ನವದೆಹಲಿ: ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ-ರಾಜಕಾರಣಿ ಕಂಗನಾ ರಣಾವತ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ದೇಶ್ ಕೆ ಪಿತಾ ನಹೀ, ದೇಶ್ ಕೆ ತೋ ಲಾಲ್ ಹೋತೇ ಹೈ. ಧನ್ಯೇ ಹೈ ಭಾರತ್ ಮಾ ಕೆ ಯೇ ಲಾಲ್-‘ದೇಶಕ್ಕೆ ತಂದೆ ಇಲ್ಲ. ಅದಕ್ಕೆ ಮಕ್ಕಳಿದ್ದಾರೆ. ಭಾರತಮಾತೆಯ ಈ ಮಕ್ಕಳು ಧನ್ಯರು ಕಂಗನಾ ರನೌತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬರೆದಿದ್ದಾರೆ. ಶಾಸ್ತ್ರಿ ಅವರ 120 ನೇ ಜನ್ಮ ವಾರ್ಷಿಕೋತ್ಸವದಂದು ನಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪೋಸ್ಟ್‌ನಲ್ಲಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ಥಾನಮಾನವನ್ನು ಕಾಂಗ್ರೆಸ್ ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ. ಬಿಜೆಪಿ ಸಂಸದೆ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಇನ್ನೊಂದೆಡೆ ಪಂಜಾಬ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಕೂಡಾ ಕಂಗನಾ ಹೇಳಿಕೆಯನ್ನು ಟೀಕಿಸಿದ್ದಾರೆ
ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಂಡಿ ಸಂಸದೆ ದೇಶದಲ್ಲಿ ಗಾಂಧಿಯವರ ಸ್ವಚ್ಛತೆಯ ಪರಂಪರೆಯನ್ನು ಮಂದುವರಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ಬಾಲಿವುಡ್‌ನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಸಂಸದೆ ಕಂಗನಾ ರಣಾವತ್ ಅವರ ಸಿನಿಮಾ ಮತ್ತು ರಾಜಕೀಯ ಹೇಳಿಕೆಗಳು ದೇಶಾದ್ಯಂತ ಸುದ್ದಿ ಮಾಡುತ್ತಿವೆ. ಗೆದ್ದು ಸಂಸದೆಯಾದ ನಂತರ ಅವರು ಕ್ಷೇತ್ರದ ಅಭಿವೃದ್ಧಿ, ಬಿಜೆಪಿಯನ್ನು ಬಲಪಡಿಸುವ ಬಗ್ಗೆ ಮಾತನಾಡುವ ಬದಲು ಪಕ್ಷಕ್ಕೆ ಸಂಕಷ್ಟ ತಂದೊಡ್ಡುತ್ತಿದ್ದಾರೆ. 2020 ರಲ್ಲಿ ರೈತರ ಆಂದೋಲನದ ನಂತರ ಹಿಂತೆಗೆದುಕೊಂಡ 3 ಕೃಷಿ ಕಾನೂನುಗಳನ್ನು ಮತ್ತೆ ಜಾರಿಗೆ ತರುವುದಾಗಿ ಹೇಳುವ ಮೂಲಕ ಎನ್‌ಡಿಎ ಸರ್ಕಾರವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದ್ರು.