ಪುತ್ತೂರು: ದಿನಾಂಕ 8ನೇ ಫೆಬ್ರವರಿ 2025 ಶನಿವಾರದಂದು ಪುತ್ತೂರು ಕ್ಲಬ್ ನಲ್ಲಿ ಸೌಲಭ್ಯಗಳ ಉದ್ಘಾಟನೆಯಾಗಲಿದೆ ಎಂದು ಅಧ್ಯಕ್ಷರಾದ ಡಾ. ದೀಪಕ್ ರೈ ಪತ್ರಿಕಾಗೋಷ್ಠಿ ಹೇಳಿದರು. 2012 ರಲ್ಲಿ ಸ್ಥಾಪಿತವಾದ ಪುತ್ತೂರು ಕ್ಲಬ್ ಕಳೆದ ಒಂದು ದಶಕದಲ್ಲಿ ಸಮಾಜದ ವಿಶಾಲ ವಿಭಾಗದಿಂದ ತನ್ನ ಸದಸ್ಯರಿಗೆ ವಿವಿಧ ಕ್ರೀಡೆ,ಗೇಮಿಂಗ್ ಮತ್ತು ಮನೋರಂಜನಾ ಸೌಲಭ್ಯಗಳನ್ನು ಒದಗಿಸಲು ಮಹತ್ತರವಾಗಿ ಬೆಳೆದಿದೆ
ಸಂಸ್ಥಾಪಕ ಅಧ್ಯಕ್ಷರಾದ ಡಾ ದೀಪಕ್ RAI ಅವರ ಬೈನ್ ಚೈಲ್ಡ್ ದೀಪಕ್ ಕೆ.ಪಿ, ಇವಾನ್ ಆಸ್ಕರ್ ಸುನೀತಾ, ಗಣೇಶ್ ಕಾಮತ್, ರೂಪೇಶ್ ಶೇಟ್ ಮತ್ತು ಸಚ್ಚಿದಾನಂದ ಎಂಬ ಪ್ರವರ್ತಕರ ಬೆಂಬಲದೊಂದಿಗೆ 2012 ರಲ್ಲಿ ಪ್ರಾರಂಭಗೊಂಡು
2014 ರ DEC 27 ರಂದು 65 ಪೋಷಕ ಸದಸ್ಯರು 300 ಸದಸ್ಯರೊಂದಿಗೆ ಅಧಿಕೃತವಾಗಿ ನೋಂದಣಿಗೊಂಡಿತು.
ಒಂದು ಬ್ಯಾಡ್ಮಿಂಟನ್ ಕೋರ್ಟ್, 2 ಕೊಠಡಿಗಳು, ಸ್ಕೂಕರ್ ಟೇಬಲ್, ಟೇಬಲ್ ಟೆನ್ನಿಸ್ ಮತ್ತು ರೆಸ್ಟೋರೆಂಟ್‌ನೊಂದಿಗೆ ಪ್ರಾರಂಭಗೊಂಡು 2016 ರಲ್ಲಿ 150 ಸದಸ್ಯರಿಗೆ ಅವಕಾಶವುಳ್ಳ ರೆಸ್ಟೋರೆಂಟ್ ವಿಸ್ತರಣೆಯಾಯಿತು.
ಹಾಗೂ 2017 ರಲ್ಲಿ ಬಾರ್ ಪರವಾನಗಿಯನ್ನು ಪಡೆದುಕೊಂಡಿದೆ.
2021 ರಲ್ಲಿ ಈಜುಕೊಳದ ನಿರ್ಮಾಣ, ಪಾರ್ಟಿಗಳಿಗೆ ಲಾನ್ 2022 ರಲ್ಲಿ 2 ಎಕ್ಸಿಕ್ಯೂಟಿವ್ ಕ್ಲಬ್ ಕ್ಲಾಸ್ ಕೊಠಡಿಗಳ ಸೇರ್ಪಡೆ, ಆಕರ್ಷಕ ಸ್ವಾಗತ ಲಾಬಿ ಗೆಜಿಟೋ ಮತ್ತು ನಿರ್ಮಾಣ,ದಾಖಲೆ 30000 ಚದರ ಅಡಿ ವಿಸ್ತೀರ್ಣದಲ್ಲಿ ಅಭಿವೃದ್ಧಿಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ.10 ಡಿಲಕ್ಸ್ ರೂಮ್‌ಗಳು ಮತ್ತು 2 ಸೂಟ್ ರೂಮ್‌ಗಳು 8ನೇ ಫೆಬ್ರವರಿ 2025 ರಂದು ಉದ್ಘಾಟನೆ ಗೊಳ್ಳಲಿದೆ.2400 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಜಿಎಂ ಸದಸ್ಯರ ವಿಲೇವಾರಿಯಲ್ಲಿ,ದಕ್ಷಿಣ ಕನ್ನಡ ಜಿಲ್ಲೆಯಲೇ ಪ್ರಪ್ರಥಮವಾಗಿ, 7200 ಚದರ ಅಡಿಗಳಲ್ಲಿ ನಿರ್ಮಾಣಗೊಂಡು ಎಂಟು ಪದರಗಳ ಯುಎಸ್ ಓಪನ್ ಗ್ರಾಂಡ್ ಸ್ಟ್ರಾಮ್ ಕೋರ್ಟ್‌ನ ವಿಶೇಷತೆಗಳುಳ್ಳ ಸಿಂಥೆಟಿಕ್ ಡೆನಿಸ್ ಕೋರ್ಟ್ ಲೋಕಾರ್ಪಣೆ,1000 ಜನರ ಸಾಮರ್ಥ್ಯದ ವಿಶಾಲ ಹಾಲ್, ಸದಸ್ಯರ ಮತ್ತು ಸದಸ್ಯ ಅತಿಥಿಗಳಿಗಾಗಿ,200 ಜನ ಸಾಮರ್ಥ್ಯದ 2400 ಚದರ ಅಡಿಯ ಮತ್ತೊಂದು AC ಹಾಲ್,ಪ್ರಸ್ತುತ 1300 ಸದಸ್ಯರುಗಳುಳ್ಳ ಬೃಹತ್ ಮನೋರಂಜನಾ ಕ್ಲಬ್,ಎಲೆಕ್ನಿಕ್ ವಾಹನಗಳನ್ನು ಹೊಂದಿರುವ ಸದಸ್ಯರಿಗೆ ಎಲೆಕ್ನಿಕ್ ಚಾರ್ಜಿಂಗ್ ಪಾಯಿಂಟ್,99 ಕ್ಲಬ್‌ಗಳ ಗಳುಳ್ಳ ರಾಜ್ಯದಲ್ಲಿ ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಮನೋರಂಜನಾ ಕ್ಲಬ್ಆಗಿದ್ದು,ಪುತ್ತೂರು ಕ್ಲಬ್ ತನ್ನ ಸದಸ್ಯರಿಗೆ ಮೋಟಾರು ವಾಹನಗಳಲ್ಲಿ ಟ್ರೆಷರ್ ಹಂಟ್, ಅಡುಗೆ ಸ್ಪರ್ಧೆಗಳು, Pet Show. BOX ಕ್ರಿಕೆಟ್ ಲೀಗ್, ಲಗೋರಿ, Badminton, ವಾಲಿ ಬಾಲ್ ಪಂದ್ಯಾವಳಿಗಳು ಮತ್ತು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನುಆಯೋಜಿಸುತ್ತಿದೆ. ಸಾಧಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಹಳಷ್ಟು ಮಕ್ಕಳಿಗೆ ಸಹಕಾರ, ಅಂಗನವಾಡಿ ಶಾಲೆಗಳಿಗೆ ಸಮವಸ್ತ್ರ ವಿತರಣೆ, ಕೋವಿಡ್ ಸಮಯದಲ್ಲಿ ಮನೆ ಮನೆಗೆ ತೆರಳಿ ಕಿಟ್ಟನ್ನು ವಿತರಿಸಿದ ಗರಿ, ಅನೇಕ ಶಾಲೆಗಳಿಗೆ ಸಿಸಿಟಿವಿ ಅಳವಡಿಕೆ, FKCCI ಮೂಲಕ ಪುಣ್ಯಕ್ಷೇತ್ರದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಮಕ್ಕಳಿಗೆ ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ತರಬೇತಿ ಹಾಗೂ ಮುಂದಿನ ದಿನಗಳಲ್ಲಿ ಟೆನ್ನಿಸ್ ತರಬೇತಿ ನೀಡುವ ದೃಷ್ಟಿಕೋನ ಸಾಧಕರಿಗೆ ಗೌರವ ಸದಸ್ಯತ್ವ ಕೊಡುಗೆ.
ಅಧ್ಯಕ್ಷರಾದ ಡಾ.ದೀಪಕ್ ರೈ ಉಪಾಧ್ಯಕ್ಷ ದೀಪಕ್ ಕೆ.ಪಿ., ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ಕೋಶಾಧಿಕಾರಿ ಕೆ.ಪಿ.ದಿವಾಕರ್ ಹಾಗೂ ಕ್ಲಬ್ ನ ಎಲ್ಲಾ ಬಿಒಡಿ ಸದಸ್ಯರು ಪುತ್ತೂರಿನ ಜನತೆಗೆ ಅತ್ಯುತ್ತಮ ಮನರಂಜನೆ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಬಗೆಗೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.