ಹರಿ ಪ್ರಸಾದ್ ನಕಲಿ ಗಾಂಧಿಗಳ ಬೂಟು ನೆಕ್ಕಿದವರು. ನಾವು ಅಸಲಿ ಗಾಂಧಿಗಳಿಗೆ ಗೌರವ ಕೊಟ್ಟಿದ್ದೇವೆ. ಗಾಂಧಿ ಜೀವನಧಾರೆಯನ್ನು ಪ್ರಧಾನ ಮಂತ್ರಿಗಳು ಅನುಸರಿಸಿದ್ದಾರೆ. ಗೋಡ್ಸೆ ಅನುಯಾಯಿಗಳು ಎಂದ ಬಿಕೆ ಹರಿಪ್ರಸಾದ್ ವಿರುದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗರಂ ಆಗಿದ್ದಾರೆ.
ಕುರಿತು ಮಾಧ್ಯಮಗಳ ಜೊತೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಇವರು ನಕಲಿ ಗಾಂಧಿಗಳ ಬೂಟು ನೆಕ್ಕಿದವರು. ಕಾಂಗ್ರೆಸ್ ನಲ್ಲಿ ಹರಿಪ್ರಸಾದ್ ಸ್ಥಿತಿ ಏನಾಗಿದೆ ಅನ್ನೋದನ್ನ ತಿಳಿದುಕೊಳ್ಳಲಿ..ಮುಖ್ಯಮಂತ್ರಿಗಳು ಇವರನ್ನು ಹೊರಹಾಕಲು ಪ್ರಯತ್ನ ಮಾಡಿದ್ರು. ಹರಿಪ್ರಸಾದ್ ಮೊದಲು ಅವರ ಯೋಗ್ಯತೆಯನ್ನು ನೋಡಿಕೊಳ್ಳಲಿ. ಮಹಾತ್ಮಾ ಗಾಂಧಿ,ಸರ್ಧಾರ ವಲ್ಲಭಾಯಿ ಪಟೇಲ್ ಗೆ ಗೌರವ ಕೊಟ್ಟಿದ್ದು ನಾವು. ನೀವೇನ ಮಾಡಿದೀರಿ,ನಕಲಿ ಗಾಂಧಿಗಳ ಬೂಟು ನೆಕ್ಕಿ ಈ ಸ್ಥಿತಿಗೆ ಬಂದಿದ್ದೀರಿ ಎಂಧು ವಾಗ್ದಾಳಿ ನಡೆಸಿದರು.
ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ,ಗಾಂಧಿ ಅವರಿಗೆ ಇವರೇನ ಗೌರವ ಕೊಟ್ಟಿದ್ದೀರಿ ಅನ್ನೋದ ಗೊತ್ತಿದೆ. ನಮ್ಮ ಬಗ್ಗೆ ಏನ ಮಾತಾಡ್ತೀರಿ. ಅಂಬೇಡ್ಕರ್ ಅವರಿಗೆ ನೀವು ಭಾರತ ರತ್ನ ಗೌರವ ಕೊಡಲಿಲ್ಲ. ನಾವು ಯಾವತ್ತೂ ನಕಲಿ ಗಾಂಧಿಗೆ ಗೌರವ ಕೊಡಲ್ಲ,ಅಸಲಿ ಗಾಂಧಿಗಳಿಗೆ ಮಾತ್ರ ಗೌರವ ಕೊಡ್ತೀವಿ. ಹರಿಪ್ರಸಾದ್ ಸಿದ್ದರಾಮಯ್ಯ ನಿಕ್ಕರ್ ಬಗ್ಗೆ ಮಾತಾಡಿದ್ರು. ಹರಿಪ್ರಸಾದ್ ನಿಕ್ಕರ್ ಹಾಕ್ತಾರೋ ಇಲ್ವೋ ಗೊತ್ತಿಲ್ಲ. ನಾನು ಅಸಭ್ಯ ಭಾಷೆ ಬಳಸಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್, ಭಯೋತ್ಪಾದಕ ಬೆಂಬಲಿಸುವ ಪಾರ್ಟಿ. ಬಾಟ್ಲಾ ಹೌಸ್ ಎನಕೌಂಟರ್ ಪ್ರಕರಣದಲ್ಲಿ ಭಯೋತ್ಪಾದಕರು ಸತ್ತಾಗ, ಸೋನಿಯಾ ಗಾಂಧಿ ನಿದ್ದೆ ಮಾಡಿರಲಿಲ್ಲ, ಇದನ್ನು ಅವರೇ ಹೇಳಿಕೊಂಡಿದ್ದರು. ಅಫ್ಜಲ್ ಗುರುಗೆ ಗಲ್ಲು ವಿಧಿಸಿದಾಗ ಕ್ಷಮಾಪಣೆ ಕೊಡುವ ಮಾತನಾಡಿದ್ರು. ಮುಸ್ಲಿಂ ಓಲೈಕೆ ನೀತಿಯಿಂದ ಕಾಂಗ್ರೆಸ್ ದೇಶದಲ್ಲಿ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ 100 ಸ್ಥಾನ ಸಹ ಗೆಲ್ಲೋದಕ್ಕೆ ಆಗಿಲ್ಲ. ಮುಸ್ಲಿಮರ ತುಷ್ಟಿಕರದಿಂದಾಗಿ ಕಾಂಗ್ರೆಸ್ ದೇಶದಲ್ಲಿ ನಿರ್ನಾಮವಾಗುತ್ತಿದೆ. ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಅಮಾಯಕರ ಬಂಧನವಾಗಿದ್ರೆ, ಪೊಲೀಸರ ಮೇಲೆ ಏನ್ ಕ್ರಮ ಕೈಗೊಳ್ತೀರಿ? ಪೊಲೀಸ್ ಠಾಣೆ, ಪೊಲೀಸ ವಾಹನಗಳ ಮೇಲೆ ಕಲ್ಲು ತೂರಿದವರು ಅಮಾಯಕರಾ ಎಂದು ಪ್ರಶ್ನಿಸಿದ ಅವರು, ನಾಳೆ ಹೋರಾಟದ ಬಗ್ಗೆ ನಾನು ಜಿಲ್ಲಾಧ್ಯಕ್ಷರ ಜೊತೆ ಮಾತಾಡತೀನಿ ಎಂದು ಜೋಶಿ ಹೇಳಿದರು. ಮುಖ್ಯಮಂತ್ರಿಗಳಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ.? ದೇಶದಲ್ಲಿ ಕೋರ್ಟ್ ಇದೆಯೋ ಇಲ್ವೋ, ಅವತ್ತು ಗಲಭೆ ಆದಾಗ ಸ್ಟೇಗೆ ಹೋಗಿದ್ರೋ ಇಲ್ವೋ? ಭ್ರಷ್ಟಾಚಾರ ಪ್ರಕರಣದಲ್ಲೂ ನಿಮಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ. ದೇಶದ ಭದ್ರತೆ ದೃಷ್ಟಿಯಿಂದಲೂ ನಂಬಿಕೆ ಇಲ್ಲ. ವೋಟ್ ಗಾಗಿ ಇವರು ಭಯೋತ್ಪಾದಕರಿಗೂ ಸಪೋರ್ಟ್ ಮಾಡಲು ಹಿಂದು ಮುಂದೆ ನೋಡಲ್ಲ. ಅಧಿಕಾರ ಇದೆ ಅಂತಾ ಸಿದ್ದರಾಮಯ್ಯ ಮಾತಾಡಿದ್ದಾರೆ. ಅಧಿಕಾರ ಜನ ಕೊಟ್ಟಿದ್ದು,ಅಧಿಕಾರ ಸಂಯಮ,ವಿವೇಚನೆಯಿಂದ ಬಳಸಬೇಕು ಎಂದು ಜೋಶಿ ಹೇಳಿದರು.
ಒಂದು ಕಾಲದಲ್ಲಿ 400 ಸ್ಥಾನ ಇದ್ದವರು,ಇವತ್ತು ನಿಮ್ಮ ಸ್ಥಿತಿ ಏನಾಗಿದೆ. ಇವತ್ತಿಗೂ ಲೋಕಸಭೆಯಲ್ಲಿ ನೀವು 100 ಸೀಟ್ ದಾಟಿಲ್ಲ, ಇದಕ್ಕೆಲ್ಲ ನಿಮ್ಮ ತುಷ್ಟೀಕರಣ ಕಾರಣ. ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದರೂ ಸಾಫ್ಟ್ ಕಾರ್ನರ್, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಬಗ್ಗೆ ಏನ್ ಮಾತಾಡಿದ್ರು. ಸಂಪೂರ್ಣವಾಗಿ ಇಸ್ಲಾಂಮಿಕ್ ಮತಾಂಧತೆಯ ಶಕ್ತಿಗಳನ್ನು ಸಪೋರ್ಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಇಸ್ಲಾಮಿಕ್ ಮತಾಂಧ ಶಕ್ತಿಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.