ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ವಿಟ್ಲ ಘಟಕದ ಆಶ್ರಯದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಭ ಟ್ರಸ್ಟ್ (ರಿ) ಮಂಗಳೂರು ಸಹಯೋಗದೊಂದಿಗೆ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜಿನ ನುರಿತ ತಜ್ಞ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ದಂತ, ನೇತ್ರ, ಕಿವಿ, ಮೂಗು, ಗಂಟಲು, ಚರ್ಮ ಹಾಗೂ ಎಲುಬು, ಇ.ಸಿ.ಜಿ, ಮಕ್ಕಳು ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದಲ್ಲಿ ಶಿಬಿರ ನಡೆಯಿತು. ಸುಮಾರು 300 ಜನರು ಈ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆದರು.
ಶಿಬಿರದ ಮುಂಚೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತಿಲ ಪರಿವಾರದ ಸಂಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲರವರು ವಹಿಸಿಕೊಂಡು ಟ್ರಸ್ಟ್ ನ ಸೇವಾ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷ ಪ್ರಸನ್ನ ಮಾರ್ತಾ, ಬಿಜೆಪಿ ಮುಖಂಡ ವಿಟ್ಲ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲ್ಯಾನ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಎ.ಎಸ್ ಶುಭಾಂಸನೆ ಮಾತನಾಡಿದರು. ಯೆನೆಪೋಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಘಟಕದ ಉಪನ್ಯಾಸಕಿ ಡಾ.ಸುಪ್ರಿಯಾ, ಆರೋಗ್ಯ ವಿಭಾಗದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಕ್ಯಾಂಪ್ ಕೋರ್ಡಿನೇಟರ್ ಮನುರಾಜ್ ಶೆಟ್ಟಿ, ಯೆನೆಪೋಯ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್, ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾ ಶೈಕ್ಷಣಿಕ ಸಮನ್ವಯಕಾರ ಆನಂದ ರೈ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ವಿಟ್ಲ ಘಟಕದ ಅಧ್ಯಕ್ಷ ಮೋಹನ್ ಸೇರಾಜೆ ಉಪಸ್ಥಿತರಿದ್ದರು.
ಸುಕನ್ಯಾ ಸೇರಾಜೆ ಪ್ರಾರ್ಥಿಸಿದರು, ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ ಸ್ವಾಗತಿಸಿ ಪ್ರಸ್ತಾವಿಸಿದರು, ಟ್ರಸ್ಟ್ ನ ವಿಟ್ಲ ಘಟಕದ ಕಾರ್ಯದರ್ಶಿ ಲಕ್ಷ್ಮಣ ಮಾಡ ವಂದಿಸಿದರು, ಸೌಮ್ಯ ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅನಂತಪ್ರಸಾದ್, ರಘುರಾಮ ರೈ, ಹರೀಶ್ ಪೂಜಾರಿ ಮರುವಾಳ, ಶರತ್ ಎನ್.ಎಸ್, ರಾಜೇಶ್ ಭಟ್ ಕುಂಡಡ್ಕ, ನಿತಿನ್ ಬೊಡ್ಡೋಣಿ, ರವಿಶಂಕರ್ ವಿಟ್ಲ, ಸದಾಶಿವ ನಾಯಕ್, ವಿನೋದ್ ಕೂಡೂರು, ವಿಶ್ವೇಶ್ವರ ಆಲಂಗಾರು, ಜಿತೇಶ್ ಮೇಗಿನಪೇಟೆ, ರಾಜೇಶ್ ಗಾಳಿಹಿತ್ಲು, ಅನೀಶ್ ಕುಲಾಲ್, ನಾಗರಾಜ್ ವಿಟ್ಲ, ಭವಿಷ್ ಮಾಡ, ಬಿಜೆಪಿ ಮುಖಂಡರಾದ ಉದಯಕುಮಾರ್ ಆಲಂಗಾರು, ಸಂಧ್ಯಾ ಮೋಹನ್, ರಾಜೇಶ್ ಕರವೀರ, ಬಿಜೆಪಿ ತಾಲೂಕು ರೈತ ಮೋರ್ಚದ ಮಾಜಿ ಕಾರ್ಯದರ್ಶಿ ಪುನೀತ್ ಮಾಡತ್ತಾರ್ ಸಹಕರಿಸಿದರು.