ಮಂಗಳೂರು: ಪವಿತ್ರ ಯಾತ್ರಾ ಕೇಂದ್ರವಾದ ಧರ್ಮಸ್ಥಳದಲ್ಲಿ ಶವ ಹೂತ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ಈಗಾಗಲೇ ಸರ್ಕಾರ ಈ ಪ್ರಕರಣ ಭೇದಿಸಲು ಎಸ್ಐಟಿ (SIT) ರಚನೆ ಮಾಡಿದ್ದು, ಎಸ್ಐಟಿ ತಂಡ ನಿರಂತರವಾಗಿ ತನಿಖೆ ಮಾಡುತ್ತಿದೆ. ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ತನಿಖೆಗೆ ಇಳಿದಿದೆ. ಧರ್ಮಸ್ಥಳದ ಆಘಾತಕಾರಿ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ NHRC ತಂಡ ತನಿಖೆ ಮಾಡಲು ಮುಂದಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ ತಂಡ ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಭೇಟಿ ನೀಡಲಿದ್ದು, ಪ್ರಕರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಲಿದೆ. ಈ ಭೇಟಿಯು ಧರ್ಮಸ್ಥಳದ ಶವ ಹೂತ ಆರೋಪಗಳ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ಮಹತ್ವದ ಕ್ರಮವಾಗಿದೆ. 38 ವರ್ಷಗಳ ಹಿಂದೆ (1987) ನಡೆದ ಪದ್ಮಲತಾ ಅವರ ಅಸಹಜ ಸಾವಿನ ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ, ಅವರ ಸಹೋದರಿ ಇಂದ್ರಾವತಿ ಅವರು ಎಸ್‌ಐಟಿ ಕಚೇರಿಗೆ ದೂರು ಸಲ್ಲಿಸಲು ಆಗಮಿಸಿದ್ದಾರೆ....
ಧರ್ಮಸ್ಥಳ ಹಾಗೂ ಉಜಿರೆ ವ್ಯಾಪ್ತಿಯಲ್ಲಿ ಎಸ್ಐಟಿ ನಡೆಸುತ್ತಿರುವ ತನಿಖೆ ಬಗ್ಗೆ ವರದಿ ಮಾಡಲು ತೆರಳಿದ್ದ ವಿವಿಧ ಡಿಜಿಟಲ್ ಮಾಧ್ಯಮ ಮತ್ತು ಸ್ಯಾಟಲೈಟ್ ಮಾಧ್ಯಮಗಳ ವರದಿಗಾರ ಮತ್ತು ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಈ ಗುಂಪು ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು...
ಧರ್ಮಸ್ಥಳ, ಆ. 6: ವರದಿಗೆ ತೆರಳಿದ್ದ ಮೂವರು ಯೂಟ್ಯೂಬರ್ಗಳ ಮೇಲೆ 50ಕ್ಕೂ ಹೆಚ್ಚು ಜನರ ಗುಂಪೊಂದು ಭಾನುವಾರ ಇಲ್ಲಿನ ಧರ್ಮಸ್ಥಳ-ಪಾಂಗಾಳ ರಸ್ತೆ ಸಮೀಪ ಮಾರಣಾಂತಿಕ ಹಲ್ಲೆ ನಡೆಸಿದೆ ಬಗೆ ವರದಿಯಾಗಿದೆ. ಹಲ್ಲೆಯಿಂದ ಗಾಯಗೊಂಡ ಯೂಟ್ಯೂಬರ್ಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಸಂಚಾರಿ...
ಧರ್ಮಸ್ಥಳದ ಆರಣ್ಯ ಭಾಗಗಳಲ್ಲಿ ಶವ ಹೂತಿಡಲಾಗಿದೆ ಎನ್ನುವ ಕೇಸ್ ಇದೀಗ ಭಾರೀ ಸಂಚಲನ ಮೂಡಿಸಿದೆ. ಎಸ್ಐಟಿ ಈ ಬಗ್ಗೆ ತನಿಖೆ ಕೂಡ ನಡೆಸುತ್ತಿದೆ. ಇದೀಗ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೊಸ ಆರೋಪ ಮಾಡಿದ್ದಾರೆ....
