ಚೈತ್ರಾ ಅವರು ಉಡುಪಿ ಜಿಲ್ಲೆಯ ಕುಂದಾಪುರದವರು. ಇಲ್ಲಿನ ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಅವರು , ನಂತರ ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ಎಂಸಿಜೆ ಪದವಿ ಪಡೆದಿರುತ್ತಾರೆ.
ಸ್ನಾತಕೋತ್ತರ ಪದವಿ ಮುಗಿದ ಬಳಿಕ ಉಡುಪಿಯ ಸ್ಪಂದನಾ ಟಿವಿ ಹಾಗೂ ಮುಕ್ತ ನ್ಯೂಸ್, ಉದಯವಾಣಿ ಪತ್ರಿಕೆಯಲ್ಲೂ ಕೆಲಕಾಲ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಇದಷ್ಟೇ ಅಲ್ಲದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು.
ಚೈತ್ರಾ ಅಲ್ಲಿ ಇಲ್ಲಿ ಖಾಸಗಿ ಕೆಲಸಗಳನ್ನು ಮಾಡುತ್ತಾ ಹಿಂದುತ್ವದ ಬಣ್ಣ ಹಚ್ಚಿಕೊಂಡು ಹೆಸರು ಮಾಡಿಕೊಂಡು ಅಷ್ಟೇ ಬೇಗ ಹೆಸರು ಹಾಳು ಮಾಡಿಕೊಂಡ ಕಥೆ ರಾಜ್ಯಕ್ಕೇ ಗೊತ್ತಿರುವ ಹಳೇ ವಿಷಯ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿರುವ ಹಿಂದೂ ಫೈರ್ ಬ್ರಾಂಡ್ ಕೇವಲ 15 ನಿಮಿಷಗಳ ಕಾಲಾವಕಾಶದಲ್ಲಿ ವೀಕ್ಷಕರಿಂದ 2 ಲಕ್ಷಕ್ಕೂ ಅಧಿಕ ವೋಟ್ಸ್ ಪಡೆದಿರುವುದು ದಾಖಲೆಯೇ ಸರಿ.
ಇಷ್ಟೇ ಅಲ್ಲದೆ, ಚೈತ್ರಾ ಕುಂದಾಪುರ ಅವರಿಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಸದ್ಯ ಬಿಗ್ ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಚೈತ್ರಾಗೆ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಮೊದಲ ದಿನದವೇ ಗದ್ದಲ ಗೊಂದಲಕ್ಕೆ ಕಾರಣರಾದ ಚೈತ್ರಾ ಕುಂದಾಪುರ ಅವರ ವೈಲೆಂಟ್ ಕಾರ್ಡ್ ಜನರಿಗೆ ಇಷ್ಟವಾದರೆ ಮನೆಯಲ್ಲಿ ಉಳಿಯೋದು ಪಕ್ಕಾ. ಇಲ್ಲಾಂದ್ರೆ ವಾರದ ಕೊನೆಗೆ ಬ್ಯಾಗು ಹಿಡಿದು ಮನೆಯ ದಾರಿ ತೋರಿಸಲಿದ್ದಾರೆ ರಾಜ್ಯದ ಜನತೆ. ಅಂದಹಾಗೆ ಚೈತ್ರಾ ಅವರಿಗೆ ಈಗ 28 ವರ್ಷ ವಯಸ್ಸು ಎನ್ನಲಾಗಿದೆ.
ಹರಿತವಾದ ನಾಲಗೆ ಒಂದಷ್ಟು ಸಂಸ್ಕೃತಿ, ಧರ್ಮ, ಸಿದ್ಧಾಂತ ಗಳೆಂಬ ಅಮೂಲ್ಯ ವಸ್ತುಗಳನ್ನು ನಾಲಗೆ ತುದಿಯಲ್ಲಿಟ್ಟು ವ್ಯವಹಾರ ಮಾಡುತ್ತಿದ್ದ ಈಕೆಗೆ ಮತ್ತೆ ಮುಖ್ಯಭೂಮಿಕೆಗೆ ಬರಲು ಬಿಗ್ ಬಾಸ್ ಎಂಬ ವೇದಿಕೆ ಸಿಕ್ಕಿದೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತು ಇಂಥವರಿಗೆ ಸರಿಯಾಗಿ ಹೇಳಿಮಾಡಿಸಿರೋದು.
ಕಳೆದ ಬಾರಿ ರಾಜ್ಯವನ್ನೇ ಮಂಗ ಮಾಡಿದ್ದ ಡ್ರೋನ್ ಪ್ರತಾಪ ಸುಭಗ ಹಣೆಪಟ್ಟಿ ಕಟ್ಟಿಕೊಂಡು ಹೊರ ಬಂದದ್ದು ಗೊತ್ತೇ ಇದೆ. ಈ ಬಾರಿ ಚೈತ್ರಾ ಕುಂದಾಪುರ ಯಾವ ಹಣೆಪಟ್ಟಿ ಕಟ್ಟಿಕೊಂಡು ಹೊರ ಬರುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ವಿಸ್ಮಯ