ಪುತ್ತೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮಕ್ಕೆ ಪುತ್ತೂರಿನ ಸಂಸಾರ ಕಲಾವಿದೆರ್ ತಂಡದ ವೈರಲ್ ಸ್ಟಾರ್ ಖ್ಯಾತಿಯ ಗಣರಾಜ್ ಭಂಡಾರಿ ಆಯ್ಕೆಯಾಗಿದ್ದಾರೆ.
15 ವರ್ಷಗಳ ಹಿಂದೆ ನಾಗೇಶ್ ಬಲ್ನಾಡು ನಿರ್ದೇಶನದ ಸೂಪರ್ ಹಿಟ್ ನಾಟಕ “ಮಲ್ಲಕ್ಕನ ಇಲ್ಲೊಕ್ಕೆಲ್” ಮೂಲಕ ರಂಗಪ್ರವೇಶ ಮಾಡಿದ ಗಣರಾಜ್ ಅವರು ಬದ್ಕೆರೆ ಕಲ್ಪಿ, ಊರುಗೊರಿ ವಿಶ್ವನಾಥೆ, ಮಗೆ ಮಲ್ಲಯೆ, ಒವುಲಾ ಒರಿಯುಜಿ, ಸತ್ಯನಾ ಭಕ್ತಿ, ತಪ್ಪು ಎನ್ನೊಡ್ಚಿ, ಭಾಗ್ಯ ಬೋಡು ಅಲ್ಲದೆ ಈ ವರ್ಷದ ಸೂಪರ್ ಹಿಟ್ ಯಶಸ್ವಿ ನಾಟಕ ನಂಬಿಕೆದಾಯೆ ನಾಟಕಗಳಲ್ಲಿ ಪ್ರಮುಖ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಮಂಗಳೂರಿನ 150 ಸ್ಪರ್ಧಿಗಳ ಪೈಕಿ ಆಯ್ಕೆಯಾದ ಇಬ್ಬರಲ್ಲಿ ಓರ್ವರಾದ ಗಣರಾಜ್ ಭಂಡಾರಿಯವರು ಕರ್ನಾಟಕದ 2,500ಕ್ಕು ಮಿಕ್ಕಿ ಸ್ಪರ್ಧಿಗಳ ಮೂರು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 10 ನಟರಲ್ಲಿ ಒಬ್ಬರು.
ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀನಿಧಿ ಸೆಲೂನ್’ನಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿರುವ ಇವರು ತನ್ನ ಸ್ವಂತ ರೀಲ್ಸ್ ಪೇಜ್’ನಲ್ಲಿ 25 ಸಾವಿರ ಕ್ಕು ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಬನ್ನೂರು ನಿವಾಸಿ ವಸಂತ ಭಂಡಾರಿ ಮತ್ತು ಕುಮುದಾಕ್ಷಿ ಭಂಡಾರಿ ಅವರ ಪುತ್ರನಾಗಿರುವ ಗಣರಾಜ್ ಅವರು ಮಹೇಶ್ ಭಂಡಾರಿ ಅವರ ಹಿರಿಯ ಸಹೋದರ.