ಓಟ್ಸ್ ಅನ್ನು ವೈಜ್ಞಾನಿಕವಾಗಿ ಅವೆನೊ ಸಟಿವಾ ಎಂದು ಕರೆಯಲಾಗುತ್ತದೆ, ಇದು ಸಸ್ಯ ಸಾಮ್ರಾಜ್ಯಕ್ಕೆ ಮತ್ತು ಸಸ್ಯಗಳಲ್ಲಿನ ‘ಅವೆನೊ’ ಕುಲಕ್ಕೆ ಸೇರಿದೆ.
ಭಾರತದಲ್ಲಿ ಓಟ್ಸ್ ಅನ್ನು ‘ಜೈ’ ಎಂದೂ ಕರೆಯುತ್ತಾರೆ.
ಭಾರತದಲ್ಲಿ ಓಟ್ಸ್ ಕೃಷಿಯನ್ನು ಹರಿಯಾಣ ಮತ್ತು ಪಂಜಾಬ್‌ನಲ್ಲಿ ವ್ಯಾಪಕವಾಗಿ ಮಾಡಲಾಗುತ್ತದೆ, ಈ ಧಾನ್ಯಗಳು ಬೆಳೆಯಲು ಭತ್ತದ ಗದ್ದೆಗಳು ಬೇಕಾಗುತ್ತವೆ.
ಇದಲ್ಲದೆ, ಈ ಸಸ್ಯಗಳನ್ನು ಸಾಮಾನ್ಯವಾಗಿ ಸಾವಯವ ಕೃಷಿ ಪ್ರಕ್ರಿಯೆಯನ್ನು ಬಳಸಿ ಬೆಳೆಯಲಾಗುತ್ತದೆ.
ಓಟ್ಸ್ ನ್ನು ಕನ್ನಡದಲ್ಲಿ ತೋಕೆ ಗೋಧಿ ಅಥವಾ ತೊಕ್ಕೆ ಗೋಧಿ ಎಂದು ಕರೆಯುತ್ತಾರೆ. ಗೋದಿ ಬಾರ್ಲಿಯಂತೆ ಇದು ಕೂಡ ಆಹಾರಕ್ಕೆ ಯೋಗ್ಯವಾದ ಏಕದಳ ಧಾನ್ಯ. ಸಾಮಾನ್ಯವಾಗಿ ಜಾನುವಾರುಗಳ ಮೇವಾಗಿ ಈ ಧಾನ್ಯವನ್ನು ಬಳಸಲಾಗುತ್ತಿತ್ತು. ಯುರೋಪ್ ಅಮೆರಿಕ ರಷ್ಯಾ ಚೀನಾದಂತ ದೇಶಗಳಲ್ಲಿ ಈ ಧಾನ್ಯವನ್ನು ಬೆಳೆಸಲಾಗುತ್ತಿತ್ತು. ಇದು ಅಲ್ಲಿನ ಕಾಡುಗಳಲ್ಲಿ ಬೆಳೆಸಲಾಗುತ್ತಿದ್ದಂತಹ ಜಾನುವಾರುಗಳ ನೇವಾಗಿತ್ತು. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಇದರ ಅಪರೂಪದ ಗುಣಕ್ಕಾಗಿ ಎಂದು ಆರೋಗ್ಯಕರ ಆಹಾರವಾಗಿ ಮಾನವನ ಆಹಾರ ಕ್ರಮದಲ್ಲಿ ಎತ್ತರದ ಸ್ಥಾನದಲ್ಲಿದೆ ಮತ್ತು ಆರೋಗ್ಯಕರ ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗುತ್ತಿದೆ.
ಓಟ್ಸ್ ಗೋದಿ ಬಾರ್ಲಿಯಂತೆ ಶೀತ ಮತ್ತು ಚಳಿಗಾಲವನ್ನು ಸಹಿಸಿಕೊಳ್ಳುವುದಿಲ್ಲ ಇದಕ್ಕೆ ಕಡಿಮೆ ಬೇಸಿಗೆಯ ಶಾಖ ಮತ್ತು ಹೆಚ್ಚಿನ ಮಳೆಯಾಗುತ್ತಿರುತ್ತದೆ. ವಾಯುವ್ಯ ಯುರೋಪ್ ನಂತಹ ಪ್ರದೇಶಗಳಲ್ಲಿ ಅಂದರೆ ತಂಪಾದ ಆರ್ದ್ರ ಬೇಸಿಗೆಯನ್ನು ಹೊಂದಿರುವ ಜಾಗಗಳಲ್ಲಿ ಈ ಬೆಳೆಯನ್ನ ಬೆಳೆಯಲು ಸೂಕ್ತವಾಗಿದೆ. ಕಡಿಮೆ ಪೋಷಕಾಂಶ ಮತ್ತು ಆಮ್ಲೀಯ ಮಣ್ಣುಗಳನ್ನು ಸಹಿಸಿಕೊಳ್ಳಬಲ್ಲ ಬೆಳೆ ಈ ಓಟ್ಸ್.
ಓಟ್ಸ್ ದಟ್ಟವಾಗಿ ಮತ್ತು ಬಲವಾಗಿ ಬೆಳೆಯುತ್ತದೆ, ಇದು ಅನೇಕ ಕಳೆಗಳನ್ನು ಮೀರಿಸಲು ಅನುವು ಮಾಡಿಕೊಡುತ್ತದೆ ಮತ್ತು ಇತರ ಧಾನ್ಯಗಳಿಗೆ ಹೋಲಿಸಿದರೆ ರೋಗಗಳಿಂದ ಮುಕ್ತವಾಗಿದೆ.
ಓಟ್ಸ್ ಅನ್ನು ಮಾನವನ ಬಳಕೆಗಾಗಿ ಓಟ್ ಮೀಲ್ ಆಗಿ ಬಳಸಲಾಗುತ್ತದೆ, ಇದರಲ್ಲಿ ಸ್ಟೀಲ್ ಕಟ್ ಓಟ್ಸ್ ಅಥವಾ ರೋಲ್ಡ್ ಓಟ್ಸ್ ಎಂಬ ಎರಡು ವಿಧಗಳಿವೆ.
ಜಾಗತಿಕ ಉತ್ಪಾದನೆಯಲ್ಲಿ ಕೆನಡಾ ಮತ್ತು ರಷ್ಯಾ ಓಟ್ಸ್ ಉತ್ಪಾದನೆಯಲ್ಲಿ ಪ್ರಾಬಲ್ಯ ಹೊಂದಿದೆ. ಇಲ್ಲಿ
ಜಾಗತಿಕ ವ್ಯಾಪಾರವು ಉತ್ಪಾದನೆಯ ಒಂದು ಸಣ್ಣ ಭಾಗವಾಗಿದೆಯಷ್ಟೇ, ಉಳಿದಂತೆ ಹೆಚ್ಚಿನ ಧಾನ್ಯವನ್ನು ದೇಶಗಳೊಳಗೆ ಸೇವನೆಗೆ ಬಳಸಲಾಗುತ್ತದೆ.
ಓಟ್ಸ್ ಪೌಷ್ಟಿಕಾಂಶ-ಭರಿತ ಆಹಾರವಾಗಿದ್ದು, ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನಿಯಮಿತವಾಗಿ ಸೇವಿಸಿದಾಗ ಮಾನವನ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಓಟ್ಸ್‌ನ ಸಾಮಾನ್ಯ ಬಳಕೆಯೆಂದರೆ ಜಾನುವಾರುಗಳ ಆಹಾರ;
ಬೆಳೆಯನ್ನು ನೆಲದ ಹೊದಿಕೆಯಾಗಿ ಬೆಳೆಸಬಹುದು ಮತ್ತು ಹಸಿರು ಗೊಬ್ಬರವಾಗಿ ಉಳುಮೆ ಮಾಡಬಹುದು.
ಸ್ಯಾಮ್ಯುಯೆಲ್ ಜಾನ್ಸನ್ ಓಟ್ಸ್ ಅನ್ನು 1755 ಡಿಕ್ಷನರಿ ಆಫ್ ಇಂಗ್ಲೀಷ್ ಲ್ಯಾಂಗ್ವೇಜ್‌ನಲ್ಲಿ, “ಒಂದು ಧಾನ್ಯ, ಇಂಗ್ಲೆಂಡ್‌ನಲ್ಲಿ ಸಾಮಾನ್ಯವಾಗಿ ಕುದುರೆಗಳಿಗೆ ನೀಡಲಾಗುತ್ತದೆ, ಆದರೆ ಸ್ಕಾಟ್‌ಲ್ಯಾಂಡ್‌ನಲ್ಲಿ ಜನರನ್ನು ಅಹಾರ ಕ್ರಮವಾಗಿ ಆಕರ್ಷಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ. ಅಂದರೆ ವೋಟ್ಸ್ ಒಂದು ಜನಪದ ಆಹಾರ ಪದ್ಧತಿ ಎನ್ನುವುದು ಐರೋಪ್ಯ ರಾಷ್ಟ್ರಗಳಲ್ಲಿ ಉಲ್ಲೇಖವಾಗಿರುವ ಅಂಶ. ಅದಕ್ಕೆ ಪೂರಕವಾಗಿ ರೌಡ್ ಫೋಕ್ ಸಾಂಗ್ ಇಂಡೆಕ್ಸ್ ನಲ್ಲಿ ವೋಟ್ಸ್ ಅಂಡ್ ಬೀನ್ಸ್ ಅಂಡ್ ಬಾರ್ಲಿ ಗ್ರೋ ಎಂಬ ಜನಪದ ಗೀತೆಯ ಮೊದಲ ಸಾಲು ಇದೆ. ಇದೇ ರೀತಿಯ ಜನಪದ ಹಾಡುಗಳಲ್ಲಿ ಫ್ರಾನ್ಸ್ ಕೆನಡಾ ಬೆಲ್ಜಿಯಂ ಸ್ವೀಡನ್ ಮತ್ತು ಇಟಲಿಗಳಲ್ಲೂ ಸಾಕ್ಷಿಗಳಿವೆ.
