ಆತ್ಮೀಯ ಕಂಬಳಾಭಿಮಾನಿಗಳೇ,
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಐದು ದಿನಗಳ ಕಾಲ ವಿಪರೀತ ಮಳೆಯಾಗುವ ಕಾರಣದಿಂದ ದಿನಾಂಕ 07.12.2024 ರ ಶನಿವಾರ ಜರಗಲಿರುವ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ ವಿಕ್ರಮ ಜೋಡುಕರೆ ಕಂಬಳವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಅತೀ ಶೀಘ್ರದಲ್ಲಿ ಪ್ರಕಟಿಸಲಿದೆ.ಕಂಬಳ ಕೋಣದ ಯಜಮಾನರು,ತೀರ್ಪುಗಾರರು, ಮತ್ತು ಕಂಬಳಾಭಿಮಾನಿಗಳು ಸಹಕರಿಸುವಂತೆ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಅಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ ವಿನಂತಿಸಿದ್ದಾರೆ.