ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರಿಗೆ ಅಂಗರಕ್ಷನನ್ನು ನಿಯೋಜಿಸಲಾಗಿದೆ.
ಹರೀಶ್ ಪೂಂಜಾ ಅವರಿಗೆ ಬೆದರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ, ರಾಜ್ಯ ಅಂಗರಕ್ಷಕ ಭದ್ರತ ಪುನರ್ ವಿಮರ್ಶನ ಸಮಿತಿಯ ಸೂಚನೆ ಮೇರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ದ.ಕ. ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಜು. 28 ರಂದು ಜಾರಿಗೆ ಬರುವಂತೆ ಓರ್ವ ಅಂಗರಕ್ಷನನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ



                                









			









