• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ವಯನಾಡಿನಲ್ಲಿ ಭೀಕರ ಭೂಕುಸಿತಕ್ಕೆ ನಲುಗಿದ ಕೇರಳ, ವಯನಾಡ್‌ನ ‘ಮೇಪ್ಪಾಡಿ’ ಬಗ್ಗೆ ಎಚ್ಚರಿಸಿತ್ತು ಮಾಧವ ಗಾಡ್ಗೀಳ್‌ ವರದಿ

July 31, 2024
ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

September 1, 2026
ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

September 1, 2026
ಮದರಸಾ ವಿಸ್ತರಣೆಗಾಗಿ ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ

ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

ಪತ್ನಿಯನ್ನು ರಾತ್ರೋರಾತ್ರಿ ಕೊಲೆ ಮಾಡಿ, ಆಕೆಗೆ ಹೃದಯಾಘಾತವಾಗಿದೆ ಎಂದು ಕಥೆ ಕಟ್ಟಿದ ಪತಿ!

ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

August 29, 2026
ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

August 28, 2026
ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

ಸ್ಯಾಕ್ಸೋಫೋನ್ ಕಲಾವಿದ ವಿಶ್ವನಾಥ್ ಶೇರಿಗಾರ್ ಪುತ್ತೂರು ನಿಧನ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, September 2, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

    ಪುತ್ತೂರು: ಶಾಸಕರ ತೇಜೋವಧೆ ಆರೋಪ : ಕಾಂಗ್ರೆಸ್ ಕಾರ್ಯಕರ್ತರಿಂದ ಹಕೀಂ ಕೂರ್ನಡ್ಕ ವಿರುದ್ದ ಆಕ್ರೋಶ

    ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

    ಕೋಡಿಂಬಾಡಿ ಪಾದೆ ನಿವಾಸಿ ಶಿವಪ್ಪ ಗೌಡ ನಿಧನ

    ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

    ಪುತ್ತೂರು: ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ 7% ಕಮಿಷನ್‌ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪ : ಸಿಎಂಗೆ ಶಾಸಕ ಅಶೋಕ್ ಕುಮಾರ್ ರೈ ಪತ್ರ

    ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

    ಸೆ.18ರ ಮಂಗಳೂರಿನ ಸಚಿವ ಸಂಪುಟ ಸಭೆಯತ್ತ ಕರಾವಳಿಗರ ಚಿತ್ತ! ಕರಾವಳಿಗೆ ಬೇಕು ಗೋವಾ ಮಾದರಿಯ ಪ್ರವಾಸೋದ್ಯಮ ಅಭಿವೃದ್ಧಿ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಮಾನವ ತಲೆ ಬುರುಡೆ ಪ್ರಕರಣ- ಎಸ್.ಐ.ಟಿ.ಯ ಅಂತಿಮ ವರದಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಲಯದಲ್ಲಿ ವಾದ ಮಂಡನೆ

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಪುತ್ತೂರು ಉಪ್ಪಿನಂಗಡಿ ರಸ್ತೆ ಡೇಂಜರ್ ಸ್ಪಾಟ್ “ ಕಾಪು “- ಸ್ಪೀಡ್ ಹೋದ್ರೆ ಪಲ್ಟಿ ಆಗೋದು ಗ್ಯಾರಂಟಿ.!

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಶಾಸಕ ಹರೀಶ್ ಪೂಂಜಾರಿಗೆ ಗೌರವಾರ್ಪಣೆ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ತಾಲೂಕು ಕ್ರೀಡಾಂಗಣ ಗುದ್ದಲಿ ಪೂಜೆ ಪ್ರಥಮ ಹಂತದ ಕಾಮಗಾರಿ ಪ್ರಾರಂಭ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

