ಉತ್ತರ ಪ್ರದೇಶ: ಬಸ್ತಿ ನಿವಾಸಿ ಮುಸ್ಲಿಂ ಯುವಕನೋರ್ವನು ತನ್ನ ಪ್ರಿಯತಮೆಗಾಗಿ ತನ್ನ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮತಾಂತರವಾದ ವರ ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಾಯಿಸಿಕೊಂಡಿದ್ದಾರೆ.
ತನ್ನ ಪ್ರಿಯತಮೆ ಅನು ಸೋನಿಯನ್ನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೀಗ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದಕ್ಕೂ 3 ದಿನಗಳ ಮಹಿಳೆಯು ಸದ್ದಾಂ ಮತ್ತು ಆತನ ಕುಟುಂಬದ ವಿರುದ್ಧ ಮದುವೆ ನೆಪದಲ್ಲಿ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಳು. ಅದಾಗಿಯೂ ಈ ಜೋಡಿಯು ಪರಸ್ಪರ ಒಪ್ಪಿಗೆಯೊಂದಿಗೆ ಜ. 19 ಕ್ಕೆ ವಿವಾಹವಾಗಿದ್ದಾರೆ.
ನಂತರ ಮಹಿಳೆಯು ತಾನು ನೀಡಿದ ಕೇಸನ್ನು ವಾಪಾಸು ಪಡೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.