ಅಡ್ಯಾರ್ ಹಿಂದೂ ಸುರಕ್ಷಾ ಸಮಿತಿ ಇದರ ಆಶ್ರಯದಲ್ಲಿ ಇತಿಹಾಸ ಪ್ರಸಿದ್ದ ಅಡ್ಯಾರ್ ಅಷ್ಟಮಿ ಆಗಸ್ಟ್ 26 ರಂದು ನಡೆಯಲಿದೆ.
ಬೆಳ್ಳಿಗೆ 10.00 ಕ್ಕೆ ಮಂಗಳೂರು ಉತ್ತರ ಶಾಸಕರು ಡಾ. ವೈ ಭರತ್ ಶೆಟ್ಟಿ ಶ್ರೀ ಕೃಷ್ಣ ದೇವರ ಪ್ರತಿಷ್ಠೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಸತೀಶ್ ಕುಂಪಲ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಸಾಯಂಕಾಲ ಗಂಟೆ 6.00 ಕ್ಕೆ ಸಂಸದರು ಕ್ಯಾಪ್ಟನ್ ಬೃಜೇಶ್ ಚೌಟ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನೆರವೇರಲಿದೆ, ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಮಾಣಿಲ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಸುಧೀರ್ ಶೆಟ್ಟಿ ಕಣ್ಣೂರ್ (ಮೇಯರ್ ಮಹಾನಗರ ಪಾಲಿಕೆ), ಶ್ರೀಮತಿ ಸುಮನಾ ಶರಣ್ (ನ್ಯಾಯವಾದಿ), ಶ್ರೀಮತಿ ಡಾಕ್ಟರ್ ದೀಪಿಕಾ ವೈಶಾಕ್ ಆಳ್ವ ಅಡ್ಯಾರ್ ಗುತು, ಶ್ರೀ ಮಹಾಬಲೇಶ್ವರ ಭಟ್( ಅರ್ಚಕರು ಮಹಾಲಿಂಗೇಶ್ವರ ದೇವಸ್ಥಾನ ಅಡ್ಯಾರ್) , ರಾಜೇಶ್ ಕೊಟ್ಟಾರಿ (ಬಿಜೆಪಿ ಉತ್ತರ ಅಧ್ಯಕ್ಷರು ), ಶ್ರೀಮತಿ ಚಂದ್ರಾವತಿ ವಿಶ್ವನಾಥ್ ಕಣ್ಣೂರ್ (ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು) ಹಾಗು ಇನ್ನಿತರ ಗಣ್ಯರು ಪಾಲ್ಗೊಳಲಿದ್ದಾರೆ. ಮಕ್ಕಳಿಗೆ , ಪುರುಷರಿಗೆ , ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರಗಲಿದೆ ಮತ್ತು 27 ನೇ ಮಂಗಳವಾರ ಸಂಜೆ ಗಂಟೆ 5.30 ಕ್ಕೆ ಶೋಭಾಯಾತ್ರೆ ಹಾಗು ಮೊಸರುಕುಡಿಕೆ ಉತ್ಸವ ನಡೆಯಲಿದೆ ಎಂದು ಹಿಂದೂ ಸುರಕ್ಷಾ ಸಮಿತಿ ವ್ಯವಸ್ಥಾಪಕರು ಮತ್ತುಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರು ವಿವೇಕ್ ಪೂಜಾರಿ ಕೊಡಿಮಜಲ್ ಅಡ್ಯಾರ್ ತಿಳಿಸಿದ್ದಾರೆ.