ಬೆಳ್ತಂಗಡಿ: ತಾಲೂಕಿನ ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಗುಳಿಗ ದೈವಗಳಿಗೆ ಏಕಕಾಲದಲ್ಲಿ ನಡೆದ ನರ್ತನ ಸೇವೆ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದೆ. ಈ ಅಪರೂಪವಾದ ಸೇವೆ ಕರಾವಳಿಯಲ್ಲೇ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ.
ಸಾಮಾನ್ಯವಾಗಿ, ಕರಾವಳಿ ಪ್ರದೇಶದಲ್ಲಿ ಒಂದೆಡೆಗೆ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ಮಾತ್ರ ನರ್ತನ ಸೇವೆ ನಡೆಯುತ್ತವೆಯಾದರೂ, ಬರ್ಕಜೆಯಲ್ಲೀಗ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗಿದ್ದು, ಇದು ಈ ಪ್ರದೇಶದ ವಿಶೇಷತೆ. ತುಳುನಾಡಿನಾದ್ಯಂತ ಆರಾಧಿಸಲ್ಪಡುವ ಗುಳಿಗ ದೈವಗಳು, ಕ್ಷೇತ್ರಪಾಲಕರಾಗಿ ನೆಲೆಸಿ, ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿನ ನಂಬಿಕೆಗೆ ಭಕ್ತರದ್ದು. ಈ 9 ದೈವಗಳ ರೋಷಾವೇಷ ಭಕ್ತರಿಗೆ ರೋಮಾಂಚಕ ಅನುಭವವನ್ನು ನೀಡಿತ್ತು.
ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ .