ಮಂಗಳೂರು: ತಾಪಮಾನ ಹೆಚ್ಚಳದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನರು ಬಿಸಿಯಾದ ಪಾನೀಯಗಳಿಗಿಂತ ತಂಪಾದ ಪಾನೀಯಗಳಿಗೆ ಹೆಚ್ಚಾಗಿ ಮೊರೆಹೋಗಿದ್ದಾರೆ. ಆದರೆ, ಮದ್ಯಪ್ರಿಯರು ಬಿಯರ್ ಮೊರೆ ಹೋಗುತ್ತಿರುವುದು ಕಂಡುಬಂದಿದೆ. ಬೇಸಿಗೆ ಸಮಯದಲ್ಲಿ ಕರ್ನಾಟಕದಲ್ಲಿ ಬಿಯರ್ ಮಾರಾಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅತಿ ಹೆಚ್ಚು ಬಿಯರ್ ಮಾರಾಟವಾಗಿರುವುದು ವರದಿಯಾಗಿದೆ.
ಬೇಸಿಗೆಯ ಬಿರುಸಿನ ತಾಪಮಾನದಿಂದ ಕರ್ನಾಟಕದಲ್ಲಿ ಬಿಯರ್ ಹೆಚ್ಚಾಗಿ ಮಾರಾಟವಾಗುತ್ತಿದೆ. ಬಿಸಿಲಿನ ಶೆಕೆ ತಾಳಲಾರದೆ ಮದ್ಯಪ್ರಿಯರು ಮದ್ಯದಂಗಡಿಗಳತ್ತ ಮುಖ ಮಾಡುತ್ತಿದ್ದಾರೆ.
ಕಳೆದ 15 ದಿನಗಳಲ್ಲಿ ಕರ್ನಾಟಕದಲ್ಲಿ 23.5 ಲಕ್ಷ ಕರ್ಟನ್ ಬಾಕ್ಸ್‌ಗಳಷ್ಟು ಬಿಯರ್ ಮಾರಾಟವಾಗಿದ್ದು, ಬೆಂಗಳೂರಿನಲ್ಲಿ ಹೆಚ್ಚಾಗಿ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
2023 ರ ಏಪ್ರಿಲ್ ತಿಂಗಳಲ್ಲಿ 38.6 ಲಕ್ಷ ಕರ್ಟನ್ ಬಾಕ್ಸ್‌ಗಳಷ್ಟು ಬಿಯರ್ ಮಾರಾಟವಾಗಿದ್ದರೆ, ಈ ವರ್ಷದ ಏಪ್ರಿಲ್ ಮೊದಲ ಎರಡು ವಾರಗಳಲ್ಲಿ 23.5 ಲಕ್ಷ ಕರ್ಟನ್ ಬಾಕ್ಸ್‌ಗಳಷ್ಟು ಬಿಯರ್ ಮಾರಾಟವಾಗಿದೆ. 2023ರ ಏಪ್ರಿಲ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಈಗಾಗಲೇ ಶೇ.61 ರಷ್ಟು ಬಿಯರ್ ಮಾರಾಟವಾಗಿದೆ.
ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್ ಮಾರಾಟ ಕುಸಿತ ಕಂಡಿತ್ತು. ಕಳೆದ ವರ್ಷದ ಬೇಸಿಗೆಗೆ ಹೋಲಿಸಿದರೆ, ಈ ವರ್ಷದಲ್ಲಿ ಶೇ.30ರಷ್ಟು ಮಾರಾಟ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ನಲ್ಲಿನ ಅಸಾಧಾರಣವಾದ ಬಿಸಿ ವಾತಾವರಣವು ಬಿಯರ್ ಮಾರಾಟದ ಹೆಚ್ಚಳಕ್ಕೆ ಕಾರಣವಾಗಿದೆ.
ಎರಡು ವಾರಗಳಲ್ಲೇ ಕಳೆದ ಮೂರು ವರ್ಷಗಳ ದಾಖಲೆಯನ್ನು ಈ ವರ್ಷ ಮುರಿದಿದೆ. ಅಬಕಾರಿ ಇಲಾಖೆ ಮಾಹಿತಿಗಳ ಪ್ರಕಾರ ಈ ಏಪ್ರಿಲ್‌ನ ಮೊದಲ 11 ದಿನಗಳಲ್ಲಿ ನಾನಾ ಬ್ರಾಂಡ್‌ಗಳ 27 ಲಕ್ಷಕ್ಕೂ ಹೆಚ್ಚು ಬಿಯರ್ ಬಾಟಲ್‌ಗಳು ಮಾರಾಟವಾಗಿದೆ. ಅಂದರೆ, 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಸದ್ಯ ಅಗತ್ಯ ಇರುವಷ್ಟು ಬಿಯರ್ ಸಂಗ್ರಹ ಅಬಕಾರಿ ಇಲಾಖೆಯ ಬಳಿ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
2021ರಲ್ಲಿ 8.83 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದರೆ, 2022ರಲ್ಲಿ 9.20 ಲಕ್ಷ ಲೀ. ಬಿಯರ್ ಮತ್ತು 2023ರಲ್ಲಿ 4.52 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
”ಕಳೆದ ಏಪ್ರಿಲ್‌ನಲ್ಲಿ 38.6 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ ತಿಂಗಳ ಮೊದಲ ಎರಡು ವಾರಗಳಲ್ಲಿ 23.5 ಲಕ್ಷ ಬಾಕ್ಸ್‌ಗಳು ಮಾರಾಟವಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬೇಸಿಗೆಯಲ್ಲಿ ಇಲ್ಲಿಯವರೆಗೆ ನಾವು 30% ಹೆಚ್ಚು ಮಾರಾಟವನ್ನು ದಾಖಲಿಸಿದ್ದೇವೆ” ಎಂದು ಅಬಕಾರಿ ಇಲಾಖೆಯ ಅಧಿಕಾರಿ ತಿಳಿಸಿದರು.
ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ತಣ್ಣಗಾಗಲು ಬಿಯರ್ ಕುಡಿಯುವುದು ಮದ್ಯಪ್ರಿಯರ ಆದ್ಯತೆಯ ವಿಧಾನವಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಈ ಬೇಸಿಗೆಯ ಬಿಸಿಲಿನ ತಾಪವು ಲೋಕಸಭೆ ಚುನಾವಣೆಯೊಂದಿಗೆ ಸೇರಿಕೊಳ್ಳುವುದರಿಂದ ತಂಪಾದ ಪಾನೀಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಏಪ್ರಿಲ್ ದೇಶದ ಬಹುತೇಕ ಪ್ರದೇಶಗಳಲ್ಲಿ, ವಿಶೇಷವಾಗಿ ಮಧ್ಯ ಮತ್ತು ದಕ್ಷಿಣ ಭಾರತದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನವಿರುವ ನಿರೀಕ್ಷೆಯಿದೆ.
ಈ ವರ್ಷದ ಬಜೆಟ್‌ನಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಲಾಗಿದೆ. ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ₹10 ರಿಂದ ₹15 ಹೆಚ್ಚಳವಾಗಿದೆ. ಕಳೆದ 7 ತಿಂಗಳಲ್ಲಿ ಮೂರು ಬಾರಿ ಬಿಯರ್ ಬೆಲೆ ₹40 ಹೆಚ್ಚಾಗಿದೆ. ಮದ್ಯ ಮಾರಾಟದಿಂದ ಈ ವರ್ಷ ರಾಜ್ಯ ಸರ್ಕಾರ ₹36 ಸಾವಿರ ಕೋಟಿ ಆದಾಯ ನಿರೀಕ್ಷಿಸಿದೆ. ಆರಂಭದಲ್ಲಿಯೇ ಉತ್ತಮ ಮಾರಾಟ ಕಂಡು ಬಂದಿರುವುದರಿಂದ ಆದಾಯ ಹೆಚ್ಚುವ ನಿರೀಕ್ಷೆಯಂತೂ ಇದೆ ಎನ್ನಲಾಗುತ್ತಿದೆ.