸಿ ಎಂ ಸಿದ್ದರಾಮಯ್ಯರ ಬಗ್ಗೆ ಅವಹೇಳನಕಾರಿ ಕಮೆಂಟ್: ಕ್ಷಮೆ ಕೇಳಿದ ವಸಂತಭಟ್

    ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

    ಕಂಬಳ ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಚೊಚ್ಚಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ

    ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

    ಮಗುವಿನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಗೆ ಅಡ್ಡಿ….!! ಆರೋಪಿಗಳ ವಿರುದ್ಧ ವ್ಯಾಪಕ ಆಕ್ರೋಶ ಬಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ

    ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

    ಅಶೋಕ ಜನಮನ 2025: ಅಶೋಕ್ ರೈ ನೇತೃತ್ವದಲ್ಲಿ ಪೂರ್ವಭಾವಿ ಸಭೆ; ಬರುವ ಪ್ರತೀಯೊಬ್ಬರೂ ಅನ್ನದಾನವನ್ನು ಸ್ವೀಕರಿಸುವಂತೆ ನೋಡಿಕೊಳ್ಳಿ: ಶಾಸಕ ಅಶೋಕ್ ರೈ ಸೂಚನೆ

    ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ  ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

    ಸಾಮಾಜಿಕ ಜಾಲತಾಣದಲ್ಲಿ ಶಾಸಕ ಅಶೋಕ್ ರೈ ಬಗ್ಗೆ ಅಸಭ್ಯ ಸಂದೇಶ ಕ್ಷಮೆ ಕೇಳಿದ ತಾಲೂಕು ಕಚೇರಿ ಸಿಬಂದಿ ಕ್ಷಮಿಸಿದ ಶಾಸಕ ಅಶೋಕ್ ರೈ

    ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

    ಕುಕ್ಕೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕೊಡಿ ಸುಬ್ರಹ್ಮಣ್ಯ ನಿವಾಸಿಗಳಿಂದ ಶಾಸಕ ಅಶೋಕ್ ರೈಗೆ ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಉಡುಪಿ

ವಿಟ್ಲ : “ಮಾನವೀಯತೆ” ಎಂಬ ಬೊಗಳೆ..! ಎಲ್ಲಿದೆ ಮಾನವೀಯತೆ…? ಬರಹ: ರಾಧಾಕೃಷ್ಣ ಎರುಂಬು

by ಪ್ರಜಾಧ್ವನಿ ನ್ಯೂಸ್
July 6, 2024
in ಉಡುಪಿ, ಉದ್ಯೋಗ - ಶಿಕ್ಷಣ, ವಿಟ್ಲ
0
ವಿಟ್ಲ : “ಮಾನವೀಯತೆ” ಎಂಬ ಬೊಗಳೆ..! ಎಲ್ಲಿದೆ ಮಾನವೀಯತೆ…?  ಬರಹ: ರಾಧಾಕೃಷ್ಣ ಎರುಂಬು
25
SHARES
72
VIEWS
ShareShareShare