    ಆ.29-31: ಬಡಕೋಡಿ ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ 355ನೇ ಆರಾಧನಾ ಮಹೋತ್ಸವ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ವಯನಾಡಿನಲ್ಲಿ ಭೀಕರ ಭೂಕುಸಿತಕ್ಕೆ ನಲುಗಿದ ಕೇರಳ, ವಯನಾಡ್‌ನ ‘ಮೇಪ್ಪಾಡಿ’ ಬಗ್ಗೆ ಎಚ್ಚರಿಸಿತ್ತು ಮಾಧವ ಗಾಡ್ಗೀಳ್‌ ವರದಿ

by ಪ್ರಜಾಧ್ವನಿ ನ್ಯೂಸ್
July 31, 2024
in ಅಂತರರಾಜ್ಯ, ರಾಜ್ಯ
0
ವಯನಾಡಿನಲ್ಲಿ ಭೀಕರ ಭೂಕುಸಿತಕ್ಕೆ ನಲುಗಿದ ಕೇರಳ, ವಯನಾಡ್‌ನ ‘ಮೇಪ್ಪಾಡಿ’ ಬಗ್ಗೆ ಎಚ್ಚರಿಸಿತ್ತು ಮಾಧವ ಗಾಡ್ಗೀಳ್‌ ವರದಿ
91
SHARES
259
VIEWS
ShareShareShare

ಕೇರಳದ ವಯನಾಡು ಭೀಕರ ಭೂ ಕುಸಿತಕ್ಕೆ ಸಾಕ್ಷಿಯಾಗಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಹೊತ್ತಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಪರಿಸರ ತಜ್ಞ ಮಾಧವ ಗಾಡ್ಗೀಳ್‌ ನೇತೃತ್ವದ ತಜ್ಞರು ನೀಡಿದ್ದ ವರದಿ ಮತ್ತೆ ಮುನ್ನೆಲೆಗೆ ಬಂದಿದೆ.

13 ವರ್ಷಗಳ ಹಿಂದೆ ಅಂದರೆ 2011ರ ಆಗಸ್ಟ್‌ನಲ್ಲಿ ಮಾಧವ ಗಾಡ್ಗೀಳ್‌ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (ಡಬ್ಲ್ಯೂಜಿಇಇಪಿ) ವರದಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಇದರಲ್ಲಿ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ಇಎಸ್‌ಎ) ನಡೆಸುತ್ತಿರುವ ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

Rosemac1823788744

ಜಾಹೀರಾತು

ಇದೀಗ ಮಗದೊಂದು ಭೂಕುಸಿತಕ್ಕೆ ಕೇರಳ ಸಾಕ್ಷಿಯಾಗುವುದರೊಂದಿಗೆ ಈ ವರದಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಅದರಲ್ಲೂ ಗಾಡ್ಗೀಳ್‌ ವರದಿ ಈಗ ಭೂಕುಸಿತ ಸಂಭವಿಸಿರುವ ಮೇಪ್ಪಾಡಿಯಲ್ಲಿ ನಡೆಯುತ್ತಿದ್ದ ಪರಿಸರ ವಿರೋಧಿ ಚಟುವಟಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು.

ಮೆಪ್ಪಾಡಿ ವೈಥಿರಿ ತಾಲೂಕಿನಲ್ಲಿ ಬರುತ್ತದೆ. ಮಂಗಳವಾರದ ಇಲ್ಲಿನ ಗ್ರಾಮಗಳಾದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಮಾರಣಾಂತಿಕ ಭೂಕುಸಿತ ಸಂಭವಿಸಿದ್ದು, ಸಮಿತಿಯು ಗುರುತಿಸಿದ್ದ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ಇಎಸ್ಎಲ್) ಇದು ಕೂಡ ಒಂದಾಗಿತ್ತು.

ಆದರೆ, ಇಂಥಹದ್ದೊಂದು ಸ್ಪಷ್ಟ ವರದಿ ನೀಡಿದ್ದರೂ ಕೇರಳ ಮತ್ತು ಕೇಂದ್ರ ಸರ್ಕಾರಗಳು ಇದನ್ನು ಜಾರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಇದರ ಬದಲಿಗೆ ವರದಿ ನೀಡಿದ್ದ ಪ್ರಸ್ತಾವನೆಗಳನ್ನು ಮತ್ತಷ್ಟು ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದವು.

ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟಗಳಾದ್ಯಂತ ಇರುವ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಿತ್ತು. ಇದರಲ್ಲಿ ಇಎಸ್‌ಝಡ್‌ – I ಮತ್ತು ಇಎಸ್‌ಝಡ್‌ – II ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಚಟುವಟಿಕೆಗಳನ್ನು ನಡೆಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿತ್ತು.

“ನಾವು ಇಎಸ್‌ಝಡ್‌ Iರಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕೆಂಪು ವರ್ಗದ (ರೆಡ್‌ ಕ್ಯಾಟಗರಿ) ಕೈಗಾರಿಕೆಗಳಿಗೆ ಅವಕಾಶ ನೀಡಲೇಬಾರದು ಎಂದು ಪ್ರಸ್ತಾಪಿಸಿದ್ದೆವು. ಹಾಗೆಯೇ ಕಲ್ಲು ಗಣಿಗಾರಿಕೆಗೆ ಅನುಮತಿ ಇರುವ ಪ್ರದೇಶಗಳಲ್ಲಿ, ಕ್ವಾರಿಗಳು ಜನವಸತಿಯಿಂದ ಕನಿಷ್ಠ 100 ಮೀಟರ್ ದೂರದಲ್ಲಿ ಇರಬೇಕು ಎಂದೂ ಹೇಳಿದ್ದವು. ಆದರೆ, ನಂತರ ಸರ್ಕಾರ ಇದನ್ನು 50 ಮೀಟರ್‌ಗೆ ಇಳಿಸಿತು,” ಎಂದು ಈ ತಜ್ಞರ ತಂಡದಲ್ಲಿದ್ದ ಸದಸ್ಯ ಪರಿಸರವಾದಿ ವಿಎಸ್ ವಿಜಯನ್  ತಿಳಿಸಿದ್ದಾರೆ.

Muliya

ಜಾಹೀರಾತು

ಮುಂದೆ ಮಾಧವ ಗಾಡ್ಗೀಳ್‌ ವರದಿಯನ್ನೇ ತಳ್ಳಿ ಹಾಕಿದ ಕೇಂದ್ರ ಸರ್ಕಾರ ಕಸ್ತೂರಿರಂಗನ್‌ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಿತು. ಮಾಧವ ಗಾಡ್ಗೀಳ್‌ ಇಡೀ ಪಶ್ಚಿಮ ಘಟ್ಟವನ್ನೇ ಪರಿಸರ ಸೂಕ್ಷ್ಮ ವಲಯದ ಎಂದು ಘೋಷಿಸುವಂತೆ ಸಲಹೆ ನೀಡಿದ್ದರೆ, ಕಸ್ತೂರಿರಂಗನ್‌ ಸಮಿತಿ ಈ ವ್ಯಾಪ್ತಿಯನ್ನು ಪಶ್ಚಿಮ ಘಟ್ಟದ ಶೇ. 37ರಷ್ಟು ಭಾಗಗಳಿಗೆ ಇಳಿಸಿತು

8722552464 Astrloger

ಜಾಹೀರಾತು

ಅತ್ತ ಉಮ್ಮನ್‌ ಚಾಂಡಿ ಸರಕಾರವೂ ಗಾಡ್ಗೀಳ್‌ ವರದಿಗೆ ವಿರೋಧ ವ್ಯಕ್ತಪಡಿಸಿ ಉಮ್ಮನ್‌ ವಿ ಉಮ್ಮನ್‌ ನೇತೃತ್ವದ ಇನ್ನೊಂದು ಸಮಿತಿ ರಚಿಸಿತು. ಆ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಪಿಟಿ ಥೋಮಸ್‌ ಇದನ್ನು ಕಟುವಾಗಿ ವಿರೋಧಿಸಿದ್ದಲ್ಲದೆ ಗಾಡ್ಗೀಳ್‌ ವರದಿಯ ಜಾರಿಗೆ ಒತ್ತಾಯಿಸಿದ್ದರು.

