ಹಿಳೆಯೊಬ್ಬಳು ಬಿಕಿನಿ ತೊಟ್ಟು ಬಸ್ನಲ್ಲಿ ಪ್ರಯಾಣಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಜನ ಸಂದಣಿಯಿಂದ ಕೂಡಿದ್ದ ಡಿಟಿಸಿ ಬಸ್ ಅನ್ನು ಮಹಿಳೆಯೊಬ್ಬಳು ಹತ್ತಿದ್ದು, ಆಕೆಯನ್ನ ಕಂಡು ಬಸ್ನಲ್ಲಿದ್ದವರು ಶಾಕ್ ಆಗಿದ್ದಾರೆ.
ಬಸ್ ನಲ್ಲಿ ಸಂಚರಿಸುತ್ತಿದ್ದ ಮತ್ತೊಬ್ಬ ಮಹಿಳೆಯ ಜೊತೆ ಈಕೆ ಕಿರಿಕ್ ಮಾಡಿಕೊಂಡಿದ್ದು, ಕೆಲಕಾಲ ಬಸ್ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆಯ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಬಿಕಿನಿ ಧರಿಸಿ ಬಸ್ ಏರಿದ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ. ಸದ್ಯ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವರ್ತನೆ ಹದಗೆಡುತ್ತಿದೆ. ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿ ಕಾಣುತ್ತಿದೆ. ಇವೆಲ್ಲದಕ್ಕೆ ಕಠಿಣ ಕಾನೂನು ಮತ್ತು ಶಿಕ್ಷೆ ವಿಧಿಸಿದರೆ ಇಂತಹ ಘಟನೆ ಮರುಕಳಿಸಲು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
A girl in bikini entered @dtchq_delhi cluster bus. Passengers and conductor shocked. @DimtsLtd pic.twitter.com/gTRNFdlN0w
— Sachin Bharadwaj (@sbgreen17) April 17, 2024