ಮಾನವತೆ ಇರುವಲ್ಲಿ ಅಮಾನುಷ ಕಾರ್ಯಗಳಿಲ್ಲ, ಇದು ಮಾನವರಲ್ಲಿ ಮಾತ್ರ ಕಾಣಸಿಗಬಹುದೆಂಬ ಪಾಠ ನಮ್ಮ ಬಾಲ್ಯದಲ್ಲಿ ಕೇಳಿದ್ದೇವೆ, ಅನುಭವಿಸಿದ್ದೇವೆ.ಅದು ಹೆಚ್ಚಲ್ಲ ನಲುವತ್ತು ವರ್ಷಗಳ ಹಿಂದೆಯಷ್ಟೇ. ಹಿರಿಯ-ಕಿರಿಯ ಸಂಬಂಧಗಳ, ಗೌರವದ, ಮನೋಭಾವನೆಗಳ ವ್ಯತ್ಯಾಸ ವರ್ತಮಾನ ಮತ್ತು ಭೂತಕಾಲಕ್ಕೂ ಅಜಗಜಾಂತರ. ಕಾರಣಗಳ ಬೆನ್ನತ್ತಿ ಹೋದಾಗ ಕಾಲ ಬದಲಾಗಿದೆ ಎನ್ನುವ ಉಡಾಫೆಯ ಮಾತು ಕೇಳುತ್ತದೆ.ಪ್ರಸ್ತುತ ಮನೆಯಲ್ಲಿ ಹಿರಿಯರ ಮಮಕಾರ ವ್ಯಾಮೋಹಕ್ಕೆ ಸಿಲುಕಿದ ಮಕ್ಕಳು ಸಂಸ್ಕಾರದ ಶಿಕ್ಷಣವಿಲ್ಲದೆ ಬಲಿಯುವರು. ಶಾಲೆಯಲ್ಲಿ ಪಾಶ್ಚಾತ್ಯರಿಂದ ಬಳುವಳಿ ಪಡೆದ ಶಿಕ್ಷಣ ನೀತಿಯೊಳಗೆ ಭೀತಿಯಿಲ್ಲದೆ ಬೆಳೆಯುವರು. ಈಗ ಹೇಳಿ ಸಂಸ್ಕಾರ ಮಾನವೀಯತೆಯ ಶಿಕ್ಷಣ ಕೇವಲ ಬೊಗಳೆ ಯಷ್ಟೇ ವಿನಹ ವಾಸ್ತವಕ್ಕಿದೆಯೇ? ಈ ಗೌರವದ ಮತ್ತು ಜೀವನಕ್ಕೆ ಪೂರಕವಾಗಬೇಕಾದ ಈ ಶಿಕ್ಷಣ “ಆಟಕ್ಕುಂಟು ಲೆಕ್ಕಕ್ಕಿಲ್ಲ” ಅಷ್ಟೇ. ಆಶ್ರಮಕ್ಕೆ ಐಶಾರಾಮದ ಕೊಠಡಿ ಕಟ್ಟಲು ದಾನ ನೀಡಿ ಅದರಲ್ಲಿ ಕೊನೆಗಳಿಗೆಯಲ್ಲಿ ಪ್ರೀತಿ ಕೊಡಬೇಕಾದ ಅಪ್ಪ-ಅಮ್ಮರನ್ನು ಸೇರಿಸುವ ವ್ಯವಸ್ಥೆ ರೂಢಿಯಲ್ಲಿ ಈಗಾಗಲೇ ಇದೆ. ಅಲ್ಲಿ ಹುಟ್ಟುಹಬ್ಬ ಆಚರಿಸುವ ವಾಡಿಕೆ ಮಾಡಿಕೊಂಡ ಪೋಷಕರ ಜೊತೆ ಬರುವ ಮಕ್ಕಳು ಕನಿಕರ ತೋರುವ ಬದಲು ಮುಂದೊಂದು ದಿನ ತನ್ನ ಹೆತ್ತವರಿಗೆ ಒಳ್ಳೆಯ ವ್ಯವಸ್ಥೆ ಎಂದುಕೊಂಡೇ ಹೊರಡುತ್ತಾರೆ. ಮುದ್ದು ಮಾಡಿ, ಬಾಲ್ಯ,ಯವ್ವನ, ವಿವಾಹ ಎಲ್ಲವನ್ನು ಮೋಹದಿಂದ ಮಡಿಲಲ್ಲಿಟ್ಟು ನಡೆಸಿ ಕೊಟ್ಟರೂ ಸಾಕಾಗದೆ, ನಿವೃತ್ತಿಯ ಬಳಿಕ ಇನ್ಯಾರದೋ ಆಶ್ರಯದಲ್ಲೇ ಬದುಕಬೇಕಾಗಿರುವ ಅನಿವಾರ್ಯತೆ ಒದಗುತ್ತದೆ. ಹೇಗಿದೆ ನಮ್ಮ ಮಾನವೀಯತೆಯ ಶಿಕ್ಷಣ ಹೇಳಿ. ಪಾಶ್ಚಾತ್ಯ ರಾಷ್ಟ್ರಗಳ ಅಮಾನವೀಯ ಸಂಬಂಧಗಳನ್ನು ಆಧುನೀಕರಣವೆಂದು ಬಗೆದು ನಮ್ಮ ದೇಶಕ್ಕೆ ಆಮದೀಕರಿಸಿ ಎಲ್ಲೂ ಇಲ್ಲದ ಸನಾತನ ಭಾರತೀಯ ಸಂಸ್ಕಾರಕ್ಕೆ ಧಕ್ಕೆಯಾದರೂ ಯಾಕೆ ಮಾಡುತ್ತೀರಿ. ನಮ್ಮ ಮಕ್ಕಳು ಸಂಸ್ಕಾರ ಕಲಿತು ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಗಳನ್ನು ರೂಢಿಸಿಕೊಳ್ಳಬೇಡವೇ? ಮಕ್ಕಳನ್ನು ಹೊಡೆಯದೆ, ಗದರಿಸದೆ ನೋಡಿಕೊಳ್ಳಬೇಕು ಎಂಬ ತಜ್ಞರ ಕಾನೂನನ್ನು ಒಪ್ಪಿಕೊಳ್ಳೋಣ. ಆದರೆ ಪೆನ್ನು ಪುಸ್ತಕ ಹಿಡಿಯಬೇಕಾದ ಕೈಗಳು ಕಾನೂನನ್ನು ಕೈಯಲ್ಲಿ ಹಿಡಿದು ಗುರುಗಳನ್ನೋ, ತಂದೆ ತಾಯಿಯರನ್ನೋ ಪೇಚಿಗೆ ಸಿಲುಕಿಸುವ ವೃತ್ತಾoತ ನಾವೆಲ್ಲಾ ಮಾಧ್ಯಮಗಳಲ್ಲಿ ಕಾಣುತ್ತಿಲ್ಲವೇ? ಎಲ್ಲಿದೆ ದೇವೋಭವಗಳು? ಪರೋಪಕಾರ, ಹಿರಿಯರ ಬಗೆಗಿನ ಕಾಳಜಿ!! ಹೆಚ್ಚೇಕೆ ಒಂದೊಳ್ಳೆ ಮಾತು, ಅತಿಥಿ ಸತ್ಕಾರ ಇವೆಲ್ಲ ಶಾಲೆಗಳಲ್ಲಿ ಪ್ರಬಂಧಕ್ಕೆ ಮೀಸಲಾಗಿದೆಯಲ್ಲದೆ ವಾಸ್ತವಿಕತೆಯಲ್ಲಿದೆಯೇ? ಪುಟಾಣಿ ಮಕ್ಕಳು ತಮ್ಮ ಉದ್ಯೋಗಕ್ಕೋ, ನಿತ್ಯ ಕೆಲಸಕ್ಕೋ ತೊಂದರೆಯಾಗುವುದೆಂದು ಎರಡರ ವಯಸ್ಸಿಗೆ ಶಾಲೆ ಯಾ ಶಿಶುವಿಹಾರ ಸೇರುತ್ತವೆ. ಆಗ ನೋಡಿಕೊಳ್ಳುವವರ ಸಂಸ್ಕಾರ ಬರುತ್ತದೆಯಲ್ಲದೆ ಮನೆಯ ಸಂಸ್ಕಾರ ಬರಲು ಸಾಧ್ಯವೇ? ಅಪ್ಪ ಅಮ್ಮ ಅಜ್ಜ ಅಜ್ಜಿಯ ಮಡಿಲಲ್ಲಿ ಪ್ರೀತಿ ಕಾಣಬೇಕಾದ ಮುಗ್ದ ಮಗು ಪ್ರೀತಿಗಾಗಿ ಹಂಬಲಿಸುತ್ತಿರುವಾಗ ತಮ್ಮ ಸಲಿಲತೆಗೆ ಯಾವುದೋ ಅಮ್ಮನ ಮಡಿಲಿಗೆ ದೂಡಲಿಲ್ಲವೇ? ಹೀಗೆ ವಂಚಿತರಾದ ಆ ಮಕ್ಕಳು ನಿರ್ದಾಕ್ಷಿಣ್ಯವಾಗಿ ನಮ್ಮನ್ನು ಆಶ್ರಮಕ್ಕೆ ತಳ್ಳಿದರೆ ಆಶ್ಚರ್ಯವೇನು? ಬಿತ್ತಿದಂತೆ ಬೆಳೆಯಲ್ಲವೇ?
“ಜೀವನದ ಬಗೆ ಬಗೆಯ ಪರೀಕ್ಷೆಗಳು ನಿಮ್ಮ ಬಲವನ್ನು ಪರೀಕ್ಷಿಸುತ್ತವೆ.ಅವುಗಳ ಮೂಲಕ ನೀವು ಬಲಿಷ್ಠರಾಗುತ್ತಲೇ ಇರುತ್ತೀರಿ.” ಸುಭಾಷಿತ ಸತ್ಯವೇ. ಆದರೆ ಇಂತಹ ಸನ್ನಿವೇಶಗಳನ್ನು ನಮ್ಮವರಿಗೆ ನಾವೆಷ್ಟು ನೀಡುತ್ತೇವೆ ಎಂಬುದೇ ಪ್ರಶ್ನೆ. ಈ ಪರೀಕ್ಷೆಗಳು ಕೇವಲ ತರಗತಿಗಳಲ್ಲಿ ನಡೆಯುತ್ತವೆ ವಿನಃ ಬಾಲ್ಯ ಜೀವನದಲ್ಲಿ ಎದುರಿಸಿ ಅಭ್ಯಾಸವಿಲ್ಲದೆ, ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೆ ಎಳೆ ಜೀವಗಳು ತಾವಾಗಿಯೇ ಸಾವಿನ ಮೊರೆ ಹೋಗುತಿವೆ. ಜೀವಿತಾವಧಿಯಲ್ಲಿ ತಮ್ಮ ಜೀವನದ ಅನುಭವಗಳ ಜೊತೆ ತಮ್ಮ ಭವಿಷ್ಯಕ್ಕೆ ಸರಿಯಾದ ಉತ್ತರಾಧಿಕಾರಿಗಳನ್ನು ಸೃಷ್ಟಿಸಲು ಮನ ಮಾಡದಿರುವ ದುರಂತ ಯುವ ಜನತೆಯನ್ನು ಕಷ್ಟಕ್ಕೆ ಸಿಲುಕಿಸುವುದು ಅನೇಕ ಬಾರಿ ಕಾಣುತ್ತೇವೆ. ಸ್ವಾರ್ಥಬಿಟ್ಟು ಮಾನವೀಯತೆಯಿಂದ ಮುಂದಿನ ತಲೆಮಾರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಹಿರಿಯರದ್ದು. “ಯಾರೂ ಮನ ಮಾಡಲಿಲ್ಲ”ಎಂಬ ಪುಸ್ತಕ ನೀಡಿ ತೆರಳಬೇಡಿ ಅಪಾರ ನಷ್ಟವಾಗುತ್ತದೆ. ದಯವಿಟ್ಟು ಅವಕಾಶ ಕೊಟ್ಟು ಪ್ರಯತ್ನಿಸಿ.

