ಬಲ್ನಾಡು -ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು, ಜನಜಾಗೃತಿ ವೇದಿಕೆ ಬಲ್ನಾಡು ವಲಯ,ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಬಲ್ನಾಡು ವಲಯ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ವೆಂಕಟನಗರ ಬೆಳಿಯೂರುಕಟ್ಟೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕಮ್ರ ನಡೆಯಿತು.
ತಾಲೂಕು ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಹಾಗೂ ಜನಜಾಗೃತಿ ವೇದಿಕೆ ಬಲ್ನಾಡು ಇದರ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ ಇವರ ಅದ್ಯಕ್ಷತೆಯಲ್ಲಿ ಕಾಲೇಜು ಪ್ರಾಂಶುಪಾಲರು ಹರಿಪ್ರಸಾದ್ ಬೈಲಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು,
ಪುತ್ತೂರು ತಾಲೂಕಿನ ಯೋಜನಾಧಿಕಾರಿ ಶಶಿಧರ್ ಯಂ ಪ್ರಾಸ್ತಾವಿಕಾವಾಗಿ ಮಾತನಾಡುತ್ತ ಯೋಜನೆಯ ಹಲವು ಕಾರ್ಯಕ್ರಮದಲ್ಲಿ ಜನಜಾಗೃತಿ ಕಾರ್ಯಕ್ರಮ ಒಂದು ಅಂಗ,ಅದರಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಕಾಲೇಜು ಮಕ್ಕಳಿಗೆ ಮಾಹಿತಿ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಸಮಾಜಕ್ಕೆ ನೀಡುವುದು ಪೂಜ್ಯರ ಸಂಕಲ್ಪ ಆಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅರೋಗ್ಯ ಇಲಾಖೆ ಮಂಗಳೂರು ಇದರ ನಿವೃತ್ತ ಮೇಲ್ವಿಚಾರಕರಾದ ಜಯರಾಮ ಪೂಜಾರಿಯವರು ಮಾಹಿತಿ ನೀಡುತ್ತಾ ನಮಗೆ ನೆಮ್ಮದಿಯ ಜೀವನ ಬೇಕಾದರೆ ಅರೋಗ್ಯ ಇದ್ದರೆ ಮಾತ್ರ ಸಾಧ್ಯ, ನಮಗೆ ಯಾವುದೇ ದುಶ್ಚಟ ಇಲ್ಲದಿದ್ದರೆ ನಾವು ಆರೋಗ್ಯದಲ್ಲಿ ಇರುತ್ತೇವೆ,ಈಗಿನ ಮಕ್ಕಳು ಹಾಳಾಗುವುದು ಕೆಲವು ಚಟಗಳಿಂದ ಮಾದಕ ದ್ರವ್ಯದ ಚಟ ಇದ್ದರೆ ನಾವು ಮಾತ್ರ ಅಲ್ಲ,ನಮ್ಮ ಮನೆಯೇ ಸರ್ವನಾಶ ಆಗುತ್ತದೆ,ಈಗಿನ ಮಕ್ಕಳು ಮೊಬೈಲ್ ಬಳಕೆಯಿಂದ ಅದರಲ್ಲಿ ಕೆಲವು ಆಟಗಳಿಂದ ಆತ್ಮಹತ್ಯೆ ಮಾಡಿದ ನಿದರ್ಶನವು ಇದೆ,ನಮ್ಮನ್ನು ನಾವೇ ರಕ್ಷಣೆ ಮಾಡಿ ಮಾಡಿಕೊಳ್ಳಬೇಕು, ನಾವೇ ಸಮಾಜದಲ್ಲಿ ಗುರುತಿಸುವ ಪ್ರಜೆಯಾಗಿ ಬಾಳಲು ಪ್ರತಿಜ್ಞೆ ಮಾಡಿಕೊಳ್ಳಬೇಕು ಎಂದು ಹೇಳಿ ಶುಭ ಹಾರೈಸಿದರು,