“ಆದರೆ ನಂತರ ಬಂದ ಸರಕಾರ ಒಂದೊಂದಾಗಿ ನಿಯಮಗಳನ್ನು ಸಡಿಲ ಮಾಡುತ್ತಾ ಬಂದವು. ವಿಶೇಷವೆಂದರೆ ಈ ರೀತಿ ಭೂ ಕುಸಿತಗಳಿಗೆ ಗುರಿಯಾಗುವ ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಕಟ್ಟಡ ನಿರ್ಮಾಣವನ್ನು ಸರಕಾರ ಸಕ್ರಮ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಈ ಮಳೆ ಸುರಿದಿದೆ,” ಎಂದು ಥೋಮಸ್‌ ಹೇಳಿದ್ದಾರೆ. ಇದು ಸರಕಾರಗಳ ಬದ್ಧತೆಯನ್ನು ತೋರಿಸುತ್ತಿದೆ.

ಮಾಧವ ಗಾಡ್ಗೀಳ್‌ ವರದಿ ಪ್ರಕಾರ ಪರಿಸರ ಸೂಕ್ಷ್ಮ ವಲಯಗಳ ಪಟ್ಟಿಯಲ್ಲಿ ಮಂಡಕೋಲ್, ಪಣತ್ತಡಿ, ಪೈತಲ್ಮಲ, ಬ್ರಹ್ಮಗಿರಿ – ತಿರುನೆಲ್ಲಿ, ವಯನಾಡ್, ಬಾಣಾಸುರ ಸಾಗರ್ – ಕುಟ್ಟಿಯಾಡಿ, ನಿಲಂಬೂರ್ – ಮೇಪಾಡಿ, ಸೈಲೆಂಟ್ ವ್ಯಾಲಿ – ನ್ಯೂ ಅಮರಾಂಬಲಂ, ಸಿರುವಣಿ, ನೆಲ್ಲಿಯಂಪತಿ, ಪೀಚಿ – ವಝನಿ, ಅತಿರಪಿಲ್ಲಿ – ವಜಚಲ್, ಪೂಯಂಕುಟ್ಟಿ – ಮುನ್ನಾರ್, ಕಾರ್ಡಮಮ್‌ ಹಿಲ್ಸ್‌, ಪೆರಿಯಾರ್, ಕುಲತುಪುಳ, ಅಗಸ್ತ್ಯ ಮಾಲಾ ಹೆಸರಿದ್ದವು.

ಮಾಧವ ಗಾಡ್ಗೀಳ್‌ ವರದಿ ಪ್ರಕಾರ ವಯನಾಡ್‌ನ ವೈಥಿರಿ, ಮಾನಂತವಾಡಿ ಹಾಗೂ ಸುಲ್ತಾನ್‌ ಬತ್ತೇರಿ ಇಎಸ್‌ಝಡ್‌ Iರ ವ್ಯಾಪ್ತಿಗೆ ಬಂದರೆ, ಮಲಪ್ಪುರಂನ ಪೆರಿಂತಲ್ಮನ್ನಾ ಮತ್ತು ತಿರೂರ್ ತಾಲೂಕುಗಳು ಇಎಸ್‌ಝಡ್‌ IIರ ವ್ಯಾಪ್ತಿಗೆ ಬರುತ್ತವೆ..

SendShare36Share
Previous Post

ವಯನಾಡು ಭೂ ಕುಸಿತ ಸಂತ್ರಸ್ತರಿಗೆ ತುರ್ತು ಸ್ಪಂದಿಸಲು ವಯನಾಡು ಸಂಸದ ರಾಹುಲ್ ಗಾಂಧಿ ಕರೆ.

Next Post

ವಿದ್ಯಾಮಾತಾ ಅಕಾಡೆಮಿ ಜೆಸಿಐ ಪುತ್ತೂರು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಜಂಟಿ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In