ಮಾಣಿ: ಇಲ್ಲಿನ ಗ್ರಾಮಪಂಚಾಯತ್ ಕಟ್ಟಡದಲ್ಲಿ ಬಿಸಿ ರೋಡಿನ ಯುವವಕೀಲ ದೀಪಕ್ ಪೆರಾಜೆಯವರ ನೂತನ ಕಚೇರಿ ಮತ್ತು ಎಲ್ಲಾ ರೀತಿಯ ನಾಗರಿಕ ಸೇವಾ ಸೌಲಭ್ಯಗಳನ್ನು ಒದಗಿಸಲು ಶ್ರೀ ಲಲಿತೆ ನಾಗರಿಕ ಸೇವಾ ಕೇಂದ್ರವು ಇತ್ತೀಚೆಗೆ ಉದ್ಘಾಟನೆಗೊಂಡಿತು. ಹಲವಾರು ಬಂಧು ಮಿತ್ರರ ಸಮ್ಮುಖದಲ್ಲಿ ಹಿರಿಯ ನೋಟರಿ ವಕೀಲರಾದ ಪಿ. ಜಯರಾಮ್ ರೈ ದೀಪ ಬೆಳಗಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಇನ್ನೋರ್ವ ವಕೀಲರಾದ ಚಂದ್ರಶೇಖರ ಶೆಟ್ಟಿ ಎಮ್ , ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಾಲ ಎಂ.ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ನಾರಾಯಣ ಶೆಟ್ಟಿ ತೋಟ,ಸುದೀಪ್ ಕುಮಾರ್ ಶೆಟ್ಟಿ ಹಾಗೂ ಪ್ರಗತಿಪರ ಕೃಷಿಕರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ನೇರಳಕಟ್ಟೆ ಸಹಕಾರಿ ಬ್ಯಾಂಕ್ ಅಧ್ಯಕರಾದ ಪುಷ್ಪರಾಜ್ ಚೌಟ ಮಾಣಿ, ದಾಮೋದರ ಸುವರ್ಣ ಮತ್ತು ಲಲಿತಾ ದಾಮೋದರ ಸುವರ್ಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಅತಿಥಿಗಳನ್ನು, ಬಂಧುಮಿತ್ರರನ್ನು ಸಂಸ್ಥೆಯ ಮಾಲೀಕರಾದ ದೀಪಕ್ ಪೆರಾಜೆ ಮತ್ತು ನಮಿತಾ ದೀಪಕ್ ಸ್ವಾಗತಿಸಿದರು. ಹರೀಶ್ ಮಂಜೊಟ್ಟಿ ನಿರ್ವಹಿಸಿದರು.
ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲಾ ನಾಗರಿಕ ಸೇವಾ ಸೌಲಭ್ಯಗಳಾದ ರೇಷನ್ ಕಾರ್ಡ್,ವೋಟರ್ ಐಡಿ,ಪಾನ್ ಕಾರ್ಡ್, ಪಾಸ್ ಪೋರ್ಟ್, ಇ – ಸ್ಟಾಂಪ್,ಜಮೀನು ದಾಖಲಾತಿಗಳು,ರಿಜಿಸ್ಟ್ರೇಷನ್,ದೃಢೀಕೃತ ನಕಲು,ಮದುವೆ ಸರ್ಟಿಫಿಕೇಟ್,ಕನ್ವರ್ಷನ್ ಹೀಗೆ ಎಲ್ಲಾ ರೀತಿಯ ಸೇವೆಗಳನ್ನು ನೀಡುವುದರ ಜೊತೆಗೆ ಜನರಿಗೆ ಎಲ್ಲಾ ರೀತಿಯ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ವಕೀಲ ದೀಪಕ್ ಪೆರಾಜೆ ತಿಳಿಸಿದರು.
