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರಿಪ್ರಕಾಶ್ ಬೈಲಾಡಿಯವರು ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಆಗುವ ಪ್ರತಿಯೊಂದು ಕಾರ್ಯಕ್ರಮ ಸಮಾಜದ ಒಳಿತಿಗಾಗಿ ಮಾಡುತ್ತಾರೆ, ಇದು ಕಾಲೇಜಿನ ಮಕ್ಕಳಿಗೆ ಉಪಯುಕ್ತ ಮಾಹಿತಿಯಾಗಿದೆ,ನಮ್ಮ ಮಕ್ಕಳು ಇಂದಿನ ಮಾಹಿತಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು,
ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರು ಪರಮೇಶ್ವರಿ ಭಟ್ ರವರು ಮಾತನಾಡುತ್ತ ನಾವು ಶಾಲೆಗೆ ಹೋಗುವಾಗ ಇಂತಹ ಮಾಹಿತಿಗಳು ಇರಲಿಲ್ಲ, ಈಗಿನ ಮಕ್ಕಳಿಗೆ ಕಾಲೇಜಿನಲ್ಲಿ, ಸಂಘ ಸಂಸ್ಥೆಗಳ ವತಿಯಿಂದ ಉತ್ತಮವಾದ ಮಾಹಿತಿ ಮಾರ್ಗದರ್ಶನ ಸಿಗುತ್ತದೆ, ಇದನ್ನು ಅಳವಡಿಸಿಕೊಂಡು ಮುನ್ನಡೆಯೋಣ ಎಂದರು.
ಬಳಿಕ ಜನಜಾಗೃತಿ ವೇದಿಕೆ ಬಲ್ನಾಡು ವಲಯದ ಅಧ್ಯಕ್ಷರು ಪ್ರವೀಣ್ ಚಂದ್ರ ಆಳ್ವರವರು ಮಾತನಾಡುತ್ತ ಯಾವುದೇ ಕೆಟ್ಟ ಚಟ ಇಲ್ಲದೆ ಇದ್ದರೆ ನಮ್ಮನ್ನು ಎಲ್ಲರೂ ಗುರುತಿಸಿ ಗೌರವ ನೀಡುತ್ತಾರೆ,ನಮ್ಮ ಗೌರವವನ್ನು ನಾವು ಉಳಿಸಿಕೊಳ್ಳೋಣ ಎಂದರು.
- ವೇದಿಕೆಯಲ್ಲಿ ಬಲ್ನಾಡು ಮಾಜಿ ವಲಯಧ್ಯಕ್ಷರು ಅಂಬ್ರೋಜ್ ಡಿ ಸೋಜ,ಸಾಜ-ಸಾರ್ಯ ಒಕ್ಕೂಟದ ಅಧ್ಯಕ್ಷರು ನಾಗೇಶ್ ನಾಯ್ಕ, ಉಪಸ್ಥಿತರಿದ್ದರು, ಬೆಳಿಯೂರುಕಟ್ಟೆ ಒಕ್ಕೂಟದ ಸೇವಾಪ್ರತಿನಿಧಿ ಇಗ್ನೇಶಿಯಸ್ ಡಿಸೋಜ ಸ್ವಾಗತಿಸಿದರು,ಶಿಕ್ಷಕಿ ರವಿಕಲ ಟಿ ವಂದಿಸಿದರು, ಬಲ್ನಾಡು ವಲಯ ಮೇಲ್ವಿಚಾರಕರು ಪ್ರಶಾಂತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಸಾಜ -ಸಾರ್ಯ ಒಕ್ಕೂಟ ಸೇವಾಪ್ರತಿನಿಧಿ ಉಷಾ,ಕುಂಜೂರುಪಂಜ ಸೇವಾಪ್ರತಿನಿಧಿ ಆಶಾಲತಾ ಸಹಕರಿಸಿದರು.
ವರದಿ -ಆನಂದ್ ಕಲೆಂಜಿಲ.