ಓಟ್ಸ್ ನಲ್ಲಿ ಅಗಾಧವಾದ ಆರೋಗ್ಯಕರ ಪ್ರಯೋಜನಗಳಿವೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಆಹಾರ ಪದ್ಧತಿ ಒಂದು ಫ್ಯಾಷನ್ ಆಗಿದೆ ಈ ನಿಟ್ಟಿನಲ್ಲಿ ಮಾನವನ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಮತ್ತಷ್ಟು ಪುಷ್ಟಿ ನೀಡಲು ಓಟ್ಸ್ ಅತ್ಯುತ್ತಮ ಆಯ್ಕೆಯಾಗಿದೆ.
ಓಟ್ಸ್ ಆರೋಗ್ಯಕರ ಸಸ್ಯ ಮೂಲದ ಉತ್ತಮಪ್ರೋಟೀನ್ ಆಗಿದೆ. ವಿಶೇಷವಾಗಿ ನಿಮ್ಮ ಜಡ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಲು ನೀವು ಬಯಸಿದರೆ ಇದು ಉತ್ತಮ ಆಯ್ಕೆಯಾಗಿದೆ.
ಪೋಷಕಾಂಶಗಳಿಂದ ತುಂಬಿರುವ ಇದು ಮೆಗ್ನೀಸಿಯಮ್, ಫೈಬರ್, ಸತು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪಾಕ ಶಾಲೆಯ ಸಂಸ್ಕೃತಿ ಮಹತ್ತರ ಬದಲಾವಣೆ ಕಂಡಿದೆ ಈ ನಿಟ್ಟಿನಲ್ಲಿ ಓಟ್ಸ್ ರಾಗಿ ಮುಂತಾದ ಧಾನ್ಯಗಳು ಜನರ ಓಲೈಕೆಗೆ ಒಳಗಾಗಿವೆ.
ನಿಮ್ಮ ದಿನನಿತ್ಯದ ದಿನಚರಿಯಲ್ಲಿ ಈ ಆಹಾರಗಳನ್ನು ಸೇರಿಸಲು ಹಲವು ಪ್ರಯೋಗಗಳು ಮತ್ತು ಹೊಸ ವಿಧಾನಗಳಿವೆ.
ಬೆಳಗಿನ ಉಪಾಹಾರದಿಂದ ಹಿಡಿದು ವಿಲಕ್ಷಣ ಸಿಹಿತಿಂಡಿಗಳವರೆಗೆ, ಬಾಣಸಿಗರು ಸಹ ಓಟ್ಸ್ ಅನ್ನು ಹೆಚ್ಚಾಗಿ ಬಳಸಲು ಪ್ರೇರೇಪಿಸುತ್ತಿದ್ದಾರೆ ಮತ್ತು ಹೆಚ್ಚು ಆರೋಗ್ಯಕರವಾಗಿ ತಿನ್ನಲು ಪ್ರೋತ್ಸಾಹಿಸುತ್ತಿದ್ದಾರೆ.
ನಿಮ್ಮ ದೈನಂದಿನ ಆಹಾರದಲ್ಲಿ ಓಟ್ಸ್ ಅನ್ನು ಏಕೆ ಸೇರಿಸಿಕೊಳ್ಳಬೇಕು ಎಂಬುದು ಇಲ್ಲಿದೆ
*ವಿಟಮಿನ್‌ಗಳು ಮತ್ತು ಖನಿಜಗಳ ಸಮೃದ್ಧಿಯಿಂದ ಸಮೃದ್ಧವಾಗಿದೆ.
*ಬೀಟಾ-ಗ್ಲುಕನ್ ಫೈಬರ್‌ನ ಸಮೃದ್ಧ ಮೂಲವಾಗಿದೆ, ಇದು ಕರುಳಿನ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
*ಓಟ್ಸ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
*ದೀರ್ಘಕಾಲ ನಿಮ್ಮನ್ನು ಸಂತೃಪ್ತಿಯಲ್ಲಿಡುತ್ತದೆ ಮತ್ತು ಹಸಿವು ನಿಗ್ರಹದಲ್ಲಿಡುತ್ತದೆ.
ವಿಸ್ಮಯ