ಬೆಳ್ತಂಗಡಿ: ಬಹುಚರ್ಚಿತ ಧರ್ಮಸ್ಥಳ ಶವಗಳನ್ನು ಹೂತಿಟ್ಟ ಶೋಧಕಾರ್ಯ ಪ್ರಕರಣದಲ್ಲಿ ಸಹಾಯಕ ಆಯುಕ್ತೆ (ಎಸಿ) ಸ್ಟೆಲ್ಲಾ ವರ್ಗೀಸ್ ಹಾಗೂ ವಿಶೇಷ ತನಿಖಾ ತಂಡ (ಎಸ್ಐಟಿ) ನಡುವಿನ ಗೊಂದಲ ಮತ್ತೊಮ್ಮೆ ಬೆಳಕಿಗೆ ಬಂದಿದೆ. ನಿನ್ನೆ ಶೋಧಕಾರ್ಯಕ್ಕಾಗಿ ನಿಗದಿಪಡಿಸಿದ 11ನೇ ಪಾಯಿಂಟ್ ಬಿಟ್ಟು, ಪುತ್ತೂರು ಉಪ ವಿಭಾಗ...
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಅನಾಮಿಕನ ದೂರಿನ ಮೇರೆಗೆ ಉತ್ಖನನ ಕಾರ್ಯ ನಡೆಯುತ್ತಿದ್ದು ಇಂದು ಬಂಗ್ಲಗುಡ್ಡದಲ್ಲಿ ನಡೆಯುತ್ತಿರುವ ಈ ಉತ್ಖನನ ಕಾರ್ಯವು ಊಟದ ಬ್ರೇಕ್ ಇಲ್ಲದೆ ತೀವ್ರಗತಿಯಲ್ಲಿ ನಡೆಯುತ್ತಿದೆ, ಕಾಡಿನಲ್ಲಿ ಕೆಲವು ಅಸ್ಥಿಪಂಜರದ ಭಾಗಗಳು ಮತ್ತು ಮೂಳೆಗಳು ಸಿಕ್ಕಿರುವುದು ತನಿಖೆಗೆ...
ಬೆಳ್ತಂಗಡಿ : ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಶೋಧ ಕಾರ್ಯ ಹಾಗೂ ತನಿಖೆ ತೀವ್ರಗೊಂಡಿದೆ. ಒಂದೆಡೆ, ದೂರುದಾರ ತಿಳಿಸಿರುವ ಸ್ಥಳಗಳಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದರೆ, ಮತ್ತೊಂದೆಡೆ, 1995 ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್...
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಪುದುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂರುದ್ರ ಭೂಮಿಯನ್ನು ನಿರ್ಮಿಸಿದ್ದು ಸಿಲಿಕಾನ್ ಚೇಂಬರ್ ಅಳವಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ,151630 ಮೊತ್ತದ...
ಪುತ್ತೂರು: ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ, ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಇದರ ಆಗಮ ಘಟಿಕೋತ್ಸವ 19-07-2025 ರಂದು ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಏಳು ಆಗಮ...
ಧರ್ಮಸ್ಥಳ: ಧರ್ಮಸ್ಥಳದ ಸ್ನಾನಘಟ್ಟವನ್ನು ಅಪವಿತ್ರಗೊಳಿಸಲು ಕೆಲ ಕಿಡಿಗೇಡಿಗಳು ಪ್ರಯತ್ನ ನಡೆಸಿದ್ದಾರೆ. ನೇತ್ರಾವತಿ ನದಿಯನ್ನು ಸೇರುವ ಚಾರ್ಮಾಡಿಯ ಮೃತ್ಯುಂಜಯ ನದಿಗೆ ಕಿಡಿಗೇಡಿಗಳು ಗೋಮಾಂಸದ ತ್ಯಾಜ್ಯವನ್ನು ಸುರಿದಿದ್ದಾರೆ. ನದಿಯಲ್ಲಿ ದನದ ಚರ್ಮ, ಕೊಂಬು, ಇತ್ಯಾದಿ ತ್ಯಾಜ್ಯ ಹೊಂದಿರುವ 11 ಗೋಣಿಗಳು ಪತ್ತೆಯಾಗಿದೆ ನೇತ್ರಾವತಿ ನದಿ...