ಪುತ್ತೂರು ಚಿಕ್ಕಮುಡ್ನೂರು ಏಕ – ಕಾಯರ್ತಡಿ ಗ್ರಾಮಾಂತರ ರಸ್ತೆಗೆ ದರೆಯು ಕುಸಿದು ಸಂಪೂರ್ಣ ಸಂಚಾರವು ಬಂದ್ ಆಗಿದೆ.
ರಸ್ತೆಯ ಒಂದು ಬದಿಯ ಗುಡ್ಡವು ಎತ್ತರವಾಗಿದ್ದು ಮರ ಗಿಡಗಳಿಂದ ಕೂಡಿದ್ದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗೋ ಸಾಧ್ಯತೆ ಇದೆ
ಸ್ಥಳೀಯರು ಹೇಳುವ ಪ್ರಕಾರ 3 ದಿನದ ಹಿಂದೆಯೇ ಇಲ್ಲಿ ದರೆಯು ಕುಸಿದಿದ್ದು , ಸ್ಥಳೀಯ ಪಂಚಾಯತ್ ಸದಸ್ಯರ ಗಮನಕ್ಕೆ ತಂದಿದ್ದು ನಿನ್ನೆಯವರೆಗೆ ಮಣ್ಣು ತೆರವು ಮಾಡುವ ಯಾವುದೇ ಕೆಲಸವನ್ನು ಮಾಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸು ಪಾಸಿನ ಮನೆಯವರಿಗೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಆದುದರಿಂದ ಸಂಬಂಧ ಪಟ್ಟ ಇಲಾಖೆ ಮತ್ತು ಪಂಚಾಯತ್ ಸದಸ್ಯರು ಇನ್ನು ಹೆಚ್ಚಿನ ಅನಾಹುತ ಆಗುವ ಮೊದಲೇ ಎಚ್ಚೆತ್ತು ಇದನ್ನು ಸರಿಪಡಿಸುವುದು ಉತ್ತಮ. ತಕ್ಷಣ ತಹಶೀಲ್ದಾರರು ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ಕೆಮ್ಮಾಯಿ ಆಗ್ರಹಿಸಿದ್ದಾರೆ.