ವೇಗವಾಗಿ ಸಾಗುತಿರುವ ಬೆಳವಣಿಗೆಯ ಚಕ್ರದಡಿಗೆ ಮಾನವೀಯತೆ ಎಂಬ ಸಂಸ್ಕಾರ ಸಿಕ್ಕಿಕೊಂಡು ಚೂರಾಗುವ ಮೊದಲು ಜಾಗೃತರಾಗುವ ಮೂಲಕ ಸುಂದರ, ಆತ್ಮೀಯ, ಗೌರವಯುತ, ಮೌಲ್ಯಯುತ ಬದುಕಿನ ನಿರೀಕ್ಷೆಗಾಗಿ ಎಚ್ಚರಿಕೆ ವಹಿಸುವ ಸಣ್ಣ ಪ್ರಯತ್ನವಿರಲಿ. ಎಲ್ಲವೂ ಹಣ ಸಂಪತ್ತಿನಿಂದಲ್ಲ, ಸ್ವಲ್ಪವಾದರೂ ಕನಿಕರ, ದಯೆ, ಸಾಂತ್ವನದಿಂದಾಗುತ್ತವೆ. ಇವೆಲ್ಲ ಬರಿ ಮನಸ್ಸು, ಹೃದಯ – ಮನಸ್ಸುಗಳಲ್ಲಿ ಮೂಡಿದರೆ ಸಾಲದು, ವಾಸ್ತವದಲ್ಲಿ ಅನುಷ್ಠಾನಕ್ಕೆ ಬರಬೇಕು. ಇಲ್ಲವಾದರೆ ಅರಳು ಮರಳು ಜೀವನದಲ್ಲಿ ಹರಳಿನಂತೆ ಹೊರಳಾಡಬೇಕಾದೀತು, ರಸ ಹಿಂಡಿದ ಜಲ್ಲೆಯಂತೆ ಮೂಲೆ ಸೇರಬೇಕಾದೀತು. ಇದು ಎಲ್ಲೋ ನಡೆಯಬೇಕಾದ ಪ್ರಕ್ರಿಯೆಯಲ್ಲ. ನಾಳೆ ನಮ್ಮ ಜೀವನದಲ್ಲೂ ನಿಶ್ಚಿತ.

🖊️ರಾಧಾಕೃಷ್ಣ ಎರುಂಬು

HPR Institute Of Nursing And Paramedical Sciences & Friends Beke

ಜಾಹೀರಾತು

SendShare10Share
Previous Post

ಧರ್ಮಸ್ಥಳ : ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ನಿಧನ ಡಿ.ವೀರೇಂದ್ರ ಹೆಗ್ಗಡೆ ಸಂತಾಪ

Next Post

ನವದೆಹಲಿ: ಜುಲೈ 23 ಕೇಂದ್ರ ಬಜೆಟ್ ಮಂಡನೆ – ಸಚಿವ ಕಿರಣ್ ರಿಜಿಜು ಘೋಷಣೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ನವದೆಹಲಿ: ಜುಲೈ 23 ಕೇಂದ್ರ ಬಜೆಟ್ ಮಂಡನೆ – ಸಚಿವ ಕಿರಣ್ ರಿಜಿಜು ಘೋಷಣೆ

ನವದೆಹಲಿ: ಜುಲೈ 23 ಕೇಂದ್ರ ಬಜೆಟ್ ಮಂಡನೆ - ಸಚಿವ ಕಿರಣ್ ರಿಜಿಜು ಘೋಷಣೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In