ಸೋಶಿಯಲ್ ಮೀಡಿಯಾದಲ್ಲಿ ವಕ್ಫ್ ಭೂಮಿ ವಿವಾದದ ಕುರಿತು ಮುಖ್ಯಮಂತ್ರಿಗಳನ್ನು ಹೀಯಾಳಿಸಿದ ಸರಕಾರಿ ಅಧಿಕಾರಿ..ಉನ್ನತ ಅಧಿಕಾರಿಗಳ ದಿವ್ಯ ಮೌನ…ಕಾಂಗ್ರೇಸಿಗರು ಗರಮ್..
ಪುತ್ತೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬಹು ಚರ್ಚೆಯ ವಿಷಯವಾಗಿರುವ ವಕ್ಫ್ ಭೂ ವಿವರವಾದ ಕುರಿತಾಗಿ ಉಪ್ಪಿನಂಗಡಿಯ ಸರಕಾರಿ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ ಎನ್ನುವುದು ವಿವಾದ ಎಬ್ಬಿಸಿದೆ.ಸರಕಾರಿ ಅಧಿಕಾರಿಯು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಹಿಯಾಳಿಸಿ ಬರೆದ ಸಂದೇಶವನ್ನು ವಾಟ್ಸಾಪ್ ಗ್ರೂಪಿನಲ್ಲಿ ಹಂಚಿದ್ದಾರೆ ಎನ್ನಲಾಗಿದೆ. ಪಹಣಿಯ ಸ್ಕ್ರೀನ್ ಶಾಟ್ ಚಿತ್ರವನ್ನು ಹಾಕಿ ಅದರಲ್ಲಿ ತಾವು ಕುರುಬರು, ಹಿಂದುಳಿದ,ತುಳಿತಕ್ಕೊಳಗಾದ ಸಮುದಾಯ, ಅಹಿಂದ ರಕ್ಷಕ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ಕುರುಡಾಗಿ ಬೆಂಬಲಿಸುವ ಅಭಿಮಾನಿಗಳೇ,ಈಗ ಕುರುಬ ಕುಲದೈವ ಬೀರದೇವ ಗುಡಿಯೂ ವಕ್ಫ್ ಆಸ್ತಿಯಂತೆ..!ಈಗಲಾದರೂ ವಕ್ಫ್ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸುತ್ತಿರೋ ಅಥವಾ ಇನ್ನೂ ಅವರನ್ನೇ ಬೆಂಬಲಿಸುವಿರೋ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ಉಪ್ಪಿನಂಗಡಿಯ ಸರಕಾರಿ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವುದು….ಆರೋಪ ವಾಗಿದ್ದು., ಉನ್ನತ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದು.., ಇದು ಸಿದ್ದಾರಾಮಯ್ಯ ಅಭಿಮಾನಿಗಳನ್ನು ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ.