ಕೇರಳದಲ್ಲಿ ಎರಡು ದಿನಗಳ ಹಿಂದೆ ಮಹಿಳೆಯೊಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿ ಶವವಾಗಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆ, ಕಿವಿಯೋಲೆ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಾಫಿ ಬೀಜ ಸಂಗ್ರಹಿಸಲು ತೆರಳಿದ್ದ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿದೆ
ನಾಲ್ಕರಿಂದ ಐದು ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೋಮವಾರ ಬೆಳಗ್ಗೆ ವನ್ಯಜೀವಿ ಸಿಬ್ಬಂದಿಯ ತಂಡ ಗುರುತಿಸಿ ಬೆನ್ನಟ್ಟಿದ್ದು, ನಂತರ ಪಿಲಕಾವುವಿನ ಜನನಿಬಿಡ ಪ್ರದೇಶದ ಮನೆಯೊಂದರ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ. , ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಅರಣ್ಯ ಅಧಿಕಾರಿಗಳು ಹುಲಿಯ ಕುತ್ತಿಗೆಯಲ್ಲಿ ಹೊಸತಾದ ಮತ್ತು ಆಳವಾದ ಗಾಯಗಳು ಪತ್ತೆಯಾಗಿದ್ದು ಅದು ಸಾವಿಗೆ ಕಾರಣವಾಯಿತು ಎಂದು ಹೇಳಿದರು.
ಕಾಡಿನಲ್ಲಿ ಮತ್ತೊಂದು ಹುಲಿಯೊಂದಿಗೆ ಕಾದಾಟದ ಸಂದರ್ಭದಲ್ಲಿ ಈ ಗಾಯಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಶನಿವಾರ ಪಂಚರಕೋಲಿ ಪ್ರದೇಶದಲ್ಲಿ ರಾಧಾ ಎಂಬ ಮಹಿಳೆಯನ್ನು ಕೊಂದಿದ್ದು ಇದೇ ಹುಲಿ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕೂದಲು, ಬಟ್ಟೆ ಮತ್ತು ಕಿವಿಯೋಲೆಗಳು ಅದರ ಹೊಟ್ಟೆಯಲ್ಲಿ ಪತ್ತೆಯಾಗಿವೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಮಹಿಳೆಯ ಸಾವು ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ಭಾನುವಾರ ರಾಜ್ಯ ಸರ್ಕಾರವು ಹುಲಿಯನ್ನು ‘ನರಭಕ್ಷಕ’ ಎಂದು ಘೋಷಿಸಲು ಮತ್ತು ಅದನ್ನು ಕೊಲ್ಲಲು ಆದೇಶಿಸುವಂತೆ ಒತ್ತಾಯಿಸಲಾಯಿತು. ಕರ್ನಾಟಕದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ವಯನಾಡು ಜಿಲ್ಲೆಯಲ್ಲಿ ಹುಲಿ ಗದ್ದಲ ಮೂರು ದಿನದಿಂದ ಜೋರಾಗಿದೆ.
ಕರ್ನಾಟಕದ ನಾಗರಹೊಳೆ, ಬಂಡೀಪುರ, ಕೇರಳದ ವಯನಾಡು ಹಾಗೂ ತಮಿಳುನಾಡಿನ ಮದುಮಲೈ ಹುಲಿಧಾಮಗಳ ಹೊಂದಿಕೊಂಡಂತೆ ಇರುವುದರಿಂದ ಈ ಪ್ರದೇಶಗಳಲ್ಲಿ ಹುಲಿ ಸಂಖ್ಯೆ ಹೆಚ್ಚಿದೆ.