ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿದ್ದ ರಾಜೇಶ್ ಬನ್ನೂರು ಅವರಿದ್ದ ಮನೆಯನ್ನು ಫೆ .4 ರ ತಡ ರಾತ್ರಿ ಧ್ವಂಸಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಪುತ್ತೂರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ.ಮನೆ ಧ್ವಂಸಗೊಳಿಸಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಮಹಾಲಿಂಗೇಶ್ವರ ದೇವಾಲಯದ ಕೆರೆಯ ಸಮೀಪದ ಎಲ್ಲಾ ಅಕ್ರಮ ಮನೆಗಳನ್ನು ತೆರವು ಗೊಳಿಸಲಾಗಿದೆ. ತೆರವಿಗೆ ಉಳಿದಿದ್ದ ಒಂದು ಮನೆಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈಯವರ ಕನಸಿನ ಕಾರ್ಯಕ್ರಮವಾದ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ತಯಾರಿಸಿದ ಮಾಸ್ಟರ್ ಪ್ಲಾನ್ ಗೆ ಇದ್ದ ಅಡೆ ತಡೆ ಗಳು ನಿವಾರಣೆ ಯಾದಂತಾಗಿದೆ. ಶಾಸಕರ ಅಭಿವೃದ್ದಿ ಕೆಲಸದ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತ ವಾಗಿದೆ.