ದಕ್ಷಿಣಕನ್ನಡ: ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲ ವಿವೇಕಾನಂದ ಅಂಗ್ಲ ಮಾದ್ಯಮ ಶಾಲೆಯ ಕ್ಯಾಂಪಸ್ ನಲ್ಲಿ ಆರಂಭಗೊಂಡಿದೆ.
ಅಕ್ಟೋಬರ್ 16 ರಿಂದ 19 ರವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿ ದೇಶದ 11ಕ್ಷೇತ್ರಗಳ ಬಾಲ, ಕಿಶೋರ, ತರುಣ ವರ್ಗದಲ್ಲಿ ವಿಜೇತ ಸುಮಾರು 700 ಸ್ಪರ್ಧಾಳುಗಳು, 100 ಮಂದಿ ಅಧಿಕಾರಿ ವರ್ಗ ಭಾಗವಹಿಸಲಿದೆ.
ಅಖಿಲ ಭಾರತೀಯ ಶೈಕ್ಷಣಿಕ ಸಂಘಟನೆಯಾದ ವಿದ್ಯಾಭಾರತಿ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಕಿಂತನೆಯನ್ನು ಹೊಂದಿದೆ. ವಿದ್ಯಾಭಾರತಿ ವ್ಯಾಪ್ತಿಯಲ್ಲಿ ದೇಶಾದ್ಯಂತ ಸುಮಾರು 25 ಸಾವಿರ ಶಾಲೆಗಳಿದ್ದು, 35 ಲಕ್ಷ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸುಮಾರು 26 ಕ್ರೀಡೆಗಳನ್ನು ವಿದ್ಯಾಭಾರತಿ ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿ ಪುತ್ತೂರು ವಿವೇಕಾನಂದ ಶಾಲೆಗೆ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸುವ ಅವಕಾಶ ದೊರೆತಿದೆ.
ಪಂದ್ಯಾಟವನ್ನು ಯಾವುದೇ ಗೊಂದಲ ಮತ್ತು ಸಮಯದ ಪರಿಪಾಲನೆಗಾಗಿ ತೆಂಕಿಲ ಮೈದಾನದಲ್ಲಿ 6 ಕ್ರೀಡಾಂಗಣಗಳನ್ನು ಅತ್ಯುತ್ತಮವಾಗಿ ನಿರ್ಮಿಸಲಾಗಿದೆ. 2 ಕ್ರೀಡಾಂಗಣಗಳಿಗೆ ಹೊನಲು ಬೆಳಕಿನ ವ್ಯವಸ್ಥೆಯನ್ನು ಜೋಡಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗವಾಗಿರುವ ವಿದ್ಯಾಭಾರತಿ ತನ್ನ ಅಧೀನಕ್ಕೆ ಬರುವ ಎಲ್ಲಾ ಶಾಲೆಗಳನ್ನು ಸೇರಿಸಿಕೊಂಡು ಈ ರೀತಿಯ ಕ್ರೀಡೆಗಳನ್ನು ನಡೆಸಿಕೊಂಡು ಬರುತ್ತಿದೆ. ವಾಲಿಬಾಲ್ ನಲ್ಲಿ ಅತ್ಯಂತ ಪ್ರತಿಭಾವಂತ ಆಟಗಾರರು ಈ ಪಂದ್ಯಾಟದಲ್ಲಿ ಮೂಡಿಬರುತ್ತಿದ್ದು, ಒಲಿಂಪಿಕ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ವಿದ್ಯಾಭಾರತಿ ವಿದ್ಯಾಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ. ಜಾವಲಿನ್ ತ್ರೋದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಛೋಪ್ರಾ ಕೂಡಾ ಇದೇ ವಿದ್ಯಾಭಾರತಿಯ ವಿದ್ಯಾರ್ಥಿಯಾಗಿದ್ದರು ಎನ್ನುವುದು ಗಮನಾರ್ಹ..